ಹಗರಿಬೊಮ್ಮನಹಳ್ಳಿ , 26 ಮಾರ್ಚ್ (ಹಿ.ಸ.) :
ಆ್ಯಂಕರ್ : ಹಗರಿಬೊಮ್ಮನಹಳ್ಳಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಲಿಗೆಮ್ಮ ಉಂಕಿ (55 ) ಕಾಣೆಯಾಗಿರುವ ಕುರಿತು ಹಗರಿಬೊಮ್ಮನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಅವರು ತಿಳಿಸಿದ್ದಾರೆ.
ವ್ಯಕ್ತಿ ಚಹರೆ: ಸಾಧಾರಣ ಮೈಕಟ್ಟು, 5.2 ಅಡಿ ಎತ್ತರದ ಮಹಿಳೆ, ಕಪ್ಪು ಬಣ್ಣದ ಕುಬುಸ, ಬಿಳಿ ಬಣ್ಣದ ಹೂವಿನ ಹಸಿರು ಸೀರೆ ಧರಿಸಿರುತ್ತಾರೆ, ಎಡ ಹುಬ್ಬಿನ ಮೇಲೆ ಹಳೆಯ ಗಾಯದ ಗುರುತು ಇದ್ದು, ಫೆ.27 ರಂದು ಮನೆಯಿಂದ ಕಾಣೆಯಾಗಿದ್ದಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಟ್ಟಣ ಪೊಲೀಸ್ ಠಾಣೆಯ ಪಿ.ಐ ಅವರ ದೂ.ಸಂ:08397-238333, ಮೊ.ಸಂ:9480805770, ಸಿಪಿಐ ಅವರ ದೂ.ಸಂ:08397-238477, ಡಿಎಸ್ ಪಿ : 08391-220326, ಎಸ್ ಪಿ ಅವರ ದೂ.ಸಂ:08394-224204ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್