ಕೋಲಾರ, ೧೪ ಏಪ್ರಿಲ್ (ಹಿ.ಸ) :
ಆ್ಯಂಕರ್ : ಜಾತಿ ಜನಗಣತಿಯನ್ನು ಎರಡು ಲಕ್ಷ ಶಿಕ್ಷಕರನ್ನು ಬಳಸಿಕೊಂಡು ನಡೆಸಲಾಗಿದೆ. ಆದರೆ ಬಿಜೆಪಿಯವರು ಇಷ್ಟು ದಿನ ಜಾತಿ ಗಣತಿ ಪ್ರಿಜರ್‌ನಲ್ಲಿದೆ ಎಂದು ಹೇಳುತ್ತಿದ್ದರು ಇದೀಗ ವಿರೋಧ ಮಾಡಿಕೊಂಡು ಕ್ಷಲ್ಲಕ ಕಾರಣಕ್ಕೆ ರಾಜಕೀಯ ಮಾಡುತ್ತಿರುವ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ಉಸ್ತುವಾರಿ ಸವಿವ ಭೈರತಿ ಸುರೇಶ್ ಬಿಜೆಪಿಯವರ ವಿರುದ್ದ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಕೋಲಾರ ನಗರದಲ್ಲಿ ಹಮ್ಮಿಕೊಂಡಿದ್ದ ಡಾ. ಬಿಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಗಿಗಳೊಂದಿಗೆ ಮಾತನಾಡಿದರು. ಜಾತಿ ಜನಗಣತಿಯನ್ನು ಎರಡು ಲಕ್ಷ ಶಿಕ್ಷಕರು ಭಾಗಿಯಾಗಿ ತಯಾರಿಸಿರುವ ವರಧಿ ಆ ವರದಿಯಲ್ಲಿ ಒಂದೇ ಸಮುದಾಯದವರು ಇದ್ದಾರ ಎಂದು ಪ್ರಶ್ನಿಸಿದರಲ್ಲದೆ ಅವರು ಕೊಟ್ಟಿರುವ ವರದಿ ಸುಳ್ಳಾ ಎಂದು ಬಿಜೆಪಿಯವರಿಗೆ ಪ್ರಶ್ನಿಸಿದರು.
ರಾಜ್ಯದಲ್ಲಿ ಲಿಂಗಾಯಿತ ಸಮುದಾಯ ಮೊದಲನೇ ಸ್ಥಾನದಲ್ಲಿದೆ. ಒಕ್ಕಲಿಗರ ಸಮುದಾಯ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಯಾವ ಸಮುದಾಯದ ಜನ ಎಷ್ಟು ಸಂಖ್ಯೆ ಇದ್ದಾರೆ ಎನ್ನುವುದು ಜಾತಿ ಜನಗಣತಿ ವರದಿಯಲ್ಲಿದೆ. ಎಲ್ಲರೂ ಸಂತೋಷವಾಗಿದ್ದಾರೆ ನನ್ನ ವೈಯುಕ್ತಿಕವಾಗಿ ಹೇಳದಾದರೆ ವರದಿ ಸರಿಯಿದೆ ರಾಜ್ಯದ ಶೇ. ೯೫ ರಷ್ಟು ಜನರಿಗೆ ಜಾತಿ ಗಣತಿ ವರದಿ ಖುಷಿ ತಂದಿದೆ. ಬಿಜೆಪಿಯವರಿಗೆ ಯೋಗ್ಯತೆ ಇಲ್ಲ ಮಾಡಿದರೂ ಸಹಿಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜಾತಿ ಗಣತಿಗೆ ವೈಯುಕ್ತಿಕವಾಗಿ ನನ್ನ ಒಪ್ಪಿಗೆ ಇದೆ ಇನ್ನು ವರದಿಯನ್ನು ಓದುತ್ತಿದ್ದೇನೆ ಏ.೧೭ ರಂದು ಎಲ್ಲಾ ಸಚಿವರು ಆಭಿಪ್ರಾಯ ಸಂಗ್ರಹ ಮಾಡಲಾಗುವುದು ಅಂದು ಜಾತಿ ಗಣತಿಗೆ ಎಲ್ಲಾ ಸಚಿವರು ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ ನನ್ನ ಸಮುದಾಯ ೫೫ ಲಕ್ಷ ಇರಬಹುದೆಂಬ ನಿರೀಕ್ಷೆಯಲ್ಲಿದೆ ಆದರೆ ಜಾತಿ ಗಣತಿ ವರದಿಯಲ್ಲಿ ೪೫ ಲಕ್ಷ ಇದೆ ಆದರೂ ಅದನ್ನು ಒಪ್ಪಿಕೊಂಡಿದ್ದೇವೆ ಬಿಜೆಪಿಯವರಂತೆ ವಿರೋಧ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಗ್ಯಾರೆಂಟಿ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿ ಎರಡು ವರ್ಷ ಹಾಗಿದೆ ಇದುವರೆಗೂ ಯಾವುದೇ ಒಂದು ಯೋಜನೆಯನ್ನು ನಿಲ್ಲಿಸಿಲ್ಲ ಆದೇ ರೀತಿಯಲ್ಲಿ ಜಾತಿ ಜನಗಣತಿಯೂ ಎಂದರು.
ಕೋಮುಲ್ ನಲ್ಲಿ ನೂರಾರು ಕೋಟಿ ಅವ್ಯವಹಾರ ನಡೆಸಲಾಗಿದೆ ಎಂದು ಶಾಸಕ ನಾರಾಯಣಸ್ವಾಮಿ ಆರೋಪಿಸಿರುವುದಕ್ಕೂ ಪ್ರತಿಕ್ರಿಯೆ ನೀಡಿದ ಸಚಿವರು ಎಲ್ಲಾರೂ ನಮ್ಮವರೆ ಕೋಮುಲ್ ನಲ್ಲಿ ಏನಾದರು ತಪ್ಪುಗಳಾಗಿದ್ದಾರೆ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು, ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ ಕಾಂಗ್ರೇಸ್ ಪಕ್ಷ ಶಾಸಕ ಎಸ್.ಎನ್ ನಾರಾಯಣಸ್ವಾಮಿ, ರೂಪಕಲ ಶಶಿದರ್ ನಮ್ಮವರೇ ನಾವೇಲ್ಲಾ ಒಂದು ಅವರವರ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ ಅಷ್ಟೆ ಅಜೆಂಡಾ ಒಂದೇ ರೈತರಿಗೆ ಅನುಕೂಲವಾಗಬೇಕಷ್ಟೆ ಎಂದರು.
ಚಿತ್ರ : ಬಿ.ಎಸ್ ಸುರೇಶ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್