
ವಿಜಯಪುರ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ಉದ್ದೇಶದಿಂದ ಏರ್ಪಡಿಸಿದ್ದ ಸಮಾವೇಶ ವಿಫಲಗೊಂಡಿದೆ ಎಂದು ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.
ಬಬಲೇಶ್ವರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಬಲೇಶ್ವರ ಗುರುಪಾದೇಶ್ವರ ಮಹಾಸ್ವಾಮಿಜಿಗಳು, ಶಾಂತವೀರ ಅಪ್ಪಗಳವರ ಪುಣ್ಯಕ್ಷೇತ್ರವಾಗಿರುವ ಬಬಲೇಶ್ವರದಲ್ಲಿ ಬಸವಾದಿ ಶರಣರ ಆಶಯದಂತೆ ಎಲ್ಲ ಜಾತಿ ಜನಾಂಗದವರು ಶ್ರದ್ಧೆ, ಭಕ್ತಿಯಿಂದ ನಡೆದುಕೊಂಡು ಪ್ರೀತಿಯಿಂದ ಬಾಳುವ ಇವರ ಮಧ್ಯೆ ಧರ್ಮದ ಹೆಸರಿನಲ್ಲಿ ಕಿಡಿ ಹಚ್ಚಿ, ರಾಜಕಾರಣದ ಮೂಲಕ ತಮ್ಮ ಬೆಳೆ ಬೆಯಿಸಲು ಕನ್ಹೇರಿ ಶ್ರೀಗಳು ಮಾಡಿದ ಬಯಲಾಟ ಪ್ರೇಕ್ಷರಿಲ್ಲದೆ ನಿಂತುಹೋಗಿದೆ ಎಂದರು.
ಬಿಜೆಪಿಯಿಂದ ಉಚ್ಚಾಟಿತರು, ಪರಾಜೀತ ಅಭ್ಯರ್ಥಿಗಳು, ಟಿಕೆಟ್ ವಂಚಿತರು, ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಒಂದಡೆ ಸೇರಿಸಿ, ಸಮಾವೇಶವನ್ನು ಮಾಡುವ ಮೂಲಕ ಈ ಸ್ವಾಮೀಗಳು ಅಧೀಕೃತವಾಗಿ ಬಿಜೆಪಿ ನಿರಾಶ್ರಿತರ ಗುಂಪಿನಲ್ಲಿ ಸೇರಿಕೊಂಡಿದ್ದಾರೆ. ಜಿಲ್ಲೆಯ ಮತ್ತು ರಾಜ್ಯದಲ್ಲಿ ಮಠ-ಮಂದಿರಗಳನ್ನು ಕಟ್ಟಿದ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ, ಸಮಾಜಮುಖಿ ಕಾಯಕ ಮತ್ತು ದಾಸೋಹ ಮಾಡುತ್ತಿರುವ, ಜನಮಾನಸದಲ್ಲಿ ಪ್ರಭಾವ ಹೊಂದಿರುವ ಯಾವುದೇ ಮಠಾಧೀಶರು ಈ ಸಮಾವೇಶದಲ್ಲಿ ಭಾಗಿಯಾಗದೆ ಇರುವುದನ್ನು ನೋಡಿದರೆ ಇವರ ಬಯಲಾಟ ಎಲ್ಲರಿಗೂ ಅರ್ಥವಾಗಿದೆ ಎಂದು ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande