ಸೌರ ಶಕ್ತಿಯನ್ನು ಜನಪ್ರಿಯಗೊಳಿಸುವಲ್ಲಿ ಬಿಡಿಸಿಸಿಐ ಬೆಂಬಲ : ಅವ್ವಾರು ಮಂಜುನಾಥ್
ಬಳ್ಳಾರಿ, 06 ಡಿಸೆಂಬರ್ (ಹಿ.ಸ.) : ಆ್ಯಂಕರ್ : ನೈಸರ್ಗಿಕವಾದ ಹಸಿರು ಶಕ್ತಿಯಾಗಿರುವ ಸೌರ ಶಕ್ತಿಯನ್ನು ಜನಸ್ನೇಹಿಯಾಗಿ ಜನಪ್ರಿಯಗೊಳಿಸುವಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸದಾ ಬೆಂಬಲ ನೀಡುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ತಿಳಿಸಿದ್ದಾರೆ.
ಸೌರ ಶಕ್ತಿಯನ್ನು ಜನಪ್ರಿಯಗೊಳಿಸುವಲ್ಲಿ ಬಿಡಿಸಿಸಿಐ ಬೆಂಬಲ : ಅವ್ವಾರು ಮಂಜುನಾಥ್


ಬಳ್ಳಾರಿ, 06 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ನೈಸರ್ಗಿಕವಾದ ಹಸಿರು ಶಕ್ತಿಯಾಗಿರುವ ಸೌರ ಶಕ್ತಿಯನ್ನು ಜನಸ್ನೇಹಿಯಾಗಿ ಜನಪ್ರಿಯಗೊಳಿಸುವಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸದಾ ಬೆಂಬಲ ನೀಡುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಟಾಟಾ ಪವರ್ ರಿನಿವಬಲ್ ಎನರ್ಜಿ ಲಿಮಿಟೆಡ್‍ನ ಜಂಟಿ ಆಶ್ರಯದಲ್ಲಿ ನಡೆದ ‘ಸೌರ ಶಕ್ತಿಯ ಜಾಗೃತಿ’ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ನೈಸರ್ಗಿಕವಾಗಿ ಹೇರಳವಾಗಿ ಸಿಗುತ್ತಿರುವ ಸೂರ್ಯನ ಶಾಖವನ್ನು ಬಳಕೆ ಮಾಡಿಕೊಂಡು ಸೌರ ವಿದ್ಯುತ್ ಶಕ್ತಿಯನ್ನಾಗಿ ಬಳಕೆ ಮಾಡಲಾಗುತ್ತಿದೆ. ಈ ವಿದ್ಯುತ್ ಪರಿಸರ ಸ್ನೇಹಿ, ಗ್ರಾಹಕ ಸ್ನೇಹಿ ಮತ್ತು ಶುದ್ಧ ಶಕ್ತಿಯ ಮೂಲವಾಗಿದೆ. ಈ ಶಕ್ತಿಯನ್ನು ಪ್ರತಿಯೊಬ್ಬರೂ ಸದ್ಭಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಟಾಟಾ ಪವರ್ ರಿನಿವಬಲ್ ಎನರ್ಜಿ ಲಿಮಿಟೆಡ್‍ನ ಗುಣಮಟ್ಟದ - ನಾವೀನ್ಯ ತಂತ್ರಜ್ಞಾನದ ಸೇವೆಯನ್ನು ನೀಡುತ್ತಿದೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು,

ಸೌರ ಶಕ್ತಿ ಶುದ್ಧವಾದ ಮತ್ತು ನವೀಕರಿಸಬಹುದಾದ ಶಕ್ತಿ. ಸೌರ ಶಕ್ತಿಯು ಪರಿಸರ ಮತ್ತು ಗ್ರಾಹಕ ಸ್ನೇಹಿ. ಸೌರ ಶಕ್ತಿಯ ಬಳಕೆ ಹೆಚ್ಚಿದಲ್ಲಿ ಇತರೆ ಇಂಧನ ಮೂಲಗಳ ಮೇಲಿನ ಅವಲಂಭನೆಯನ್ನು ತಪ್ಪಿಸಬಹುದಾಗಿದೆ ಎಂದರು.

ಸಿಡ್ಬಿಯ ವಿಭಾಗೀಯ ವ್ಯವಸ್ಥಾಪಕರಾದ ಲವಕುಮಾರ್ ಅವರು, ಸೌರ ಶಕ್ತಿ ಯೋಜನೆಗಳಿಗೆ ಸುಲಭವಾಗಿ ಮತ್ತು ತ್ವರಿತವಾಗಿ ಸಿಗುವ ಆರ್ಥಿಕ ಸೌಲಭ್ಯಗಳು ಮತ್ತು ವಿವಿಧ ಸಾಲ ಸೌಲಭ್ಯಗಳ ಕುರಿತು ಮಾತನಾಡಿದರು.

ಟಾಟಾ ಪವರ್ ರಿನಿವಬಲ್ ಎನರ್ಜಿ ಲಿಮಿಟೆಡ್‍ನ ವಿಭಾಗೀಯ ವ್ಯವಸ್ಥಾಪಕರಾದ ಮೆಹಬೂಬ್ ಬೇಗ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿ, ರೂಫ್-ಟಾಪ್ ಸೌರ ಶಕ್ತಿ ತಂತ್ರಜ್ಞಾನ, ಹಣಕಾಸು ಸೌಲಭ್ಯಗಳು ಮತ್ತು ಇನ್ನಿತರೆ ವಿಷಯಗಳ ಕುರಿತು ವಿವರಿಸಿದರು.

ಟಾಟಾ ಪವರ್ ರಿನಿವಬಲ್ ಎನರ್ಜಿ ಲಿಮಿಟೆಡ್‍ನ ಅವಿನಾಶ್ ಅವರು ವಂದನಾರ್ಪಣೆ ಸಲ್ಲಿಸಿದರು.

ಕರ್ನಾಟಕ ಇಂಡಸ್ಟ್ರಿಯಲ್ ಅಸೋಸಿಯೇಷನ್‍ನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ವಿ. ರಾಮಚಂದ್ರ, ಸ್ಪಾಂಜ್ ಅಂಡ್ ಐರನ್ ಅಸೋಸಿಯೇಷನ್‍ನ ಕಾರ್ಯದರ್ಶಿ ಎಸ್.ಪಿ. ವೆಂಕಟೇಶ್, ಬಳ್ಳಾರಿ ಜಿಲ್ಲಾ ಕಾಟನ್ ಇಂಡಸ್ಟ್ರೀಸ್ ಅಸೋಸಿಯೇಷನ್ ವಿ.ವೆಂಕಟೇಶ, ಬಳ್ಳಾರಿ ಜಿಲ್ಲಾ ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ. ನಾಗರಾಜ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಸೊಂತಗಿರಿಧರ್, ಜಂಟಿ ಕಾರ್ಯದರ್ಶಿಗಳಾದ, ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ಖಜಾಂಚಿಗಳಾದ ನಾಗಳ್ಳಿ ರಮೇಶ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿಎ ಕೆ.ರಾಜಶೇಖರ ಅವರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande