ರಾಯಚೂರು, 21 ಮಾರ್ಚ್ (ಹಿ.ಸ.) :
ಆ್ಯಂಕರ್ : ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿಯಾದ ಕುಮಾರಿ ಮಾನಸ ತಂದೆ ಶರಣಪ್ಪ (19) ಇಡಿಗಾ ಎಂಬ ಯುವತಿ ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 40/2025 ಕಲಂ ಅಡಿ ಪ್ರಕರಣ ದಾಖಲಾಗಿದೆ.
ಯುವತಿಯ ಚಹರೆ: ವಯಸ್ಸು 19, ಅಂದಾಜು 4.5 ಅಡಿ ಎತ್ತರ, ಗೋದಿ ಮೈ ಬಣ್ಣ, ಗುಂಡನೇಯ ಮುಖ, ಕಪ್ಪು ಕೂದಲು ಹೊಂದಿದ್ದು, ಕಡು ನೀಲಿ ಬಣ್ಣದ ಚೂಡಿದಾರ ಹಾಗೂ ಬಿಳಿ ವೇಲ್ ಧರಿಸಿದ್ದಾರೆ. ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾಳೆ.
ಈ ಯುವತಿ ಬಗೆ ಸುಳಿವು ಸಿಕ್ಕಲ್ಲಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ; 085322-35308, ಪಿಎಸ್‌ಐ ದೂರವಾಣಿ ಸಂಖ್ಯೆ: 9480803850, ವೃತ್ತ ಅಧಿಕಾರಿ ದೂರವಾಣಿ ಸಂಖ್ಯೆ: 9480803832ಗೆ ಸಂಪರ್ಕ ಮಾಡಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್