ಬೆಂಗಳೂರು, 12 ಮಾರ್ಚ್ (ಹಿ.ಸ.) :
ಆ್ಯಂಕರ್ : ಕೇಂದ್ರ ತನಿಖಾ ಸಂಸ್ಥೆ ಮೂಲಕ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಜಿ ಅವರನ್ನು ಅಕ್ರಮವಾಗಿ ಬಂಧಿಸಿರುವುದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಎಸೆಯಲಾದ ಹೀನಾತಿ. ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ರಾಷ್ಟ್ರದಾದ್ಯಂತ ನಡೆಯುತ್ತಿರುವ ಹೋರಾಟವನ್ನು ನಿಗ್ರಹಿಸಲು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಮತ್ತೊಂದು ರಾಜಕೀಯ ಷಡ್ಯಂತ್ರ ಇದಾಗಿದೆ ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯ ಘಟಕ ತೀವ್ರವಾಗಿ ಖಂಡಿಸಿದೆ.
ಎಸ್‌ಡಿಪಿಐ ಸಮಾನತೆ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಪಕ್ಷವಾಗಿದೆ. ಆದರೆ ಭಿನ್ನಮತದ ಧ್ವನಿಗಳನ್ನು ನಿಗ್ರಹಿಸಲು, ಕೇಂದ್ರ ಸರ್ಕಾರ ರಾಜಕೀಯ ಪ್ರತೀಕಾರದ ಅಂಗವಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಎಸ್‌ಡಿಪಿಐ ಮುಖಂಡರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಬಂಧನ ಮಾಡುತ್ತಿದೆ.
ದುರಪಯೋಗ – ಕೇಂದ್ರ ಸರ್ಕಾರದ ಸೇಡಿನ ರಾಜಕೀಯ
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಮತ್ತು ನ್ಯಾಯದ ಪರ ಹೋರಾಡುವ ವ್ಯಕ್ತಿಗಳನ್ನು ದಮನಿಸಲು ತನಿಖಾ ಸಂಸ್ಥೆಗಳನ್ನು ರಾಜಕೀಯ ಸಾಧನವಾಗಿ ಬಳಸುತ್ತಿದೆ ಎಂಬುದು ಅಪಾಯಕರ ಬೆಳವಣಿಗೆಯಾಗಿದ್ದು, 2014 ರಿಂದ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚಿನ ತನಿಖೆಗಳು ವಿಪಕ್ಷ ನಾಯಕರು ಹಾಗೂ ಸಂಘಟನೆಗಳ ವಿರುದ್ಧವೇ ನಡೆದಿವೆ ಎಂಬುದು ಸ್ಪಷ್ಟವಾಗಿದೆ. ಆದರೆ ಬಿಜೆಪಿಗೆ ಸೇರಿದವರ ವಿರುದ್ಧ ಯಾವುದೇ ತನಿಖೆಗಳು ನಡೆಯುತ್ತಿಲ್ಲ.
ಈಗ ಇದರ ಮುಂದುವರಿದ ಭಾಗವಾಗಿ, ಎಸ್‌ಡಿಪಿಐ ರಾಷ್ಟ್ರದಾದ್ಯಂತ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಶಕ್ತಿಯುತ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಜಿ ಅವರನ್ನು ಜಾರಿ ನಿರ್ದೇಶನಾಲಯ ಮೂಲಕ ಅಕ್ರಮವಾಗಿ ಬಂಧಿಸಿದ್ದು, ಇದು ಪ್ರಜಾಪ್ರಭುತ್ವದ ಹಕ್ಕುಗಳನ್ನು ತಡೆಯಲು ಬಿಜೆಪಿ ಸರ್ಕಾರ ಕೈಗೊಂಡ ಅಸಹಿಷ್ಣುತನದ ಕ್ರಮ.
ಎಸ್‌ಡಿಪಿಐ ಕರ್ನಾಟಕದಿಂದ ಬೃಹತ್ ಪ್ರತಿಭಟನೆ – ಸರ್ಕಾರದ ಜನವಿರೋಧಿ ನೀತಿಗಳ ಖಂಡನೆ
ಎಂ.ಕೆ. ಫೈಜಿ ಅವರ ಅಕ್ರಮ ಬಂಧನವನ್ನು ಖಂಡಿಸಿ, ಎಸ್‌ಡಿಪಿಐ ಕರ್ನಾಟಕ ರಾಜ್ಯ ಘಟಕ ಫ್ರೀಡಂ ಪಾರ್ಕ್, ಬೆಂಗಳೂರು ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿತು. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಈ ಪ್ರತಿಭಟನೆಯಲ್ಲಿ ನೇತೃತ್ವವಹಿಸಿ,
ನ್ಯಾಯ, ಸಮಾನತೆ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಡುವುದು ನಮ್ಮ ಕರ್ತವ್ಯ. ಕೇಂದ್ರ ಸರ್ಕಾರದ ದ್ವೇಷ ರಾಜಕೀಯವನ್ನು ಖಂಡಿಸಿ, ಜನವಿರೋಧಿ ನೀತಿಯ ವಿರುದ್ಧ ಸಮೂಹವಾಗಿ ಬೆಂಬಲ ನೀಡಲು ನಾವು ಕರೆಯೊಡಗಿಸುತ್ತೇವೆ. ಎಂದು ಹೇಳಿದ್ದಾರೆ.
ಎಸ್‌ಡಿಪಿಐ ಹೋರಾಟ ಮುಂದುವರಿಸುತ್ತದೆ – ನಮ್ಮ ಪ್ರಮುಖ ಬೇಡಿಕೆಗಳು
✔ ಎಂ.ಕೆ. ಫೈಝಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು✔ ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಬೇಕು✔ ರಾಜಕೀಯ ಪ್ರತೀಕಾರಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗವನ್ನು ತಕ್ಷಣ ನಿಲ್ಲಿಸಬೇಕು✔ ಭಿನ್ನಮತದ ಧ್ವನಿಗಳನ್ನು ನಿಗ್ರಹಿಸುವ ಪ್ರಯತ್ನಗಳನ್ನು ವಿರೋಧಿಸಿ ಪ್ರಜಾಪ್ರಭುತ್ವ ಉಳಿಸಬೇಕು
ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖ ನಾಯಕರು
ಈ ಹೋರಾಟಕ್ಕೆ ಪ್ರಮುಖ ಮುಖಂಡರು ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡರು:
ಓಬಳೇಶ್ ಬಿಟಿ – ಸಾಮಾಜಿಕ ಕಾರ್ಯಕರ್ತ
ಮುಫ್ತಿ ಮಹಮ್ಮದ್ ರಿಜ್ವಾನ್ ಸಾಹೇಬ್
ಮುಫ್ತಿ ಇರ್ಷಾದ್ ಅಹಮದ್
ಶಿವಸುಂದರ್ – ಪತ್ರಕರ್ತ
ದಸ್ತಗೀರ್ ಸಾಬ್ – ಕರ್ನಾಟಕ ವಕ್ಫ್ ಆಕ್ಷನ್ ಕಮೇಟಿ
ಶ್ರೀಮತಿ ಕುಬ್ರಾ ಬಾನು ಅಮೇರಿ ಕಲಿಮೀ
ಮೌಲಾನಾ ಶಂಶುದ್ದೀನ್ ಸಾಹೇಬ್
ಆಲಂ ಪಾಶಾ – ಆರ್‌ಟಿಐ ಕಾರ್ಯಕರ್ತ
ಮುಖ್ತಿಯಾರ್ ಅಲಿ ಖಾನ್ – ಕರ್ನಾಟಕ ಲೇಬರ್ ಪಾರ್ಟಿ
ಚೀರನಹಳ್ಳಿ ಲಕ್ಷ್ಮಣ್ – ವಕೀಲರು ಹಾಗೂ ದಲಿತ ಹಕ್ಕುಗಳ ಹೋರಾಟಗಾರ
ಅಬ್ದುಲ್ ಹನ್ನಾನ್ ಮತ್ತು ದೇವನೂರು ಪುಟ್ನಂಜಯ್ಯ – SDPI ಕರ್ನಾಟಕ ರಾಜ್ಯ ಉಪಾಧ್ಯಕ್ಷರು
ಮುಜಾಹಿದ್ ಭಾಷಾ, ಅಪ್ಸರ್ ಕೊಡ್ಲಿಪೇಟೆ – ಪ್ರಧಾನ ಕಾರ್ಯದರ್ಶಿಗಳು, SDPI ಕರ್ನಾಟಕ
ರಿಯಾಜ್ ಕಡಂಬು, ಮಹಮ್ಮದ್ ಅಕ್ರಂ, ರಂಜಾನ್ ಕಡಿವಾಳ – ರಾಜ್ಯ ಕಾರ್ಯದರ್ಶಿಗಳು
SDPI ರಾಜ್ಯ ಸಮಿತಿ ಸದಸ್ಯರು, ವುಮೆನ್ ಇಂಡಿಯಾ ಮೂಮೆಂಟ್ ನಾಯಕಿಯರು, ಮತ್ತು ಸಾವಿರಾರು ಕಾರ್ಯಕರ್ತರು
ಈ ಎಲ್ಲಾ ನಾಯಕರು ರಾಜಕೀಯ ದಮನ, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಮತ್ತು ಜನವಿರೋಧಿ ನೀತಿಯ ವಿರುದ್ಧ ತಮ್ಮ ಧ್ವನಿಯನ್ನು ಎತ್ತಿದರು.
ಎಸ್‌ಡಿಪಿಐ ಹೋರಾಟ ಮುಂದುವರಿಯುತ್ತದೆ – ಪ್ರಜಾಪ್ರಭುತ್ವ ಉಳಿಸಲು ಜನರ ಸಹಕಾರ ಅಗತ್ಯ!
ಎಸ್‌ಡಿಪಿಐ ಕರ್ನಾಟಕ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನೀತಿ ತೊರೆದು, ಭಿನ್ನಮತವನ್ನು ಗೌರವಿಸಬೇಕು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ