ಹೊಸಪೇಟೆ, 12 ಮಾರ್ಚ್ (ಹಿ.ಸ.):
ಆ್ಯಂಕರ್ : ಹೋಳಿ ಹಬ್ಬದ ನಿಮಿತ್ತ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಮದ್ಯದಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟ ಮಾಡದಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಎಂ.ಎಸ್.ದಿವಾಕರ್ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ಮತ್ತು ಈ ಹಬ್ಬದ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ಹೆಚ್ಚಿನ ಜನ ಸೇರುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ಮದ್ಯ ಸೇವನೆ ಮಾಡುವುದು, ಕುಡಿದು ಅಮಲಿನಲ್ಲಿ ವಾಹನ ಚಾಲನೆ ಮಾಡುವಂತಿಲ್ಲ .
ಗಲಾಟೆಗಳು ಮತ್ತು ಅಪಘಾತಗಳು ಆಗುವ ಸಾಧ್ಯತೆಗಳು ಇರುವ ಕಾರಣ. ಹೊಸಪೇಟೆ ಉಪವಿಭಾಗದ ಹೊಸಪೇಟೆ ಪಟ್ಟಣ, ಗ್ರಾಮೀಣ, ಚಿತ್ತವಾಡ್ಗಿ, ಕಮಲಾಪುರ, ಹಂಪಿ, ಟಿ.ಬಿ.ಡ್ಯಾಂ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 13 ರ ಬೆ.6 ಗಂಟೆಯಿಂದ ಮಾ.14 ರ ಸಂಜೆ 6 ಗಂಟೆಯವರೆಗೆ, ಕೂಡ್ಲಿಗಿ ಉಪವಿಭಾಗದ ಕೂಡ್ಲಿಗಿ ವೃತ್ತ ಕಚೇರಿ ವ್ಯಾಪ್ತಿಯ ಕೂಡ್ಲಿಗಿ, ಗುಡೇಕೋಟೆ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 13 ರ ಸಂಜೆ 6 ಗಂಟೆಯಿಂದ ಮಾ.15 ರ ಸಂಜೆ 6 ಗಂಟೆಯವರೆಗೆ, ಕೊಟ್ಟೂರು ವೃತ್ತ ಕಚೇರಿ ವ್ಯಾಪ್ತಿಯ ಕೊಟ್ಟೂರು, ಹೊಸಹಳ್ಳಿ ಠಾಣೆ ಮಾರ್ಚ್ 14 ರ ಸಂಜೆ 6 ಗಂಟೆಯಿಂದ ಮಾ.15 ರ ರಾತ್ರಿ 10 ಗಂಟೆಯವರೆಗೆ, ಹ.ಬೊಹಳ್ಳಿ ವೃತ್ತ ಕಚೇರಿಯ ವ್ಯಾಪ್ತಿಯ ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 13 ರ ಬೆಳಿಗ್ಗೆ 6 ಗಂಟೆಯಿಂದ ಮಾ.15 ರ ಸಂಜೆ 6 ಗಂಟೆಯವರೆಗೆ, ಹರಪನಹಳ್ಳಿ ಉಪ ವಿಭಾಗ ಹಡಗಲಿ, ಹಿರೇಹಡಗಲಿ, ಇಟ್ಟಿಗಿ, ಹರಪನಹಳ್ಳಿ, ಹಲವಾಗಲು, ಚಿಗಟೇರಿ, ಅರಸೀಕೆರೆ ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾರ್ಚ್ 14 ರ ಬೆಳಿಗ್ಗೆ 6 ಗಂಟೆಯಿಂದ ಮಾ.15 ರ ರಾತ್ರಿ 8 ಗಂಟೆಯವರೆಗೆ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ನಿಷೇಧಾಜ್ಞೆ ಮಾಡಿದ್ದು ಮಾರಾಟ ಹಾಗೂ ಸಾಗಾಣಿಕೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್