ವಾಲ್ಮೀಕಿ ವಿವಿ : ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟ
ರಾಯಚೂರು, 06 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಯುವ ಜನತೆ ಇಂದಿನ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಾಲದಲ್ಲಿ ಕೇವಲ ಮೊಬೈಲ್ ಬಳಕೆಗೆ ಮೊರೆ ಹೋಗಿ ದೈಹಿಕ ಚಟುವಟಿಕೆಗಳನ್ನು ಅಲಕ್ಷಿಸಿದರೆ ಆರೋಗ್ಯ ಕ್ಷೀಣಿಸುತ್ತದೆ. ಕ್ರೀಡೆಯಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರೀಯಾಶೀಲ ಬದುಕು ಸಾಗಿಸಲ
ವಾಲ್ಮೀಕಿ ವಿವಿ :  ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟ


ವಾಲ್ಮೀಕಿ ವಿವಿ :  ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟ


ರಾಯಚೂರು, 06 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಯುವ ಜನತೆ ಇಂದಿನ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಾಲದಲ್ಲಿ ಕೇವಲ ಮೊಬೈಲ್ ಬಳಕೆಗೆ ಮೊರೆ ಹೋಗಿ ದೈಹಿಕ ಚಟುವಟಿಕೆಗಳನ್ನು ಅಲಕ್ಷಿಸಿದರೆ ಆರೋಗ್ಯ ಕ್ಷೀಣಿಸುತ್ತದೆ. ಕ್ರೀಡೆಯಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರೀಯಾಶೀಲ ಬದುಕು ಸಾಗಿಸಲು ಸಾಧ್ಯ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಸಚಿವರು (ಮೌಲ್ಯಮಾಪನ) ಡಾ.ಜ್ಯೋತಿ ಧಮ್ಮ ಪ್ರಕಾಶ್ ಅವರು ಹೇಳಿದ್ದಾರೆ.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ 2025-26 ನೇ ಸಾಲೀನ ತೃತೀಯ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ವಿ.ಆರ್.ಇ.ಟಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದು, ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸ್ಪರ್ಧೆ ನಮ್ಮೊಂದಿಗಿರಲಿ ಪ್ರತಿಸಲ ಯಾವುದೇ ಒಂದು ವಿಷಯದಲ್ಲಿ ಕ್ಷೇತ್ರದಲ್ಲಿ ಕ್ರೀಡೆಯಲ್ಲಿ ಮಾಡಿದ ಪ್ರಯತ್ನಕ್ಕೆ ಪ್ರತಿಫಲ ಸಿಗದೆ ಹೋದರೆ ಪಟ್ಟಂತಹ ಆ ಪ್ರಯತ್ನದಲ್ಲಿನ ನ್ಯೂನತೆಗಳನ್ನು ಸುಧಾರಿಸಿಕೊಂಡು ನಮಗೆ ನಾವೇ ಸ್ಪರ್ಧಿಗಳಾಗಿ ಜಯಿಸಬೇಕೇ ಹೊರತು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ ಆದರೆ ಆಯಾ ಕ್ಷೇತ್ರದಲ್ಲಿನ ಉತ್ತಮ ವ್ಯಕ್ತಿಗಳನ್ನು ಸ್ಪೂರ್ತಿಯನ್ನಾಗಿಸಿಕೊಂಡು ಮುಂದೆಸಾಗಬೇಕು. ನಮ್ಮ ವಿವಿ ವ್ಯಾಪ್ತಿಯ ದೈಹಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನದೊಂದಿಗೆ ಉತ್ತಮ ಕ್ರೀಡಾಪಟುಗಳಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವು ಬೆಳೆದು ನಮ್ಮ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಬೇಕು ಎಂದು ಶುಭಹಾರೈಸಿ ಸಮಾರೋಪದ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕೃಷಿ ವಿವಿಯ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಡಾ.ರಾಜಣ್ಣ ಮಾತನಾಡಿ, ಸ್ಪರ್ಧಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸುತ್ತೀರಿ ಎನ್ನುವ ಭರವಸೆ ನನಗಿದೆ. ಕ್ರೀಡಾಪಟುಗಳು ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಕೀರ್ತಿತರಬೇಕು. ದಿನಕ್ಕೊಂದು ಗಂಟೆ ವ್ಯಾಯಾಮ, ದಿನವೆಲ್ಲಾ ದೇಹಕ್ಕೆ ಆರಾಮ ದೇಶದ ಸಂಪತ್ತುಗಳಿಗಿಂತ ದೇಹದ ಸಂಪತ್ತು ಶ್ರೇಷ್ಠ ಎಂದು ಅವರು ಹೇಳಿದರು.

ಕಾನೂನು ಸಲಹೆಗಾರರು ಮತ್ತು ವಕೀಲರಾದ ವಿಜಯಲಕ್ಷ್ಮೀ ಪಾಸೋಡಿ ಮಾತನಾಡಿ, ಕ್ರೀಡಾ ಪಟುಗಳಿಗೆ ಸ್ವಯಂ ಪ್ರೇರಣೆಯಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ. ಕ್ರೀಡೆಯಲ್ಲಿ ಸೋಲು ಗೆಲುವು ನಿಶ್ಚಿತ ಆದರೆ ಪಾಲ್ಗೋಳ್ಳುವಿಕೆ ಮುಖ್ಯ. ಬುದ್ಧಿ ಜೀವಿಗಳಾಗಿ ಅತ್ಯಂತ ಉತ್ತಮ ನಾಗರಿಕರಾಗಿ ಈ ಸಮಾಜದಲ್ಲಿ ಬೆಳೆಯಿರಿ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ಲತಾ.ಎಂ.ಎಸ್. ಮಾತನಾಡಿ, ಕ್ರೀಡಾಕೂಟಕ್ಕೆ ಶ್ರಮಿಸಿದ ದೈ.ಶಿ. ನಿರ್ದೇಶಕರಿಗೆ ಮತ್ತು ಬಿಪಿಎಡ್ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸ್ಪರ್ಧಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದು, ಶಿಸ್ತು, ಸಮಯ ಪಾಲನೆ, ತಂಡದ ಮನೋಭಾವ, ಆತ್ಮವಿಶ್ವಾಸ ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸುತ್ತವೆ ಎಂದು ಅವರು ಹೇಳಿದರು.

ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ.ನಾಗರತ್ನ ಎಮ್.ನಾಯ್ಕ ಮಾತನಾಡಿ, ಗುರಿ, ಛಲ ಬಿಡದಂತೆ ಕ್ರೀಡಾ ಪ್ರತಿಭೆಯು ಒಳಗಿನಿಂದ ಅರಳಬೇಕು, ನಮ್ಮ ಉತ್ತಮ ಆಲೋಚನೆ ಹಾಗೂ ಸತತ ಪ್ರಯತ್ನದಿಂದಾಗಿ ಯಶಸ್ಸು ಖಂಡಿತ ತಮ್ಮದಾಗುತ್ತದೆ ಎಂದು ಸ್ಪರ್ಧಾರ್ಥಿಗಳಿಗೆ ತಿಳಿಸಿದರು.

ವಿವಿಯ ವಿದ್ಯಾವಿಷಯಕ ಪರಿಷತ್ ಸದಸ್ಯರಾದ ಡಾ.ಜೆ.ಎಲ್.ಈರಣ್ಣ ಮಾತನಾಡಿ, ಕ್ರೀಡಾಪಟುಗಳು ದೈಹಿಕವಾಗಿ ಮಾನಸಿಕವಾಗಿ ಸಮತೋಲನ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿ ಕ್ರೀಡೆಯಲ್ಲಿ ವಿಜೇತರಾದವರಿಗೆ ಅಭಿನಂದನೆ ಸಲ್ಲಿಸಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ.ವಿರುಪಾಕ್ಷಿ ಬೆಟಗೇರಿ ಮಾತನಾಡಿ, ಕ್ರೀಡಾ ಪಟುಗಳು ಸೋಲು ಗೆಲುವನ್ನು ಸರಿಸಮಾನವಾಗಿ ತೆಗೆದುಕೊಂಡಾಗ ಮಾತ್ರ ನಿಜವಾದ ಗೆಲುವು ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.

ದಾವಣಗೆರೆ ವಿವಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ನಂದೀಶ್ವರಪ್ಪ ಬಿ.ಪಿ. ಅವರು ಮಾತನಾಡಿ, ಸತತ ಪ್ರಯತ್ನದಿಂದಲೂ ಸೋಲನ್ನು ಅನುಭವಿಸಿದರೆ ಅದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಮಾನಗಳಲ್ಲಿ ಕ್ರೀಡಾಪಟುಗಳು ಗೆಲುವನ್ನು ಖಚಿತ ಪಡಿಸಿಕೊಳ್ಳುತ್ತೀರಿ ಅದಕ್ಕೆ ನಿರಂತರ ಪ್ರಯತ್ನ ಅಗತ್ಯ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ವಿ.ಆರ್.ಇ.ಟಿ ಸಂಸ್ಥೆಯ ಅಧ್ಯಕ್ಷರಾದ ಮಹಾದೇವಿ ಪಾಸೋಡಿ, ವಿವಿಯ ನಿವೃತ್ತ ದೈ.ಶಿ ನಿರ್ದೇಶಕರಾದ ವಾಸುದೇವ ಜೇವರ್ಗಿ, ದೇವದುರ್ಗ ಜಿಎಫ್‍ಜಿಸಿಯ ಡಾ.ಸುಭಾಷ್ ಚಂದ್ರ ಪಾಟೀಲ್, ಪ್ರಾಂಶುಪಾಲರಾದ ರೂಡ್ಸ್ ಕಾಲೇಜ್‍ನ ಕೆಂಪಣ್ಣ, ಇನ್‍ಫ್ಯಾಂಟ್ ಜೀಸಸ್ ಕಾಲೇಜ್‍ನ ಭೀಮಣ್ಣ, ವಿವಿಯ ದೈ.ಶಿ ಮತ್ತು ಕ್ರೀಡಾ ವಿಭಾಗದ ಸಂಯೋಜಕರಾದ ಮಲ್ಲಿಕಾರ್ಜುನ ಎನ್. ವೇದಿಕೆ ಮೇಲೆ ಉಪಸ್ಥಿತರಿದ್ದರು.

ವಿಆರ್‍ಇಟಿ ಕಾಲೇಜಿನ ವಿದ್ಯಾರ್ಥಿನಿಯರಾದ ದೇವಮ್ಮ ಸಂಗಡಿಗರು ಪ್ರಾರ್ಥಿಸಿದರು, ಕಾರ್ಯದರ್ಶಿಗಳಾದ ರಾಜಶೇಖರ ಪಾಸೋಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಮಹಿಳಾ ಜಿಎಫ್‍ಜಿಸಿ ದೈ.ಶಿ. ನಿರ್ದೇಶಕರಾದ ಪ್ರಸನ್ನ ನಿರೂಪಿಸಿದರು, ಶಹಾಪುರದ ಜಿಎಫ್‍ಜಿಸಿ ದೈ.ಶಿ.ನಿರ್ದೇಶಕರಾದ ಡಾ.ನಾಗರೆಡ್ಡಿ ಅತಿಥಿ ಪರಿಚಯ ಮಾಡಿದರು, ಸಿಂಧನೂರಿನ ದೈ.ಶಿ.ನಿರ್ದೇಶಕರಾದ ಡಾ.ಶಿವು.ಕೆ ವಂದಿಸಿದರು.

2025-26 ನೇ ಸಾಲೀನ ತೃತೀಯ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಹಿಣಿ ಪ್ರಶಸ್ತಿಯನ್ನು ಪುರುಷ ವಿಭಾಗದಲ್ಲಿ ಮಾನ್ವಿಯ ಜಿಎಫ್‍ಜಿಸಿ ಪಡೆದರೆ, ಮಹಿಳಾ ವಿಭಾಗದಲ್ಲಿ ಹಾಗೂ ಮಹಿಳಾ ಮತ್ತು ಪುರುಷ ವಿಭಾಗದಲ್ಲಿ ಒಟ್ಟುಗೂಡಿ ಸಮಗ್ರ ವೀರಾಗ್ರಹಿಣಿ ಪ್ರಶಸ್ತಿಯನ್ನು ರಾಯಚೂರಿನ ವಿಆರ್‍ಇಟಿ ಕಾಲೇಜು ಪಡೆಯಿತು.

ಈ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪಾರಿತೋಷಕ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande