ಕೋಲಾರದಲ್ಲಿ ಮಾರ್ಚ ೧೪ ರಂದು ಶ್ರೀ ಯೋಗಿ ನಾರೇಯಣ ತಾತಯ್ಯನವರ ೨೯೯ ನೇ ಜಂಯತಿ
ಕೋಲಾರದಲ್ಲಿ ಮಾರ್ಚ ೧೪ ರಂದು ಶ್ರೀ ಯೋಗಿ ನಾರೇಯಣ ತಾತಯ್ಯನವರ ೨೯೯ ನೇ ಜಂಯತಿ
ಕೋಲಾರದಲ್ಲಿ ಮಾರ್ಚ ೧೪ ರಂದು ಶ್ರೀ ಯೋಗಿ ನಾರೇಯಣ ತಾತಯ್ಯನವರ ೨೯೯ ನೇ ಜಂಯತಿ


ಕೋಲಾರ, ೧೧ ನವೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀ ಯೋಗಿ ನಾರೇಯಣ ಯತೀಂದ್ರರ( ಕೈವಾರ ತಾತಯ್ಯ) ೨೯೯ ನೇ ಜಯಂತೋತ್ಸವವನ್ನು ಇದೇ ತಿಂಗಳ ೧೪ ರ ಶುಕ್ರವಾರ ಶ್ರೀ ಯೋಗಿ ನಾರೇಯಣ ಯುವ ಬಲಜ ಸೇವಾ ಟ್ರಸ್ಟ್ ವತಿಯಿಂದ ನಗರದಲ್ಲಿ ಅದ್ದೂರಿಯಾಗಿ ನಡೆಸಲಾಗುವುದೆಂದು ಬಲಜ ಸಮುದಾಯದ ಹಿರಿಯ ಮುಖಂಡ ವೆಂಕಟಸ್ವಾಮಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬಲಿಜ ಸಮುದಾಯದ ಮುಖಂಡರುಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದ ಬಳಿ ಇರುವ ತಾತಯ್ಯನವರ ವೃತ್ತದಲ್ಲಿರುವ ತಾತಯ್ಯನವರ ಪುತ್ಥಳಿಗೆ ಬೆಳಿಗ್ಗೆ ೧೦ ಗಂಟೆಗೆ ಪೂಜೆ ಸಲ್ಲಿಸಲಾಗುವುದು ಹಾಗೂ ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಆಗಮಿಸುವ ಪಲ್ಲಕ್ಕಿಗಳ ಮೆರವಣಿಗೆಗೆ ಗಣ್ಯರು ಚಾಲನೆ ನೀಡಲಿದ್ದಾರೆಂದು ಹೇಳಿದರಲ್ಲದೆ ಮಧ್ಯಾಹ್ನ ೨ ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಬಲಿಜ ಸಮುದಾಯದ ಮುಖಂಡ ಹಾಗೂ ಕೆ.ಎಸ್.ಆರ್.ಟಿ.ಸಿ ನೌಕರರ ಸಂಘದ ಆರ್.ಪ್ರಸಾದ್ ಮಾತನಾಡಿ ನಗರ ಮತ್ತು ಗ್ರಾಮಾಂತರಪ್ರದೇಶಗಳಿಂದ ಸುಮಾರು ೭೦ ಕ್ಕೂ ಹೆಚ್ಚು ಪಲ್ಲಕ್ಕಿಗಳು ಆಗಮಿಸುವ ನಿರೀಕ್ಷೆ ಇರುವುದಾಗಿ ತಿಳಿಸಿದರು.ನಗರದ ಪ್ರಮುಖ ರಸ್ತೆಗಳಾದ ಕಠಾರಿಪಾಳ್ಯ ಮುಖ್ಯ ರಸ್ತೆ ಮೂಲಕ ಎಂ.ಜಿ.ರಸ್ತೆ, ಅಮ್ಮವಾರಿ ಪೇಟೆ,ಮೆಕ್ಕೆ ವೃತ್ತ ಸೇರಿ ರಂಗಮಂದಿರ ಬಳಿ ಮೆರವಣಿಗೆ ಕೊನೆಗಳ್ಳಲಿದೆ ಎಂದು ಹೇಳಿದರು.

ರಂಗಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಬಲಿಜ ನೌಕರರ ಸಂಘದ ವತಿಯಿಂದ ೨೦೨೩ -೨೪ ನೇ ಸಾಲಿನಲ್ಲಿ ಶೇ ೮೦ ಕ್ಕೂ ಹೆಚ್ಚು ಅಂಕ ಪಡೆದ ಬಲಿಜ ಸಮುದಾಯದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.

ಒಂದು ವೇಳೆ ಸಮುದಾಯದ ಯಾರಾದರೂ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳದಿದ್ದರೆ.ಸಮುದಾಯದ ಜಿಲ್ಲಾ ಅಧ್ಯಕ್ಷರ ಬಳಿ ತಮ್ಮ ಹೆಸರನ್ನು ಇದೇ ತಿಂಗಳ ೧೩ ರ ಒಳಗೆ ನೊಂದಾಯಿಸಿ ಕೊಳ್ಳಬಹುದೆಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡ ರುಗಳಾದ ಸಿ.ಆರ್.ಮನೋಹರ್,ವೇಣುಗೋಪಾಲ ಸೇರಿದಂತೆ ಅನೇಕ ಗಣ್ಯರು ಹಾಗೂ ಜಿಲ್ಲಾ ಮಟ್ಟದ ಬಲಜ ಮತ್ತು ಎಲ್ಲಾ ಸಮುದಾಯಗಳ ಮುಖಂಡರುಗಳು ಭಾಗವಹಿಸಲಿದ್ದಾರೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ರಘ( ಚಿಟ್ಟಿ) ಹಾಗೂ ಬಲಿಜ ಮುಖಂಡರಾದ ಪುಷ್ಠಿ ನಾರಾಯಣ ಸ್ವಾಮಿ, ಕೆ.ವಿ.ಸುರೇಶ್ ಕುಮಾರ್, ರೌತ್ ಶಂಕರಪ್ಪ,ಸಾಮಾ ಬಾಬು, ಸುರೇಶ್, ರಾಜೇಶ್, ಮಹೇಶ್ ಬಾಬು, ಅರುಣಮ್ಮ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

ಚಿತ್ರ : ಕೋಲಾರದಲ್ಲಿ ಮಾರ್ಚ ೧೪ ರಂದು ನಡೆಯಲಿರುವ ಶ್ರೀ ಯೋಗಿ ನಾರೇಯಣ ತಾತಯ್ಯನವರ ೨೯೯ ನೇ ಜಂಯತಿ ಬಗ್ಗೆ ಬಲಿಜ ಸಮುದಾಯದ ಹಿರಿಯ ಮುಖಂಡ ವೆಂಕಟಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande