ಕುಖ್ಯಾತ ಸರಗಳ್ಳರ ಬಂಧನ.!
ಕಲಬುರಗಿ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕಲಬುರಗಿ ಜಿಲ್ಲೆ ಸೇಡಂ ಮತ್ತು ಸುಲೇಪೇಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಸರಗಳ್ಳಿಯರನ್ನ ಬಂಧಿಸಿದ್ದಾರೆಂದು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ. ಈ ಬಗ್ಗೆ ಕಲಬುರಗಿ ನಗರದಲ್ಲಿ ಮಾತನಾಡಿದ ಅವರು, ಸುಲೇಪೇಟ್ ಪೊಲೀಸರಿಂದ ಕಿ
ಕುಖ್ಯಾತ ಸರಗಳ್ಳರ ಬಂಧನ.!


ಕಲಬುರಗಿ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕಲಬುರಗಿ ಜಿಲ್ಲೆ ಸೇಡಂ ಮತ್ತು ಸುಲೇಪೇಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಸರಗಳ್ಳಿಯರನ್ನ ಬಂಧಿಸಿದ್ದಾರೆಂದು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.

ಈ ಬಗ್ಗೆ ಕಲಬುರಗಿ ನಗರದಲ್ಲಿ ಮಾತನಾಡಿದ ಅವರು, ಸುಲೇಪೇಟ್ ಪೊಲೀಸರಿಂದ ಕಿರಣ ಚಾರ್ಲಿ ಮತ್ತು ಸಿಮ್ರಾಮ್‌ ಎಂಬ ಸರಗಳ್ಳಿಯರನ್ನು ಬಂಧಿಸಲಾಗಿದ್ದು, ಬಂಧಿತರಿಂದ 1.20 ಲಕ್ಷ ಮೌಲ್ಯದ ಚಿನ್ನ ಮತ್ತು ಸೇಡಂ ಪೊಲೀಸರಿಂದ ಸರಗಳ್ಳಿ ಏಕತಾ ಉಪಾಧ್ಯಯ ಬಂಧಿಸಿ 6.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆಯೆಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.

ಇನ್ನೂ ಬಂಧಿತ ಸರಗಳ್ಳಿಯರು ಸಾರ್ವಜನಿಕ ಪ್ರದೇಶಗಳಾದ ಬಸ್ಟ್ಯಾಂಡ್, ಮಾರುಕಟ್ಟೆ ಸೇರಿದಂತೆ, ಮಹಿಳೆಯರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದರೆಂದು ಎಸ್ಪಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande