ಗದಗ, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರೊಂದಿಗೆ ಸೂಕ್ತವಾಗಿ ಸ್ಪಂದಿಸದೇ ಸರ್ಕಾರಿ ಕೆಲಸಗಳನ್ನು ವಿನಾಕಾರಣ ವಿಳಂಬ ಮಾಡಿದರೆ. ಜನರಿಗೆ ತೊಂದರೆ ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗದಗ ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ವಿಜಯಕುಮಾರ ಬಿರಾದಾರ ಎಚ್ಚರಿಕೆ ನೀಡಿದರು.
ಗದಗ ಜಿಲ್ಲೆಯ ನರೇಗಲ್ಲ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಜಿಲ್ಲಾ ಲೋಕಾಯುಕ್ತ ಉಪಾಧೀಕ್ಷಕರಿಂದ ಹಾಗೂ ಪೊಲೀಸ್ ನಿರೀಕ್ಷಕರಿಂದ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ, ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರ ಅರ್ಜಿಗಳನ್ನು ಆನಗತ್ಯ ವಿಳಂಬ ಮಾಡದೇ ಶೀಘ್ರ ವಿಲೇವಾರಿ ಮಾಡುವಂತೆ. ಸೂಕ್ತ ಕಾರಣವಿಲ್ಲದೆ ತಿರಸ್ಕರಿಸದಂತೆ ಅಧಿಕಾರಿಗಳಿಗೆ ಸೂಚಿಸಿದ ವಿಜಯಕುಮಾರ ಬಿರಾದಾರ, ಸಾರ್ವಜನಿಕರೊಂದಿಗೆ ತಾಳ್ಮೆಮತ್ತು ಸೌಜನ್ಯದಿಂದ ವರ್ತಿಸಬೇಕು ಎಂದರು. ಕೃಷಿ ಇಲಾಖೆಯಿಂದ ಲಭ್ಯವಾಗುವ ಸೌಲಭ್ಯಗಳು ಸಾಮಾನ್ಯ ರೈತನಿಗೂ ತಲುಪಬೇಕು. ರೈತರಿಗೆ ಅನುಕೂಲವಾಗುವಂತೆ ಕೆಲಸಗಳನ್ನು ಮಾಡಬೇಕು. ಇಲಾಖೆಯ ಯೋಜನೆಗಳು ಪ್ರತಿ ರೈತರಿಗೆ, ಪ್ರತಿ ಹಳ್ಳಿಗೆ ತಲುಪಿಸಬೇಕು ಎಂದರು. ಹೆಸ್ಕಾಂ ವ್ಯಾಪ್ತಿಗೆ ಬರುವ ಎಲ್ಲ 20 ಹಳ್ಳಿಗಳಿಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ನರೇಗಲ್ ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಿಂದ ಪ್ರವೇಶಾತಿ ಮಾಹಿತಿ ಪಡೆದು. ಗ್ರಾಮೀಣ ಮಕ್ಕಳಿಗೆ ಅನಕೂಲವಾಗುವಂತೆ ಉತ್ತಮ ಶಿಕ್ಷಣ ನೀಡಬೇಕು ಹಾಗೂ ಪ್ರವೇಶಾತಿ ಕಡಿಮೆಯಾಗದಂತೆ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಗಳನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.
ಸರ್ಕಾರಿ ಪಿಯು ಕಾಲೇಜಿಗೆ ತೋಟದ ಲೈನ್‌ನಿಂದ ವಿದ್ಯುತ್ ಪಡೆದುಕೊಂಡಿರುವ ಬಗ್ಗೆ ಪ್ರಾಚಾರ್ಯರು ಮಾಹಿತಿ ನೀಡಿದ ಬಳಿಕ ಹೆಸ್ಕಾಂ ಎಸ್‌ಒಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಡುವಂತೆ ಲೋಕಾಯುಕ್ತ ಡಿವೈಎಸ್ ಪಿ ವಿಜಯ ಬಿರಾದಾರ ಸೂಚಿಸಿದರು.
ಕಾಲಕಾಲಕ್ಕೆ ಜಾನುವಾರುಗಳ ತಪಾಸಣೆ ಜನರಿಗೆ ಅನಕೂಲವಾಗುವಂತೆ ಮಾಡುವಂತೆ, ಪಶುಗಳಿಗೆ ಹಾಗೂ ಸೇವೆ ಒದಗಿಸಬೇಕು ಎಂದು ಪಶು ಆಸ್ಪತ್ರೆಯ ವೈದ್ಯರಿಗೆ ಸಲಹೆ ನೀಡಿದರು. ಸರ್ಕಾರಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಕೊರತೆಯನ್ನು ನಿಭಾಯಿಸಿದರೆ ಇನ್ನೂ ಹೆಚ್ಚಿನ ಸೇವೆಯನ್ನು ಒದಗಿಸಬಹುದು. ನಮ್ಮಲ್ಲಿ ಅಂಬ್ಯಲೆನ್ಸ್ ವ್ಯವಸ್ಥೆ ಇಲ್ಲವೆಂದು ನರೇಗಲ್ ವೈದ್ಯಾಧಿಕಾರಿ ಕೇಳಿಕೊಂಡರು. ನರೇಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ನೀರಿನ ಟ್ಯಾಂಕುಗಳು ಸೋರುತ್ತಿರುವ ಕುರಿತು ದೂರು ಬಂದಿದೆ. ಒಂದು ವಾರದಲ್ಲಿ ಸರಿ ಆಗಬೇಕು ಎಂದು ಲೋಕಾಯುಕ್ತರು ಮುಖ್ಯಾಧಿಕಾರಿಗೆ ತಿಳಿಸಿದರು.
ಇದೇ ವೇಳೆ ಸಾರ್ವಜನಿಕರು ಲೋಕಾಯುಕ್ತರಿಗೆ ದೂರುಗಳನ್ನು ನೀಡಿದರು. ನರೇಗಲ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ವೈದ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ ಉಪತಹಸೀಲ್ದಾರ ಎಸ್.ಜಿ. ದೊಡ್ಡಮನಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP