

ಬಳ್ಳಾರಿ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ತುಂಗಭದ್ರಾ ಜಲಾಶಯದ 33 ಕ್ರಸ್ಟ್‍ಗೇಟುಗಳಿಗೆ ಹೊಸ ಚೈನ್‍ಗಳನ್ನು ಅಳವಡಿಸಲು ಕೋರಿ ತುಂಗಭದ್ರ ರೈತ ಸಂಘ ಉಪ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಸಲ್ಲಿಸಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷರಾಗಿರುವ ಡಾ. ಪುರುಷೋತ್ತಮ ಗೌಡ ಅವರು ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರು ಕಚೇರಿಯಲ್ಲಿ ಬುಧವಾರ ಭೇಟಿ ಮಾಡಿ, 70 ವರ್ಷಗಳ ಜಲಾಶಯದ 33 ಕ್ರಸ್ಟ್‍ಗೇಟುಗಳನ್ನು 52 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಸುತ್ತಿರುವುದು ಸ್ವಾಗತಾರ್ಹ. ಆದರೆ, ಹಳೆಯ ಚೈನನ್ನು ಪುನರ್ ಬಳಕೆ ಮಾಡುತ್ತಿರುವುದು ರೈತರಲ್ಲಿ ಮತ್ತಷ್ಟು ಆತಂಕಕ್ಕೆ ಒಳಪಡಿಸಿದೆ ಎಂದು ಅವರು ವಿವರಿಸಿದ್ದಾರೆ.
ಕೇಂದ್ರ ಜಲಸಂಪನ್ಮೂಲ ಆಯೋಗದಿಂದ ಅನುಮತಿ ಪಡೆದು ತುಂಗಭದ್ರಾ ಜಲಾಶಯಕ್ಕೆ 52 ಕೋಟಿ ರೂಪಾಯಿಗಳ ವೆಚ್ಚದಲ್ಲಿ 33 ಕ್ರಸ್ಟ್‍ಗೇಟು ಅನ್ನು ಹೊಸದಾಗಿ ಅಳವಡಿಸಲು ಗುಜರಾತ್ ಕಂಪನಿಗೆ ಪರವಾನಿಗೆ ನೀಡಲಾಗಿದೆ. ಆದರೆ, ಹಳೆಯ ಚೈನನ್ನು ಪುನಃ ಬಳಕೆ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಈ ಕುರಿತು ಗಮನ ನೀಡಬೇಕು ಎಂದು ಅವರು ಕೋರಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್