ನಾಯಿಗಳ ದತ್ತು ಪಡೆಯಲು ಆಸಕ್ತ ನಾಗರಿಕರು, ಎನ್‌ಜಿಒಗಳಿಗೆ ಅವಕಾಶ
ಹುಬ್ಬಳ್ಳಿ, 06 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯತಿ ಮತ್ತು ಪ್ರಮುಖ ಪ್ರಾಣಿದಯಾ ಸಂಘಗಳ ಸಹಯೋಗದೊಂದಿಗೆ ಬೀದಿನಾಯಿಗಳ ಮತ್ತು ಸಮುದಾಯದ ನಾಯಿಗಳನ್ನು ದತ್ತು ಪಡೆಯುವ ಆಸಕ್ತ ನಾಗರಿಕರು ಹಾಗೂ ಎನ್.ಜಿ.ಓ ಸಂಸ್ಥೆಗಳು ಹಾಗೂ ಪ್ರ
ನಾಯಿಗಳ ದತ್ತು ಪಡೆಯಲು ಆಸಕ್ತ ನಾಗರಿಕರು, ಎನ್‌ಜಿಒಗಳಿಗೆ ಅವಕಾಶ


ಹುಬ್ಬಳ್ಳಿ, 06 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯತಿ ಮತ್ತು ಪ್ರಮುಖ ಪ್ರಾಣಿದಯಾ ಸಂಘಗಳ ಸಹಯೋಗದೊಂದಿಗೆ ಬೀದಿನಾಯಿಗಳ ಮತ್ತು ಸಮುದಾಯದ ನಾಯಿಗಳನ್ನು ದತ್ತು ಪಡೆಯುವ ಆಸಕ್ತ ನಾಗರಿಕರು ಹಾಗೂ ಎನ್.ಜಿ.ಓ ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ಪ್ರಾಣಿ ಪ್ರೇಮಿಯು ಈ ನೈತಿಕ ಕಾರ್ಯದಲ್ಲಿ ಪಾಲ್ಗೊಂಡು ಪ್ರಾಣಿಗಳಿಗೆ ಮನೆ ನೀಡುವ ಅವಕಾಶವನ್ನು ಬಳಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ www.http://kundagoltown.mrc.gov.in ಅಥವಾ ಕುಂದಗೋಳ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಕುಂದಗೋಳ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪಿ. ಜಿ. ದೊಡ್ಡಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande