ರಾಯಚೂರು : ಡಿಸೆಂಬರ್ 6 ರಿಂದ 10ರವರೆಗೆ ಕೃಷಿ ವಿವಿಯಲ್ಲಿ ಕ್ರೀಡಾ ಪಂದ್ಯಾವಳಿ
ರಾಯಚೂರು, 04 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಡಿಸೆಂಬರ್ 6 ರಿಂದ 10ರವರೆಗೆ 5 ದಿನಗಳ ಅವಧಿಯ ಅಂತರ-ಮಹಾವಿದ್ಯಾಲಯಗಳ ಗುಂಪು ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ವಾಲಿಬಾಲ್ (ಪುರುಷ ಮತ್ತು ಮಹಿಳೆಯರು), ಖೋ-
ರಾಯಚೂರು : ಡಿಸೆಂಬರ್ 6 ರಿಂದ 10ರವರೆಗೆ ಕೃಷಿ ವಿವಿಯಲ್ಲಿ ಕ್ರೀಡಾ ಪಂದ್ಯಾವಳಿ


ರಾಯಚೂರು, 04 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಡಿಸೆಂಬರ್ 6 ರಿಂದ 10ರವರೆಗೆ 5 ದಿನಗಳ ಅವಧಿಯ ಅಂತರ-ಮಹಾವಿದ್ಯಾಲಯಗಳ ಗುಂಪು ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.

ಪಂದ್ಯಾವಳಿಯಲ್ಲಿ ವಾಲಿಬಾಲ್ (ಪುರುಷ ಮತ್ತು ಮಹಿಳೆಯರು), ಖೋ-ಖೋ (ಪುರುಷ ಮತ್ತು ಮಹಿಳೆಯರು), ಟೇಬಲ್ ಟೆನ್ನಿಸ್ (ಪುರುಷ ಮತ್ತು ಮಹಿಳೆಯರು), ಕಬಡ್ಡಿ (ಪುರುಷರು) ಹೀಗೆ ಗುಂಪು ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.

ಗುಂಪು ಕ್ರೀಡಾ ಪಂದ್ಯಾವಳಿಗಳಿಗೆ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಂ. ಹನುಮಂತಪ್ಪರವರು ಡಿಸೆಂಬರ್ 6 ರಂದು ಚಾಲನೆ ನೀಡುವರು.

ಈ ಪಂದ್ಯಾವಳಿಗಳಲ್ಲಿ ಕೃಷಿ ಮಹಾವಿದ್ಯಾಲಯ ರಾಯಚೂರು, ಭೀಮರಾಯನಗುಡಿ, ಕಲಬುರಗಿ, ಗಂಗಾವತಿ, ಹಗರಿ, ಕೃಷಿ ತಾಂತ್ರಿಕ ಮಹಾವಿದ್ಯಾಲಯ ರಾಯಚೂರು ಹಾಗೂ ರಾಯಚೂರಿನ ಕೃಷಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳನ್ನೊಳಗೊಂಡ0ತೆ 320 ವಿದ್ಯಾರ್ಥಿಯರು ಹಾಗೂ 200 ವಿದ್ಯಾರ್ಥಿನಿಯರು ಭಾಗವಹಿಸುವರು.

ಈ ಕ್ರೀಡಾಕೂಟವನ್ನು ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯವು ಆಯೋಜಿಸುತ್ತಿದೆ ಎಂದು ವಿಶ್ವವಿದ್ಯಾಲಯವು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande