ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ಯಾಯ
ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ಯಾಯ
ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ಯಾಯ


ಕೋಲಾರ, ೧೧ ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್.ಸಿ.- ಎಸ್.ಟಿ.ಗಳ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿ ಮಾಡದಿದ್ದರೆ ಆಡಳಿತ ಪಕ್ಷದ ಶಾಸಕರ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅಶೋಕ್ ರವರ ನೇತೃತ್ವದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆ ,ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಳೆದ ೨೦ ತಿಂಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮತಗಳ ಒಲೈಕೆಗಾಗಿ ಈ ರಾಜ್ಯದಲ್ಲಿರುವ ಬಹುಸಂಖ್ಯಾತರ ತೆರಿಗೆ ಹಣವನ್ನು ಅಲ್ಪಸಂಖ್ಯಾತರಿಗೆ ಕೊಟ್ಟು ರಾಜ್ಯದ ಬಹ ಸಂಖ್ಯಾತ ಜನತೆಗೆ ಅನ್ಯಾಯ ಮಾಡಿದೆ ಎಂದು ಟೀಕಿಸಿದರು.

ಬಜೆಟ್ ನಲ್ಲಿ ದೇವಸ್ಥಾನದ ಅರ್ಚಕರಿಗೆ, ಅಂಗನವಾಡಿ, ಬಿಸಿ ಊಟದ ನೌಕರರಿಗೆ, ಆಶಾ ಕಾರ್ಯಕರ್ತರಿಗೆ ಸಹ ಯಾವುದೇ ಹೆಚ್ಚಿನ ಸಂಬಳ ನೀಡಿದೆ ಮಸೀದಿಗಳ ಮೌಲಿಗಳಿಗೆ,ಧಾರ್ಮಿಕ ಗುರುಗಳಿಗೆ,ಇಮಾಮ್ ರವರಿಗೆ ನೀಡುತ್ತಿರುವ ಗೌರವ ಧನವನ್ನು ಐದರಿಂದ ಆರು ಸಾವಿರವರೆಗೂ ಹೆಚ್ಚಿಸಲಾಗಿದ್ದು, ಅಲ್ಪಸಂಖ್ಯಾತರನ್ನು ಒಲೈಸುವ ಬಜೆಟ್ ಇದಾಗಿದ್ದು, ಇದನ್ನು ನಾವು ಪಾಕಿಸ್ತಾನದ ಬಜೆಟ್ ಎಂದು ಹೇಳಬಹುದಾ ಎಂದರು.

ಬಜೆಟ್ ಸಂಪೂರ್ಣ ಬೋಗಸ್ ಬಜೆಟ್ ಆಗಿದ್ದು, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಆಶಯಗಳಿಗೆ ವಿರುದ್ದವಾದ ಬಜೆಟ್ ಇದ್ದಾಗಿದ್ದು, ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಿಕೆ ಮಾಡಿರುವುದನ್ನು ಖಂಡಿಸಿ ಆಡಳಿತ ಪಕ್ಷದ ಶಾಸಕರುಗಳು ಧ್ವನಿ ಎತ್ತಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ವಿದೇಶದಿಂದ ಬಂದ ಬಂಗಾರದ ಸ್ಮಗ್ಲಿಂಗ್ ನಲ್ಲಿ ನೇರವಾಗಿ ರಾಜ್ಯದ ಇಬ್ಬರು ಸಚಿವರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದ್ದು, ಗೃಹ ಇಲಾಖೆ ಸಂಪೂರ್ಣವಾಗಿ ವೈಫಲ್ಯವಾಗಿದೆ ಎಂದು ಮೂದಲಿಸಿದರು.

ಮಾಜಿ ಶಾಸಕ ಸಂಪಂಗಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ೨೦೨೫-೨೬ ನೇ ಸಾಲಿನ ಬಜೆಟ್ ನಲ್ಲಿ ದಲಿತರ ಮೀಸಲು ಹಣದೊಂದಿಗೆ ಕನ್ನ ಹಾಕುವ ಚಾಳಿಯನ್ನು ನಿರ್ಲಜ್ಞೆಯಿಂದ ಮತ್ತೆ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.

ಗ್ಯಾರೆಂಟಿ ಯೋಜನೆಯನ್ನು ಲಂಗೂ ಲಗಾಮು ಇಲ್ಲದೆ ಜಾರಿ ಮಾಡಲು ಹೊರಟಿರುವ ಈ ಸರ್ಕಾರ ಎಸ್.ಸಿ. ಎಸ್.ಪಿ,-ಟಿ.ಎಸ್.ಪಿ ಗಳಿಂದ ಈ ವರ್ಷ ೧೩೪೩೩.೮೪ ಸಾವಿರ ಕೋಟಿ ರೂಗಳನ್ನು ವರ್ಗಾವಣೆ ಮಾಡಲು ಹೇಳಿದೆ. ಸರ್ಕಾರ ಅಧಿಕಾರಕ್ಕೆ ಬಂದ ಒಟ್ಟು ಮೂರು ವರ್ಷಗಳಲ್ಲಿ ೩೮,೮೬೦.೨೨ ಕೋಟಿ ರೂಪಾಯಿಗಳನ್ನು ಬಳಸಿಕೊಂಡು ಸರ್ಕಾರ ಸತತವಾಗಿ ಮೂರನೇ ವರ್ಷವೂ ಸಹ ದಲಿತರ ಮೀಸಲು ನಿಧಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ಈ ನೀತಿಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದರು.

ಈ ವರ್ಷದ ಬಜೆಟ್ ನಲ್ಲಿಯೂ ನಿಗಮಗಳನ್ನು ಬಲಪಡಿಸುವ ಯಾವುದೇ ಪ್ರಯತ್ನ ಸರ್ಕಾರ ಮಾಡಿಲ್ಲ, ಮುಸ್ಲಿಮರಿಗೆ ಹಲವು ರೀತಿಯ ವಿಶೇಷ ಅನುದಾನವನ್ನು ಕೊಟ್ಟು,ದಲಿತ ಸಮುದಾಯಗಳನ್ನು ನಿರ್ಲಕ್ಷಿಸಿರುವುದೇ ಸಿದ್ದರಾಮಯ್ಯನವರ ಸಾಧನೆ ಎಂದು ಟೀಕಿಸಿದರು.

ವಿಧಾನ ಸಭೆಯಲ್ಲಿ ದಲಿತರಿಗೆ ಅನ್ಯಾಯ ಆಗುತ್ತಿರುವ ಬಗ್ಗೆ ಎಸ್.ಸಿ - ಎಸ್.ಟಿ ಶಾಸಕರು ಧ್ವನಿ ಎತ್ತಬೇಕು, ಸರ್ಕಾರ ತನ್ನ ನಿರ್ಧಾರದಿಂದ ಹೊರಬರಬೇಕು ಎಂದು ಆಗ್ರಹಿಸಿದರು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿ.ಜೆ.ಪಿ.ಜಿಲ್ಲಾ ಅಧ್ಯಕ್ಷ ಓಂ ಶಕ್ತಿ ಚಲಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷ ಕಪಾಲಿ ಶಂಕರ್, ಜಿಲ್ಲಾ ಬಿಜೆಪಿ ಮಹಿಳೆ ಅಧ್ಯಕ್ಷೆ ಅರುಣಮ್ಮ, ಕೆಂಬೋಡಿ ನಾರಾಯಣ ಸ್ವಾಮಿ, ದಲಿತ ಸಮುದಾಯದ ಮುಖಂಡರಾದ ಕೋದಂಡರಾಮ್, ವೆಂಕಟೇಶ್, ವೆಂಕಟಾಚಲಪತಿ, ಭಾಗವಹಿಸಿದ್ದರು.

ಚಿತ್ರ : ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande