ಗವಿಮಠದ ಜಾತ್ರೆ : ಶುಕ್ರವಾರ ಸಂಜೆ: 5 ಗಂಟೆಗೆ ದೇವಿಗೆ ಉಡಿ ತುಂಬುವಿಕೆ
ಕೊಪ್ಪಳ, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನ ದಿನ ಪ್ರತಿವರ್ಷವು ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ದಿನಾಂಕ 2-01-2026 ಶುಕ್ರವಾರ ಸಂಜೆ: 5 ಘಂಟೆಗೆ ಶ್ರೀ ಗವಿಮಠದ ಕೈಲಾಸ ಮಂಟಪದಲ್ಲಿ ಇರುವ ಅನ್ನಪೂರ್
ಗವಿಮಠದ ಜಾತ್ರೆ : ಶುಕ್ರವಾರ ಸಂಜೆ: 5 ಗಂಟೆಗೆ ದೇವಿಗೆ ಉಡಿ ತುಂಬುವಿಕೆ


ಕೊಪ್ಪಳ, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನ ದಿನ ಪ್ರತಿವರ್ಷವು ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ದಿನಾಂಕ 2-01-2026 ಶುಕ್ರವಾರ ಸಂಜೆ: 5 ಘಂಟೆಗೆ ಶ್ರೀ ಗವಿಮಠದ ಕೈಲಾಸ ಮಂಟಪದಲ್ಲಿ ಇರುವ ಅನ್ನಪೂರ್ಣೆಶ್ವರಿ ಮಂದಿರದಲ್ಲಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರಮದಲ್ಲಿ ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವ ಕಾರ್ಯದಲ್ಲಿ ಸಕ್ರೀಯವಾಗಿ ಎಲ್ಲ ತಾಯಂದಿರು ಭಾಗವಹಿಸುತ್ತಾರೆ.

ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕುವರು. ಹೋಳಿಗೆ ಪಾಯಸ ನೈವೇದ್ಯವಾಗುತ್ತದೆ. ಆಗಮಿಸಿದ ಎಲ್ಲ ತಾಯಂದಿರಿಗೂ ಮಂಗಳಕರವಾದ ಬಾಗೀನ ಕೊಡುವ ಮೂಲಕ ಉಡಿತುಂಬುವ ಕಾಯಕವನ್ನು ಪರಸ್ಪರರು ನಡೆಸಿಕೊಡುವರು.

ಅಷ್ಟೊತ್ತಿಗೆ ಶ್ರೀಗವೀಶನ ಪಾದೋದಕ ಆಗಮಿಸುವುದು, ಅದನ್ನು ಸಿಂಪಡಿಸಿದ ನಂತರ ಅನ್ನ ಸಂತರ್ಪಣೆ ನಡೆಯುತ್ತದೆ. ಕೊಪ್ಪಳ ಹಾಗೂ ಸುತ್ತಲಿನ ಸಹಸ್ರಾರು ಮಹಿಳೆಯರು ಇದರಲ್ಲಿ ಭಾಗವಹಿಸುತ್ತಾರೆ.

ಉದ್ದೇಶ: ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಇದರ ಜೊತೆಗೆ ತಮ್ಮ ತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪವನ್ನು ತಂದುಕೊಂಡು ಅಂದು ಎಲ್ಲ ತಾಯಂದಿರು ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಮೂಲಕ ಹರಕೆ ಮಾಡಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು, ಮೊದಲಾದ ಮಹಿಳಾ ಬಳಗದವರು ಭಾಗವಹಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಮೋಬೈಲ್ 9880312153, 9945467221 ಸಂಖ್ಯೆಗೆ ಸಂಪರ್ಕಿಸಲು ಶ್ರೀಮಠ ಕೋರಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande