
ಗದಗ, 05 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ತೊಗರಿಯಲ್ಲಿ ಕಾಯಿಕೊರಕದ (ಹೆಲಿಕೊವರ್ಪಾ) ನಿರ್ವಹಣೆಗಾಗಿ ಶೇ. 25-50ರಷ್ಟು ಹೂ ಬಿಡುವ ಸಮಯದಲ್ಲಿ ಮತ್ತು ಕಾಯಿ ಬಲಿಯುವ ಹಂತದಲ್ಲಿದ್ದಾಗ ಮೀಟರಿಗೆ 1 ಕೀಡೆ ಅಥವಾ 10 ಗಿಡಗಳಲ್ಲಿ 1 ಕೀಡೆ ಕಂಡುಬಂದಾಗ ಅಥವಾ ಪ್ರತಿ ಗಿಡದಲ್ಲಿ 2 ತತ್ತಿ ಅಥವಾ ಒಂದು ಕೀಡೆ ಕಾಣಿಸಿಕೊಂಡರೆ ಮೊದಲನೆ ಸಿಂಪರಣೆಯಾಗಿ ತತ್ತಿ ನಾಶಕಗಳಾದ 0.6 ಗ್ರಾಂ. ಥೈಯೊಡಿಕಾರ್ಬ 75ಡಬ್ಲೂ.ಪಿ. ಅಥವಾ 2 ಮಿ.ಲೀ.ಪ್ರೊಪೆನೊಫಾಸ್ 50 ಇ.ಸಿ.ಅಥವಾ 0.6ಗ್ರಾಂ. ಮಿಥೋಮಿಲ್ 40 ಎಸ್.ಪಿ.ಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಕಡಲೆಯಲ್ಲಿ ಕಾಯಿಕೊರಕದ ನಿಯಂತ್ರಣಕ್ಕಾಗಿ ಪ್ರತಿ ಲೀಟರ ನೀರಿನಲ್ಲಿ 2 ಗ್ರಾಂ.ಇಮಾಮೆಕ್ಟಿನ್ ಬೆಂಝೋಯೇಟ್ ಬೆರೆಸಿ ಸಿಂಪಡಿಸಬೇಕು. ಬೆಳೆಯ 35 ರಿಂದ 40 ದಿವಸದ ಬೆಳೆಯಲ್ಲಿ ಕುಡಿ ಚಿವುಟಬೇಕು. ಹಾಗೂ 20 ಪಿಪಿಎಮ್ ಎನ್.ಎ.ಎ.ಸಿಂಪಡಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.
ಕಡಲೆಯಲ್ಲಿ ಕಾಯಿಕೊರಕದ ನಿರ್ವಹಣೆಗಾಗಿ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ಪ್ರತಿ ಎಕರೆಗೆ 10 ಸೇರು ಚುರಿಮುರಿಯನ್ನು (ಮಂಡಕ್ಕಿ) ಹೊಲದ ತುಂಬೆಲ್ಲಾ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಡೆಗಳನ್ನು ತಿನ್ನಲು ಪೋತ್ಸಾಹಿಸಿದಂತೆ ಆಗುತ್ತದೆ. ಈ ಕೀಡೆಯು ಸರಾಸರಿ ಶೇ. 40 ರಿಂದ 50 ರಷ್ಟು ಹಾನಿ ಮಾಡುತ್ತದೆ. ಕೀಟನಾಶಕಗಳಾದ 2.00 ಮಿ.ಲೀ. ಕ್ಲೋರಫೆನಾಪೈರ್ 24% ಎಸ್.ಸಿ. ಅಥವಾ 0.075 ಮಿ. ಲೀ ಫ್ಲೂಬೆಂಡಿಯಾಮೈಡ್ 39.35 ಎಸ್.ಸಿ ಅಥವಾ ಕ್ಲೋರೆಂಟ್ರಿನಾ ಲಿಪ್ರೋಲ್ 18.5 ಎಸ್.ಸಿ. 0.15 ಮಿ. ಲೀ. ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೊಯೇಟ್ 5 ಎಸ್. ಜಿ. ಅಥವಾ 0.1 ಮಿ. ಲೀ. ಸ್ಪೈನೊಸ್ಯಾಡ್ 45 ಎಸ್.ಸಿ. ಅಥವಾ 0.3 ಮಿ.ಲೀ. ಇಂಡಾಕ್ಸಾಕಾರ್ಬ್ 14.5 ಎಸ್.ಸಿ. ಅಥವಾ 4 ಗ್ರಾಂ ಕಾರ್ಬರಿಲ್ 50 ಡಬು.್ಲಪಿ. ಅಥವಾ 1.0 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ. ಅಥವಾ 2 ಮಿ.ಲೀ. ಕ್ವಿನಾಲ್‌ಫಾಸ್ 25 ಇ.ಸಿ. ಅಥವಾ 2 ಮಿ.ಲೀ. ಮಿಥೊಮಿಲ್ 40 ಎಸ್.ಪಿ. ಅಥವಾ 2 ಮಿ.ಲೀ. ಪ್ರೊಫೆನೋಫಾಸ್ 50 ಇ. ಸಿ. ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ. ಅಥವಾ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಕಷಾಯವನ್ನು 20 ಮಿ. ಲೀ. ಅಥವಾ ಹೆಲಿಕೋವರ್ಪಾ ಎನ್.ಪಿ.ವಿ (ಎನ್.ಬಿ.ಎ.ಐ.ಆರ್) 2.0 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಕಷಾಯ ತಯಾರಿಸುವ ವಿಧಾನ : ಒಂದು ಕಿ.ಗ್ರಾಂ. ಬೆಳ್ಳುಳ್ಳಿ ಮತ್ತು ಒಂದು ಕಿ.ಗ್ರಾಂ. ಹಸಿ ಮೆಣಸಿನಕಾಯಿ ಕುಟ್ಟಿ 2 ಲೀಟರ್ ನೀರಿನಲ್ಲಿ 8-10 ತಾಸು ನೆನೆಸಿ ನಂತರ ಸೋಸಬೇಕು.
ನೆಟೆ ರೋಗ / ಸಿಡಿ ರೋಗ / ಸೊರಗು ರೋಗ ಮತ್ತು ಬೇರು ಕೊಳೆ ರೋಗ ನಿರ್ವಹಣೆಗಾಗಿ ರೋಗ ಬಾಧಿತ ಗಿಡಗಳನ್ನು ಆಗಾಗ ಕಿತ್ತು ಸುಡಬೇಕು. ಬೂದಿ ರೋಗದ ನಿರ್ವಹಣೆಗಾಗಿ ರೋಗ ಲಕ್ಷಣ ಕಂಡಾಗ 0.5 ಗ್ರಾಂ ಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ. ಒಂದು ಲೀಟರ್ ನೀರಲ್ಲಿ ಬೆರೆಸಿ ಸಿಂಪಡಿಸಬೇಕು.
ಕುಸುಬೆಯಲ್ಲಿ ಹೇನು ನಿರ್ವಹಣೆಗೆ ಶೇ. 5 ರ ಬೇವಿನ ಬೀಜದ ಕಷಾಯ ಅಥವಾ ಶೇ.1 ರ ಹತ್ತಿಕಾಳು ಎಣ್ಣೆ (ಶೇ.0.2 ಸೋಪಿ ದ್ರಾವಣದೊಂದಿಗೆ ಬೆರೆಸಿ) ಅಥವಾ 1.7 ಮಿ. ಲೀ ಡೈಮಿಥೊಯೇಟ್ 30 ಇ. ಸಿ. ಅಥವಾ 0.2 ಗ್ರಾಂ ಥೈಯಾಮಿಥಾಕ್ಸಾಮ್ 25 ಡಬ್ಲು. ಜಿ. ಅಥವಾ 1 ಗ್ರಾಂ ಆಸಿಫೇಟ್ 75 ಎಸ್.ಪಿ. ಅಥವಾ 1 ಮಿ. ಲೀ. ಮೊನೊಕ್ರೊಟೋಫಾಸ್ 36 ಎಸ್. ಎಲ್. ಒಂದು ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಪ್ರತಿ ಎಕರೆಗೆ 200 ಲೀ. ಸಿಂಪರಣಾ ದ್ರಾವಣವನ್ನು ಬಳಸಬೇಕು. ನೀರಿನ ಅಭಾವವಿದ್ದಲ್ಲಿ ಎಕರೆಗೆ 8-10 ಕಿ. ಗ್ರಾಂ ನಂತೆ ಕ್ವಿನಾಲ್‌ಫಾಸ್ ಶೇ. 1.5 ರ ಪುಡಿ ಅಥವಾ ಮೆಲಾಥಿಯಾನ್ ಶೇ. 5 ರ ಪುಡಿಯನ್ನು ಬೆಳೆಯ ಮೇಲೆ ಬೆಳಗಿನ ಜಾವ ಧೂಳೀಕರಿಸುವುದು ಸೂಕ್ತ. ಎಲೆತಿನ್ನುವ ಹುಳುವಿನ ನಿಯಂತ್ರಣಕ್ಕೆ 0.3 ಮಿ. ಲೀ ಇಂಡಾಕ್ಸಾಕಾರ್ಬ್ 15 ಇ.. ಸಿ. ಪ್ರತಿ ಲೀಟರ್ ನೀರಲ್ಲಿ ಬೆರೆಸಿ ಸಿಂಪಡಿಸಬೇಕು. ಎಲೆ ಮಚ್ಚೆ ರೋಗ ಕಂಡುಬಂದಲ್ಲಿ 15 ದಿನಗಳ ಅಂತರದಲ್ಲಿ ಒಂದು ಅಥವಾ ಎರಡು ಸಲ 2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲೂ.ಪಿ. ನ್ನು ಒಂದು ಲೀ. ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಎಲೆ ಚುಕ್ಕೆ ರೋಗ ಕಂಡುಂದಲ್ಲಿ ತಕ್ಷಣ 2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲೂ.ಪಿ. ನ್ನು ಒಂದು ಲೀ. ನೀರಿನಲ್ಲಿ ಕರಗಿಸಿ ಬೆಳೆಗೆ ಸಿಂಪಡಿಸಬೇಕು ಮತ್ತು ಇದೇ ಸಿಂಪರಣೆಯನ್ನು ರೋಗದ ತೀವ್ರತೆಗೆ ತಕ್ಕಂತೆ 15 ದಿನಗಳ ನಂತರ ಪುನರಾವರ್ತಿಸಬೇಕು.
ಕೀಟ ಹಾಗೂ ರೋಗ ಬಾಧೆಯ ಲಕ್ಷಣಗಳು ಕಂಡುಬಂದಲ್ಲಿ ಮಾತ್ರ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವ ಪ್ರದೇಶಗಳಲ್ಲಿ ಕೀಟ ಮತ್ತು ರೋಗದ ಬಾಧೆ ಪ್ರತಿ ವರ್ಷವೂ ತಪ್ಪದೇ ಬರುತ್ತದೆಯೋ ಅಂತಹ ಸಂದರ್ಭದಲ್ಲಿ ಕೀಟ ಹಾಗೂ ರೋಗಗಳು ಬರುವುದಕ್ಕೆ ಮೊದಲೇ ಸಸ್ಯ ಸಂರಕ್ಷಣಾ ಕ್ರಮ ತೆಗೆದುಕೊಳ್ಳುವುದು ಸೂಕ್ತ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP