ಲಿಂಗಸೂಗೂರು : ಬೀದಿ ನಾಯಿಗಳ ದಾಳಿಗೆ ಐದು ವರ್ಷದ ಬಾಲಕ ಮೃತ್ಯು
ಲಿಂಗಸೂಗೂರು, 31 ಮಾರ್ಚ್ (ಹಿ.ಸ.) : ಆ್ಯಂಕರ್ : ಬಹಿರ್ದೆಸೆಗೆ ಹೋಗಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ಗುಂಪಾಗಿ ದಾಳಿ ಮಾಡಿದ ಕಾರಣ ಆ ಬಾಲಕ ಮೃತಪಟ್ಟಿರುವ ಘಟನೆ ಲಿಂಗಸೂಗೂರುನ ಕಸಬಾ ಲಿಂಗಸೂಗೂರುನಲ್ಲಿ ನಡೆದಿದೆ. ಮೃತನು ಸಿದ್ದು ಬೀರಪ್ಪ (05). ಸಿದ್ದು ಬೀರಪ್ಪನು ಬಹಿರ್ದೆಸೆಗೆ ಹೋಗಿದ್ದಾಗ ಬೀದಿ ನ
ಲಿಂಗಸೂಗೂರು : ಬೀದಿ ನಾಯಿಗಳ ದಾಳಿಗೆ ಐದು ವರ್ಷದ ಬಾಲಕ ಮೃತ್ಯು


ಲಿಂಗಸೂಗೂರು, 31 ಮಾರ್ಚ್ (ಹಿ.ಸ.) :

ಆ್ಯಂಕರ್ : ಬಹಿರ್ದೆಸೆಗೆ ಹೋಗಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ಗುಂಪಾಗಿ ದಾಳಿ ಮಾಡಿದ ಕಾರಣ ಆ ಬಾಲಕ ಮೃತಪಟ್ಟಿರುವ ಘಟನೆ ಲಿಂಗಸೂಗೂರುನ ಕಸಬಾ ಲಿಂಗಸೂಗೂರುನಲ್ಲಿ ನಡೆದಿದೆ.

ಮೃತನು ಸಿದ್ದು ಬೀರಪ್ಪ (05). ಸಿದ್ದು ಬೀರಪ್ಪನು ಬಹಿರ್ದೆಸೆಗೆ ಹೋಗಿದ್ದಾಗ ಬೀದಿ ನಾಯಿಗಳು ಗುಂಪು ಬಾಲಕನ ಮೇಲೆ ದಾಳಿ ಮಾಡಿ ಎಳೆದಾಡಿ ಗಂಭೀರವಾಗಿ ಗಾಯಗೊಳಿಸಿದ್ದವು.

ಗಾಯಗೊಂಡಿದ್ದ ಬಾಲಕನನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ವೈದ್ಯರ ಶಿಫಾರಸ್ಸಿನ ಮೇರಗೆ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲ ನೀಡದೇ ಬಾಲಕ ಮೃತಪಟ್ಟಿದ್ದಾನೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande