ರಾಯಚೂರು, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಏಪ್ರೀಲ್ 19ರಂದು ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡರು.
ಅಕಾಲಿಕ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ಕುಟುಂಬದವರಿಗೆ ಭೇಟಿ ಮಾಡಲು ಶಾಸಕರು ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಮರ್ಚಟಾಳ ಮತ್ತು ಉಡಮಗಲ್ ಗ್ರಾಮಗಳಿಗೆ ಭೇಟಿ ನೀಡಿದರು.
ವಿಪತ್ತು ನಿರ್ವಹಣೆಯಲ್ಲಿ ರಾಯಚೂರ ಜಿಲ್ಲಾಡಳಿತವು ತುರ್ತು ಕ್ರಮ ವಹಿಸಿದ್ದರಿಂದ ಘಟನೆ ನಡೆದು 24 ಗಂಟೆಯೊಳಗೆ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಇದೆ ವೇಳೆ ಶಾಸಕರು ತಿಳಿಸಿದರು.
ಇದೆ ವೇಳೆ ಶಾಸಕರು ಎರಡು ಕುಟುಂಬಗಳ ಸಂತ್ರಸ್ಥರಿಗೆ ತಲಾ 5 ಲಕ್ಷ ರೂ. ಗಳಂತೆ 10 ಲಕ್ಷ ರೂ.ಗಳ ಪರಿಹಾರ ಧನ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಏಪ್ರಿಲ್ 18ರಂದು ಸುರಿದ ತೀವ್ರ ಮಳೆಯಿಂದಾಗಿ ರಾಯಚೂರ ತಾಲೂಕಿನ ಮರ್ಚಟಾಳ ಗ್ರಾಮದಲ್ಲಿ ಸಣ್ಣ ಹನುಮಂತ ತಂದೆ ಹೇಮೇಂದ್ರಪ್ಪ ಅವರು ಮತ್ತು ಯರಗೇರಾ ಹೋಬಳಿಯ ಉಡಮಗಲ್ ಗ್ರಾಮದಲ್ಲಿ ಮಲ್ಲಮ್ಮ ಗಂಡ ಭೀಮಯ್ಯ ಅವರು ಸಿಡಿಲು ಬಡಿದು ಮೃತಪಟ್ಟಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್