ಕುರುಗೋಡು : ಮದ್ಯ ಮಾರಾಟ ನಿಷೇಧ
ಕುರುಗೋಡು, 12 ಮಾರ್ಚ್ (ಹಿ.ಸ.): ಆ್ಯಂಕರ್ : ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ರಥೋತ್ಸವ ಹಾಗೂ ಹೋಳಿ ಹಬ್ಬ ಮಾರ್ಚ್ 14 ರಂದು ನಡೆಯಲಿದ್ದು ಬೆಳಿಗ್ಗೆ 06 ಗಂಟೆಯಿಂದ ಮಾ.15 ರಂದು ಬೆಳಿಗ್ಗೆ 06 ಗಂಟೆಯವರೆಗೆ ಬಳ್ಳಾರಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮತ್ತು ಮದ್ಯ ಅಂಗಡಿ, ಬಾರ್, ರ
ಕುರುಗೋಡು : ಮದ್ಯ ಮಾರಾಟ ನಿಷೇಧ


ಕುರುಗೋಡು, 12 ಮಾರ್ಚ್ (ಹಿ.ಸ.):

ಆ್ಯಂಕರ್ : ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ರಥೋತ್ಸವ ಹಾಗೂ ಹೋಳಿ ಹಬ್ಬ ಮಾರ್ಚ್ 14 ರಂದು ನಡೆಯಲಿದ್ದು ಬೆಳಿಗ್ಗೆ 06 ಗಂಟೆಯಿಂದ ಮಾ.15 ರಂದು ಬೆಳಿಗ್ಗೆ 06 ಗಂಟೆಯವರೆಗೆ ಬಳ್ಳಾರಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮತ್ತು ಮದ್ಯ ಅಂಗಡಿ, ಬಾರ್, ರೆಸ್ಟೋರೆಂಟ್‍ಗಳನ್ನು ತೆರೆಯದಂತೆ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಆದೇಶ ಹೊರಡಿಸಿದ ಅವರು, ಈ ಆದೇಶವು ಡಿಸ್ಟಲರೀಸ್ ರಾಜ್ಯದ ವಿವಿಧ ಕೆಎಸ್‍ಪಿಬಿಸಿಎಲ್ ಡಿಪೊಗಳಿಗೆ ದಾಸ್ತಾನು ವಿಲೇವಾರಿ ಮಾಡಲು ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande