
ವಿಜಯಪುರ, 14 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ಹೊರವಲಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ ಈಗ ಕೇವಲ ಕಸ ಸುರಿಯುವ ಸ್ಥಳವಾಗಿರದೆ, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.
ನಗರದಲ್ಲಿನ ಮನೆ-ಮನೆಗಳಿಂದ ಪ್ರತಿದಿನ 135 ಟನ್ ಗಳಷ್ಟು ಹೆಚ್ಚು ಪ್ರಮಾಣದ ಹಸಿ ಮತ್ತು ಒಣ ಕಸ ಸಂಗ್ರಹವಾಗುತ್ತಿದ್ದು, ನಗರಸಭೆಯ ವಾಹನಗಳ ಮೂಲಕ ಅದನ್ನು ಘಟಕಕ್ಕೆ ತರಲಾಗುತ್ತದೆ.
ಹೀಗೆ ಘಟಕಕ್ಕೆ ಬಂದ ಕಸವನ್ನು ಕಾರ್ಮಿಕರು ಮೊದಲು ಹಸಿ ಹಾಗೂ ಒಣ ಕಸದಾಗಿ ವಿಂಗಡಣೆ ಮಾಡುತ್ತಾರೆ.ಈ ವಿಂಗಡಿಸಿದ ಕಸದ ಪೈಕಿ ಪ್ರತಿ ದನ ಸುಮಾರು 5 ಟನ್ ಹಸಿ ಕಸವನ್ನು ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಸುವ ಕಾರ್ಯ ನಡೆಯುತ್ತಿದೆ. ಈ ಗೊಬ್ಬರ ಕೃಷಿಗೆ ಉಪಯುಕ್ತವಾಗಿದ್ದು, ರೈತರಿಗೆ ಸಹಕಾರಿಯಾಗುತ್ತಿದೆ.
ಕಸದ ಸಮರ್ಪಕ ನಿರ್ವಹಣೆಯ ಜೊತೆಗೆ ಪರಿಸರ ಸಂರಕ್ಷಣೆಗೂ ಈ ಯೋಜನೆ ನೆರವಾಗುತ್ತಿದೆ. ಹೀಗಾಗಿ ‘ತ್ಯಾಜ್ಯದಿಂದ ಸಂಪತ್ತು’ (ವೇಸ್ಟ್ ಟು ವೆಲ್ತ್) ಪರಿಕಲ್ಪನೆಗೆ ವಿಜಯಪುರದಲ್ಲಿ ಉತ್ತಮ ಉದಾಹರಣೆಯಾಗಿ ಈ ಘಟಕ ಬೆಳೆಯುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande