ಪಿಎಸ್‍ಐ ಈರಣ್ಣ ರಿತ್ತಿ ಅಮಾನತ್‍ಗೆ ಆಗ್ರಹಿಸಿ ಧರಣಿಯಲ್ಲಿ ಪಾಲ್ಗೊಳ್ಳಲು ಮಾಜಿ ಸೈನಿಕರ ಸಂಘಕ್ಕೆ ಆಗ್ರಹ
ಗದಗ, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗದಗ ಶಿರಹಟ್ಟಿ ತಾಲೂಕ ದೇವಿಹಾಳ ಗ್ರಾಮದ ಮುಗ್ಧ ಪರಿಶಿಷ್ಟ ಜಾತಿಗೆ ಸೇರಿರುವ ರೈತ ಸೋಮಪ್ಪ ಲಮಾಣಿ ಜಮೀನಿನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶಿರಹಟ್ಟಿ ಪಿಎಸ್‍ಐ ಈರಣ್ಣ ರಿತ್ತಿ ದೈಹಿಕವಾಗಿ ಹಲ್ಲೆ ನಡೆಸಿ ಲಂಬಾಣಿ ಜನಾಂಗವನ್ನು ನಿ
ಫೋಟೋ


ಗದಗ, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಶಿರಹಟ್ಟಿ ತಾಲೂಕ ದೇವಿಹಾಳ ಗ್ರಾಮದ ಮುಗ್ಧ ಪರಿಶಿಷ್ಟ ಜಾತಿಗೆ ಸೇರಿರುವ ರೈತ ಸೋಮಪ್ಪ ಲಮಾಣಿ ಜಮೀನಿನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶಿರಹಟ್ಟಿ ಪಿಎಸ್‍ಐ ಈರಣ್ಣ ರಿತ್ತಿ ದೈಹಿಕವಾಗಿ ಹಲ್ಲೆ ನಡೆಸಿ ಲಂಬಾಣಿ ಜನಾಂಗವನ್ನು ನಿಂದಿಸಿ ಸುಳ್ಳು ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಭಂಧಿಸಿದಂತೆ ದಲಿತ ರೈತನ ಪರವಾಗಿ ಹೋರಾಟ ನಡೆಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಅವರಿಗೆ ದಲಿತ ಮಿತ್ರ ಮಂಡಳಿ ಸದಸ್ಯರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮಿತ್ರ ಮಂಡಳಿಯ ಸಂಚಾಲಕ ಕುಮಾರ ನಡಗೇರಿ ಪಿಎಸ್‍ಐ ಈರಣ್ಣ ರಿತ್ತಿ ಮತ್ತು ಸಂಗಡಿಗರು ಸೋಮಪ್ಪ ಲಮಾಣಿ ಮೇಲೆ ನಡೆಸಿದ ದೈಹಿಕ ಹಲ್ಲೆಯಿಂದಾಗಿ ಸೋಮಪ್ಪ ಲಮಾಣಿಯ ಮೂತ್ರಕೋಶಕ್ಕೆ ಬಾವು ಬಂದು ಆರೋಗ್ಯ ಹದಗೆಟ್ಟಿದೆ.ಪಿಎಸ್‍ಐ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಭಂಧಿಸಿದಂತೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಈರಣ್ಣ ರಿತ್ತಿ ಮೇಲೆ ಎಫ್.ಆಯ್.ಆರ್ ದಾಖಲಾಗಿದೆ.

ಲಕ್ಷ್ಮೇಶ್ವರದಲ್ಲಿ ಪಿಎಸ್‍ಐ ಆಗಿದ್ದ ಸಂದರ್ಭದಲ್ಲಿ ವಿಜಯದಶಮಿಯಂದು ಮುಸ್ಲೀಂರನ್ನು ಸಂತುಷ್ಟಿಗೋಳಿಸಲು ದುರ್ಗಾದೇವಿ ಮೂರ್ತಿಯನ್ನು ಶಾಂತಿಯುತವಾಗಿ ವಿಸರ್ಜಿಸಿ ಮನೆಗೆ ಬರುತ್ತಿದ್ದ ಮುಗ್ಧ ಗೋಸಾವಿ ಜನಾಂಗದ ಮಹಿಳೆಯರು,ಯುವಕರ ಮೇಲೆ ವಿನಾಕಾರಣ ಲಾಠಿಯಿಂದ ಹಲ್ಲೆ ನಡೆಸಿದ್ದರು.

ಹಿಂದು ಸಂಘಟನೆಗಳು ಹೋರಾಟ ನಡೆಸಿ ಲಕ್ಷ್ಮೇಶ್ವರ ಬಂದ್ ಕರೆ ನೀಡಿದಾಗ ಈರಣ್ಣ ರಿತ್ತಿ ಅವರನ್ನು ಬೆಳಗಾಂವಿಗೆ ವರ್ಗಾಯಿಸಲಾಗಿತ್ತು. ವರ್ಗಾವಣೆಗೆ ಕಾರಣವಾಗಿದ್ದ ಹಿಂದೂಗಳು,ಹಿಂದೂ ಸಂಘಟನೆಗಳ ಮೇಲೆ ಪಿಎಸ್‍ಐ ಈರಣ್ಣ ರಿತ್ತಿ ಕೆಂಡ ಕಾರುತ್ತಿದ್ದಾರೆ. ಹೇಗಾದರೂ ಮಾಡಿ ಹಿಂದೂಗಳು, ಹಿಂದೂ ಸಂಘಟನೆಗಳ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ.ಇದರ ಮೊದಲ ಹಂತವಾಗಿಯೇ ಸೋಮಪ್ಪ ಲಮಾಣಿಯನ್ನು ಇಸ್ಪೀಟಾಡದಿದ್ದರೂ ಸಹ ಇಸ್ಪೀಟ್ ಆಡಿದ್ದಾರೆಂದು ಸುಳ್ಳು ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡಿದ್ದಾರೆ.

ಕಾನೂನಿನಲ್ಲಿ ಎಲ್ಲಿಯೂ ಸಿಲುಕಿಕೊಳ್ಳಬಾರದೆಂದು ಸೋಮಪ್ಪ ಲಮಾಣಿ ಕೈಯಲ್ಲಿ ಇಸ್ಪೀಟ್ ಎಲೆಗಳನ್ನು ನೀಡಿ ಬಲವಂತವಾಗಿ ಇಸ್ಪೀಟ್ ಆಡಿದಂತೆ ದೃಶ್ಯ ಸೃಷ್ಟಿಸಿ ವಿಡೀಯೋ ಚಿತ್ರಿಕರಣ ಮಾಡಿಕೊಂಡು ಪದೇ ಪದೇ ಪ್ರಕರಣ ದಾಖಲಿಸುವದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದರು.

ಕಳೆದ ವರ್ಷ ಲಕ್ಷ್ಮೇಶ್ವರದಲ್ಲಿನ ಘಟನೆಯನ್ನು ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ಲಕ್ಷ್ಮೇಶ್ವರ ಬಂದ್‍ಗೆ ಕರೆ ನೀಡಿದ ಸಂದರ್ಭದಲ್ಲಿ ಬಂದ್ ಕರೆಯನ್ನುವಿಫಲಗೋಳಿಸಲು ಇದೇ ಪಿಎಸ್‍ಐ ಈರಣ್ಣ ರಿತ್ತಿ ಲಕ್ಷಾಂತರ ರೂಪಾಯಿಗಳನ್ನು ವಿವಿಧ ಸಂಘಟನೆಗಳಿಗೆ ನೀಡಿದ್ದರು. ಇದರ ವಿಡೀಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಯಾವದೇ ದಕ್ಷ,ಪ್ರಾಮಾಣಿಕ ಅಧಿಕಾರಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುವದನ್ನು ನೋಡಿದಲ್ಲಿ ಅಧಿಕಾರಿಯ ಪ್ರಾಮಾಣಿಕತೆ,ದಕ್ಷತೆಯ ಬಗ್ಗೆ ತಿಳಿಯುತ್ತದೆ.

ಸರಕಾರಿ ಸೇವೆಯ ಸಂಬಳದೊಂದಿಗೆ ಲಕ್ಷಾಂತರ ರೂಪಾಯಿ ಲಂಚ ದೊರೆತಾಗ ಮಾತ್ರವೇ ಇಂತಹ ಅನಗತ್ಯ ವೆಚ್ಚಗಳನ್ನು ಮಾಡಲು ಸಾಧ್ಯವಾಗಲಿದೆ. ಶಿರಹಟ್ಟಿ ತಾಲೂಕನಲ್ಲಿಯೇ ಸರಕಾರಿ ಸೇವೆಯೊಂದಿಗೆ ಲಕ್ಷಾಂತರ ರೂಪಾಯಿ ಆಮದನಿಯಿರುವ ಮರಳು ಮಾಫೀಯಾ,ಅಕ್ಕಿ,ಇಸ್ಪೀಟ್,ಜೂಜಾಟ ಸೇರಿದಂತೆ ಆಕ್ರಮಗಳಿಗೆ ಪರೋಕ್ಷವಾಗಿ ಸಹಾಯ,ಸಹಕಾರ ನೀಡುವ ಮೂಲಕ ಈರಣ್ಣ ರಿತ್ತಿ ಲಕ್ಷಾಂತರ ರೂಪಾಯಿ ಕಮಾಯಿಸುತ್ತಿದ್ದಾರೆಂದು ಆರೋಪಿಸಿರು.

ಪರಿಶಿಷ್ಟ ಜಾತಿಯ ರೈತ ಸೋಮಪ್ಪ ಲಮಾಣಿ ಮೇಲೆ ಈರಣ್ಣ ರಿತ್ತಿಯಿಂದ ನಡೆದ ದೌರ್ಜನ್ಯ ಖಂಡಿಸಿ ಪಿಎಸ್‍ಐ ಈರಣ್ಣ ರಿತ್ತಿ ಅಮಾನತ್‍ಗೋಳಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿಯಲ್ಲಿ ತಮ್ಮ ಸಂಘಟನೆಯ ಸದಸ್ಯರೊಂದಿಗೆ ಪಾಲ್ಗೊಂಡು ಅನ್ಯಾಯವನ್ನು ಖಂಡಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ,ಹಲ್ಲೆಗೋಳಗಾಗಿರುವ ಸೋಮಪ್ಪ ಲಮಾಣಿ, ಗಂಗವ್ವ ಲಮಾಣಿ,ಸತೀಶ ಕುಂಬಾರ,ಸದಾನಂದ ಗುರ್ಲಹೊಸೂರ,ಶಿವಯೋಗಿ ಹಿರೇಮಠ,ಈರಣ್ಣ ಗಾಣಿಗೇರ,ವಿನಾಯಕ ಹುಯೀಲಗೋಳ,ಸಾಗರ ಹುಯೀಲಗೋಳ,ಕೃಷ್ಣಾ ಹುಯೀಲಗೋಳ,ಪಂಚಾಕ್ಷರಿ ಸಾಲಿಮಠ,ಹುಲಿಗೆಪ್ಪ ವಾಲ್ಮೀಕಿ,ಅನೀಲ ಮುಳ್ಳಾಳ,ವಿಶಾಲ ಗೋಕಾವಿ, ಈಶ್ವರ ಕಾಟವಾ ಮುಂತಾದವರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande