ಹುಬ್ಬಳ್ಳಿ, 12 ಮಾರ್ಚ್ (ಹಿ.ಸ.) :
ಆ್ಯಂಕರ್ : ಪ್ರಯಾಣಿಕರ ಕೊರತೆಯಿಂದಾಗಿ, ರೈಲು ಸಂಖ್ಯೆ 17347/17348 ಎಸ್.ಎಸ್.ಎಸ್ ಹುಬ್ಬಳ್ಳಿ-ಚಿತ್ರದುರ್ಗ-ಎಸ್.ಎಸ್.ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಚಿಕ್ಕಜಾಜೂರು ಮತ್ತು ಚಿತ್ರದುರ್ಗದ ನಡುವಿನ ಭಾಗಶಃ ರದ್ದತಿಯನ್ನು ಜೂನ್ 30, 2025 ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಮಾರ್ಚ್ 31, 2025 ರವರೆಗೆ ಮಾತ್ರ ಭಾಗಶಃ ರದ್ದತಿ ಇತ್ತು, ಆದರೆ ಈಗ ಅದನ್ನು ಏಪ್ರಿಲ್ 1, 2025 ರಿಂದ ಜೂನ್ 30, 2025 ರವರೆಗೆ ವಿಸ್ತರಿಸಲಾಗಿದೆ.
ಹುಬ್ಬಳ್ಳಿಯಿಂದ ಹೊರಡುವ ರೈಲು (ರೈ.ಸಂ.17347) ಚಿಕ್ಕಜಾಜೂರಿನಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ಹಾಗೆಯೇ, ಚಿತ್ರದುರ್ಗದಿಂದ ಹುಬ್ಬಳ್ಳಿಗೆ ತೆರಳುವ ರೈಲು (ರೈ.ಸಂ.17348) ಚಿಕ್ಕಜಾಜೂರಿನಿಂದಲೇ ಪ್ರಯಾಣ ಆರಂಭಿಸಲಿದೆ. ಇದರಿಂದಾಗಿ, ಚಿಕ್ಕಜಾಜೂರು ಮತ್ತು ಚಿತ್ರದುರ್ಗದ ನಡುವಿನ ರೈಲು ಸಂಚಾರವು ಸಂಪೂರ್ಣವಾಗಿ ರದ್ದಾಗುತ್ತದೆ.
ಪ್ರಯಾಣಿಕರು ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ರೇಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa