ಬೆಂಗಳೂರು, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಾತಿ ಗಣತಿ ಮಾಡಿದಂತೆ ಸರ್ಕಾರ ದೋಚಿದ, ಲೂಟಿ ಗಣತಿ ಮಾಡುವ ತಾಕತ್ತನ್ನು ಕಾಂಗ್ರೆಸ್ ಸರ್ಕಾರ ತೋರಿಸಲಿ ಎಂದು ರಾಜ್ಯ ಬಿಜೆಪಿ ಘಟಕ ಆಗ್ರಹಿಸಿದೆ.
ಬ್ರ್ಯಾಂಡ್ ಬೆಂಗಳೂರು ಎನ್ನುವ ಹೆಸರಿನಲ್ಲಿ ಬೆಂಗಳೂರನ್ನು ಬ್ಯಾಡ್ ಬೆಂಗಳೂರನ್ನಾಗಿ ಪರಿವರ್ತಿಸಿದೆ. ಬೆಂಗಳೂರು ನರಕವಾಗುತ್ತಿದ್ದರೂ ಕಾಂಗ್ರೆಸ್ ಸಚಿವರ, ಶಾಸಕರ ಕಿಸೆಯಲ್ಲಿ ಹಣದ ಸ್ವರ್ಗ ಸೃಷ್ಟಿಯಾಗುತ್ತಿದೆ. ಜೀವನದ ಸಂಧ್ಯಾಕಾಲದವರೆಗೂ ರಾಜಕೀಯ ಸ್ಥಾನಮಾನ ಲಭಿಸಬೇಕು ಎಂಬ ದುರಾಸೆಯಿಂದ ಜಾತಿಗಣತಿಯ ವಿಷಬೀಜ ಬಿತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಲೂಟಿ ಹೊಡೆದ ಲೆಕ್ಕದ ಗಣತಿಯನ್ನು ತಿಳಿಸಿ ಎಂದು ಬಿಜೆಪಿ ಆಗ್ರಹಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa