ಮಾಜಿ ಸಂಸದ ಮುನಿಸ್ವಾಮಿಯಿಂದ ಗೋಮಾಳ ಒತ್ತುವರಿ : ಶಾಸಕ ಎಸ್.ಎನ್ ನಾರಾಯಣಸ್ವಾಮಿ ಆರೋಪ
ಮಾಜಿ ಸಂಸದ ಮುನಿಸ್ವಾಮಿಯಿಂದ ಗೋಮಾಳ ಒತ್ತುವರಿ : ಶಾಸಕ ಎಸ್.ಎನ್ ನಾರಾಯಣಸ್ವಾಮಿ ಆರೋಪ
ಚಿತ್ರ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬೂದಿಕೊಟೆಯಲ್ಲಿ ರಸ್ತೆ ಅಭಿವೃದ್ದಿ ಕಾರ್ಯಕ್ರಮಕ್ಕೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.


ಮಾಜಿ ಸಂಸದ ಮುನಿಸ್ವಾಮಿಯಿಂದ ಗೋಮಾಳ ಒತ್ತುವರಿ : ಶಾಸಕ ಎಸ್.ಎನ್ ನಾರಾಯಣಸ್ವಾಮಿ ಆರೋಪ

ಕೋಲಾರ, ೧೯ ಏಪ್ರಿಲ್(ಹಿ.ಸ) :

ಆ್ಯಂಕರ್ : ಗಾಳಿಯಲ್ಲಿ ತೇಲಿ ಬಂದು ಯಾವುದೇ ರಾಜಕೀಯ ಬದ್ದತೆ ಇಲ್ಲದೆ ಐದು ವರ್ಷಗಳ ಕಾಲ ಅಧಿಕಾರಿಗಳು ಮತ್ತು ರಾಜಕೀಯ ಎದುರಾಳಿಗಳನ್ನು ಟೀಕೆ ಮಾಡುತ್ತಾ ಬೀದಿ ಮಾರಿ ಓಡಿಹೋಗಿದ್ದಾನೆ. ಈಗ ನನ್ನ ವಿರುದ್ದ ಮಾತನಾಡುತ್ತಿದ್ದಾನೆ. ನಾನು ಮುವತ್ತೈದು ವರ್ಷಗಳಿಂದ ಜನರ ಮಧ್ಯೆ ಕೆಲಸ ಮಾಡುತ್ತಿದ್ದೇನೆ. ಆದರೆ ಮಾಜಿ ಸಂಸದ ಎಸ್.ಮುನಿಸ್ವಾಮಿ ಆಕಸ್ಮಿಕವಾಗಿ ಗಾಳಿಯಲ್ಲಿ ತೇಲಿಬಂದು ಐದು ವರ್ಷ ಅವರಿವರನ್ನು ಟೀಕೆ ಮಾಡುತ್ತಾ ರಾಜಕಾರಣ ಮಾಡಿದರು. ಆದರೆ ಅವರಿಗೆ ಮತ್ತೆ ಸ್ಪರ್ದಿಸಲು ಬಿಜೆಪಿಯಿಂದ ಟಿಕೇಟ್ ನೀಡಲಿಲ್ಲ. ಹೋದ ಕಡೆಯಲೆಲ್ಲಾ ನನ್ನ ಬಗ್ಗೆ ಟೀಕೆ ಮಾಡುವುದೇ ಮಾಜಿ ಸಂಸದ ಮುನಿಸ್ವಾಮಿಯವರು ಕಸುಬು ಹಾಗಿದೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆಯಲ್ಲಿ ೧೬ ಕೋಟಿ ವೆಚ್ಚದಲ್ಲಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿ ಬರೋದು ನನ್ನ ಬಗ್ಗೆ ಮಾತನಾಡೋದು ಅವನು ಬಂದರೆ ಗುಂಡು ತೋಪು, ಕೆರೆ, ಗೋಮಾಳ ಬಗ್ಗೆ ಮಾತನಾಡಿಕೊಂಡೇ ಬಂಗಾರಪೇಟೆ ತಾಲೂಕಿನ ಭತ್ಲಹಳ್ಳಿ ಬಳಿ ೨೫ ಎಕರೆ ಜಮೀನು ಕೊಂಡುಕೊಂಡು ಸರ್ಕಾರಿ ಗೋಮಾಳ ಜಮೀನು ಸೇರಿದಂತೆ ೪೦ ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದ್ದೇ ಅವನ ಸಾಧನೆ ಎಂದು ಮಾಜಿ ಸಂಸದ ಮುನಿಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.

ಸೀಳು ನಾಯಿಯೊಂದು ಕ್ಷೇತ್ರಕ್ಕೆ ಬಂದು ನನ್ನ ವಿರುದ್ದ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ. ಅದಕ್ಕೆ ಪತ್ರಕರ್ತರು ಕಳೆದ ಐದು ವರ್ಷಗಳಿಂದ ಅವನು ಮಾತನಾಡಿದ್ದನ್ನೇ ಬರೆಯುತ್ತಿದ್ದೀರಿ. ಅವನ ಕೈಯಲ್ಲಿ ಏನು ಕಿಸಿಯಲು ಸಾಧ್ಯವಾಗಲಿಲ್ಲ. ಅವನದ್ದೇ ಸರ್ಕಾರ ಅವನ್ನದೇ ಡಿಸಿ, ತಹಶೀಲ್ದಾರ್ ಎಲ್ಲಾ ಇದ್ದರೂ ಏನು ಕಿಸಿಯಲು ಹಾಗಲಿಲ್ಲ. ನಿಮ್ಮಪ್ಪನಿಗೆ ನೀನು ಹುಟ್ಟಿದ್ದರೆ ನನ್ನ ವಿರುದ್ದ ಮಾಡುತ್ತಿರುವ ಆರೋಪಗಳನ್ನು ಸಾಭೀತು ಪಡಿಸುವಂತೆ ಈ ಹಿಂದೆಯೇ ಸವಾಲು ಹಾಕಿದ್ದೆ. ಸಾಬೀತು ಮಾಡಿದನಾ ಎಂದು ಪ್ರಶ್ನಿಸಿ ಮಾಜಿ ಸಂಸದ ಎಸ್ ಮುನಿಸ್ವಾಮಿ ವಿರುದ್ದ ಕಿಡಿಕಾರಿದರು.

ಬಂಗಾರಪೇಟೆ ಕ್ಷೇತ್ರದಲ್ಲಿ ನಿನ್ನ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿಯಾ ಅಲ್ವಾ. ಏನಯ್ಯ ನಿನ್ನ ಕೊಡುಗೆ ಕ್ಷೇತ್ರಕ್ಕೆ. ಯಾರೋ ಪುಡಾರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಬರುವುದು ಆಚರಣೆ ಮಾಡಿಕೊಳ್ಳುವುದು, ಹುಟ್ಟು ಹಬ್ಬ ತಾನೆ ಆಚರಣೆ ಮಾಡಿಕೊಂಡು ಹೋಗು. ಆದರೆ ಇನ್ಮುಂದೆ ಆ ಹುಚ್ಚ ಬಂಗಾರಪೇಟೆಗೆ ಬಂದಾಗ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಕೂರಿಸಿಕೊಂಡು ಕೇಳುತ್ತೇವೆ. ಶಾಸಕರು ಮಾಡಿರುವುದಾದರು ಏನು ಎನ್ನುವುದನ್ನು ಸಾಭೀತು ಪಡಿಸಿ ಕ್ಷೇತ್ರದಿಂದ ಹೊರಗೆ ಹೋಗಬೇಕು ಎಂದು ಆ ವೇಳೆ ನೀನು ಏನಾದರೂ ನನ್ನ ವಿರುದ್ದ ಮಾಡುತ್ತಿರುವ ಆರೋಪಗಳನ್ನು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಸಂಸದ ಮುನಿಸ್ವಾಮಿಗೆ ಮತ್ತೊಮ್ಮೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಸವಾಲು ಹಾಕಿದರು.

ಒಂದು ವೇಳೆ ಅವನು ಸಾಬೀತು ಪಡಿಸದೇ ಇದ್ದರೆ ಬಂಗಾರಪೇಟೆ ಕ್ಷೇತ್ರಕ್ಕೆ ಕಾಲಿಡಬಾರದು. ಇಲ್ಲಿ ಬರೋದು ಹೇಳೋದು ಪತ್ರಿಕೆಯವರೂ ಆತ ಹೇಳಿದನ್ನೇ ಬರೆಯುವುದು ಎಷ್ಟು ಬಾರಿ ಅಂತ ಬರೆಯುತ್ತೀರಿ ಎಂದು ಪತ್ರಕರ್ತರನ್ನು ಪ್ರಶ್ನಿಸಿದ ಅವರು ಇನ್ಮುಂದೆ ಪತ್ರಕರ್ತರು ಮಾಜಿ ಸಂಸದ ಹೇಳಿದನ್ನೇನಾದರೂ ಬರೆದರೆ ನನ್ನ ಕಾರ್ಯಕ್ರಮಗಳಿಗೆ ಬರಬೇಡಿ ಎಂದು ಹೇಳಿದರು.

ಕ್ಷೇತ್ರದವರಲ್ಲದೇ ಬೆಂಗಳೂರು ಪುಂಗನೂರಿನಿಂದ ಬಂದು ಮಾತನಾಡಿದರೆ ನಮ್ಮ ಭಾಗದ ಜನರ ಮನಸ್ಸು ಬದಲಾಯಿಸಲು ಸಾಧ್ಯವಿಲ್ಲ. ಕಳೆದ ೧೦ ವರ್ಷಗಳ ಹಿಂದೆ ಕ್ಷೇತ್ರದ ಪ್ರತೀ ಗ್ರಾಮದಲ್ಲಿ ಕುಡಿಯುವ ನೀರಿಗೆ ಆಹಾಕಾರ ಇತ್ತು. ಯಾರೋ ಬೀದಿಯಲ್ಲಿ ಬಂದು ಬೊಗಳುತ್ತಾರೆ ಅವರು ಒಂಥರಾ ಸೀಳು ನಾಯಿ ಅವನಿಂದ ರೈತರಿಗೆ ಬಡವರಿಗೆ ಏನಾದರು ಉಪಯೋಗವಿದೆಯಾ ಎಂದು ಪ್ರಶ್ನಿಸಿದರು.

ಬಂಗಾರಪೇಟೆ ತಾಲ್ಲೂಕಿನ ಭತ್ಲಹಳ್ಳಿ ಬಳಿ ೨೫ ಎಕರೆ ಜಮೀನು ನೊಂದಣಿ ಮಾಡಿಸಿಕೊಂಡಿದ್ದಾನೆ ಅದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ೧೦ ಎಕರೆ ಜಮೀನಿದೆ ಆದರೆ ಸರ್ಕಾರಿ ಗೋಮಾಳ ಜಮೀನು ಸೇರಿಸಿಕೊಂಡು ೪೦ ಎಕರೆ ಜಮೀನನ್ನು ಸಮತಟ್ಟು ಮಾಡಿಕೊಂಡು ಕಾಂಪೌಂಡ್ ಹಾಕಿಕೊಂಡಿದ್ದಾನೆ. ಕ್ಷೇತ್ರಕ್ಕೆ ಬಂದು ಒಂದು ವರ್ಷಷದಲ್ಲಿ ಇಷ್ಟೆಲ್ಲಾ ಮಾಡಿದ್ದೀಯಾ ಅದನ್ನು ಸರ್ವೆ ಮಾಡಿಸಿ ನಾವು ಸಾಬೀತು ಪಡಿಸುತ್ತೇವೆ ಎಂದು ಶಾಸಕ ಎಸ್‌ಎನ್ ನಾರಾಯಣಸ್ವಾಮಿ ಮಾಜಿ ಸಂಸದ ಎಸ್ ಮುನಿಸ್ವಾಮಿ ಅವರ ಜನ್ಮ ಜಾಲಾಡಿದರು.

ನಾನು ಇದು ವರೆಗೂ ಯಾವುದೇ ಸರ್ಕಾರಿ ಜಮೀನು ಗುಂಡು ತೋಪ ಒತ್ತುವರಿ ಮಾಡಿಕೊಂಡಿಲ್ಲ, ಇನ್ಮುಂದೆ ಅವನ್ನದ್ದು ಪತ್ರಿಕೆಗಳಲ್ಲಿ ಏನಾದರು ಬರೆದರೆ ನನ್ನ ಕಾರ್ಯಕ್ರಮಗಳಿಗೆ ದಯವಿಟ್ಟು ಬರಬೇಡಿ ನೇರವಾಗಿ ಹೇಳುತ್ತೇನೆ ಇಲ್ಲೂ ಹೇಳಿದನ್ನ ಬರೆಯೋದು ಅಲ್ಲಿಯೂ ಅವನು ಹೇಳಿದನ್ನು ಬರೆಯೋದು ನೀವು ಕೇಳಬೇಕಲ್ಲವೇ ಏಳು ವರ್ಷ ಬೊಗಳಿರುವುದರಲ್ಲಿ ಏನಾದರೂ ಸಾಭೀತು ಪಡಿಸಿದ್ದೀಯಾ ಎಂದು ಪ್ರಶ್ನೆ ಮಾಡಿದ್ದೀರಾ, ರಾಸಿ ರಾಸಿ ರಾಸಿ ಏಮಿ ಕಾಲೆ ಜನಾಲಿಕಿ ತೆಲುಸು ನೇನು ಏಮಿ ಅನಿ ಎಂದು ನಾರಾಯಣಸ್ವಾಮಿ ಮಾಜಿ ಸಂಸದ ಮುನಿಸ್ವಾಮಿಗೆ ತಿರುಗೇಟು ನೀಡಿದರು.

ಕಾರ್ಯಕ್ರಮದಲ್ಲಿ ಕಾಮಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆದಿನಾರಾಯಣ, ಕೇತಗಾನಹಳ್ಳಿ ಗ್ರಾಮ ಪಂಚಾತಯಿತಿ ಮಂಜುಳ ಶ್ರೀನಿವಾಸ್, ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ್‌ರೆಡ್ಡಿ, ಮುಖಂಡರಾದ ಮುನಿರಾಜು, ಪಿಎಲ್.ಡಿ ಬ್ಯಾಂಕಿನ ನಿರ್ದೇಶಕ ಚಂಗಾರೆಡ್ಡಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಚಿತ್ರ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬೂದಿಕೊಟೆಯಲ್ಲಿ ರಸ್ತೆ ಅಭಿವೃದ್ದಿ ಕಾರ್ಯಕ್ರಮಕ್ಕೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande