ಮಸ್ಕಿ:  ಶ್ರೀ ಮಲ್ಲಿಕಾರ್ಜುನ ರಥೋತ್ಸವ - ಸಾವಿರಾರು ಭಕ್ತರು ಭಾಗಿ
ಮಸ್ಕಿ, 12 ಫೆಬ್ರವರಿ (ಹಿ.ಸ.) ಆ್ಯಂಕರ್ : ಭಾರತ ಹುಣ್ಣಿಮೆ ಪ್ರಯುಕ್ತ ಪಟ್ಟಣದ ಆರಾಧ್ಯ ದೈವ ಹಾಗೂ ಎರಡನೇ ಶ್ರೀಶೈಲ ಎಂದೇ ಖ್ಯಾತಿ ಇರುವ,ಈ ಭಾಗದ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಲ್ಲಿಕಾರ್ಜುನ ದೇವಸ್ಥಾನದ ದೇವರ ನೂತನ ರಥದ ಮಹಾರಥೋತ್ಸವವು ಸಾವಿರಾರು ಭಕ್ತರ ಜಯಘೋಷಗಳ, ಭಾಗ್ಯ ವೈಭವದೊಂದಿಗೆ
ಮಸ್ಕಿ: ಸಂಭ್ರಮದ ಶ್ರೀ ಮಲ್ಲಿಕಾರ್ಜುನ ರಥೋತ್ಸವ,ಸಾವಿರಾರು ಭಕ್ತರು ಭಾಗಿ


ಮಸ್ಕಿ, 12 ಫೆಬ್ರವರಿ (ಹಿ.ಸ.)

ಆ್ಯಂಕರ್ : ಭಾರತ ಹುಣ್ಣಿಮೆ ಪ್ರಯುಕ್ತ ಪಟ್ಟಣದ ಆರಾಧ್ಯ ದೈವ ಹಾಗೂ ಎರಡನೇ ಶ್ರೀಶೈಲ ಎಂದೇ ಖ್ಯಾತಿ ಇರುವ,ಈ ಭಾಗದ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಲ್ಲಿಕಾರ್ಜುನ ದೇವಸ್ಥಾನದ ದೇವರ ನೂತನ ರಥದ ಮಹಾರಥೋತ್ಸವವು ಸಾವಿರಾರು ಭಕ್ತರ ಜಯಘೋಷಗಳ, ಭಾಗ್ಯ ವೈಭವದೊಂದಿಗೆ ಬುಧವಾರ ಸಂಜೆ 6:00ಗಂಟೆಗೆ ವಿಜೃಂಭಣೆಯಿಂದ ಮಹಾರಥೋತ್ಸವ ನಡೆಯಿತು.

ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಬೆಳಗ್ಗೆ ದೇವಸ್ಥಾನದಲ್ಲಿನ ಈಶ್ವರ ಲಿಂಗಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ರಥೋತ್ಸವದ ಕಳಸ ಪ್ರತಿಷ್ಠಾಪನೆ ನಡೆಯಿತು. ದೇವಸ್ಥಾನದಲ್ಲಿ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿದ್ದರು.ದೀಡ್ ನಮಸ್ಕಾರ ಹಾಕುವ ಮೂಲಕ ಅನೇಕ ಭಕ್ತರು ತಮ್ಮ ಅರಿಕೆ ಸಲ್ಲಿಸಿದರು.

ಸಂಜೆ 6:00 ಗಂಟೆಗೆ ಮಲ್ಲಿಕಾರ್ಜುನನ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಯನ್ನು ರಥದ ಸುತ್ತ 5 ಬಾರಿ ಪ್ರಧಕ್ಷಣೆ ಹಾಕಿಸಿದ ನಂತರ ಪಲ್ಲಕ್ಕಿಯಲ್ಲಿನ ಉತ್ಸವ ಮೂರ್ತಿಯನ್ನು ಭಕ್ತರ ಜಯಘೋಷ ಹಾಗೂ ಹರ್ಷೋದ್ದಾರಗಳ ನಡುವೆ ನೂತನ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರು ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು, ಹೂವು ತೂರಿ ನಮಿಸಿ ಭಕ್ತಿ ಸಮರ್ಪಿಸಿದರು. ರಥವು ಮಲ್ಲಿಕಾರ್ಜುನ ದೇವಸ್ಥಾನದಿಂದ ದೈವದ ಕಟ್ಟೆಯ ಮುಖಾಂತರ ಕಲೀಲ್ ವೃತ್ತದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪಿ ನಂತರ ತೇರಿನ ಮನೆ ಹತ್ತಿರ ತಂದು ನಿಲ್ಲಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande