ರಾಷ್ಟ್ರೀಯ ನೆಟ್‍ಬಾಲ್ : ಸಾಹಿತ್ಯ ಗೊಂಡಬಾಳಗೆ ಚಿನ್ನ
ಕೊಪ್ಪಳ, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶ್ರೀ ಚೈತನ್ಯ ಸಮೂಹ ಸಂಸ್ಥೆಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಕಾಲೇಜಿನ ದ್ವಿತಿಯ ಪಿಯು ವಿದ್ಯಾರ್ಥಿನಿ ಸಾಹಿತ್ಯ ಮಂಜುನಾಥ ಗೊಂಡಬಾಳ 19 ವರ್ಷದೊಳಗಿನ ಕರ್ನಾಟಕ ತಂಡದಲ್ಲಿ ಆಡಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಜಿ
ರಾಷ್ಟ್ರೀಯ ನೆಟ್‍ಬಾಲ್ : ಸಾಹಿತ್ಯ ಗೊಂಡಬಾಳಗೆ ಚಿನ್ನ


ರಾಷ್ಟ್ರೀಯ ನೆಟ್‍ಬಾಲ್ : ಸಾಹಿತ್ಯ ಗೊಂಡಬಾಳಗೆ ಚಿನ್ನ


ರಾಷ್ಟ್ರೀಯ ನೆಟ್‍ಬಾಲ್ : ಸಾಹಿತ್ಯ ಗೊಂಡಬಾಳಗೆ ಚಿನ್ನ


ರಾಷ್ಟ್ರೀಯ ನೆಟ್‍ಬಾಲ್ : ಸಾಹಿತ್ಯ ಗೊಂಡಬಾಳಗೆ ಚಿನ್ನ


ತುಂಗಭದ್ರ ನದಿ  ಚರಂಡಿಯಾಗಿ ಪರಿವರ್ತನೆ :  ರಹಮತ್ ತರೀಕೆರೆ


ಕೊಪ್ಪಳ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀ ಚೈತನ್ಯ ಸಮೂಹ ಸಂಸ್ಥೆಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಕಾಲೇಜಿನ ದ್ವಿತಿಯ ಪಿಯು ವಿದ್ಯಾರ್ಥಿನಿ ಸಾಹಿತ್ಯ ಮಂಜುನಾಥ ಗೊಂಡಬಾಳ 19 ವರ್ಷದೊಳಗಿನ ಕರ್ನಾಟಕ ತಂಡದಲ್ಲಿ ಆಡಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

ಮಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರದಲ್ಲಿ ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ, ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಎಡಪದವು ಇವರ ಆಶ್ರಯದಲ್ಲಿ ಡಿ. 25 ರಿಂದ ಡಿ. 29 ರವರೆಗೆ ಆಯೋಜನೆಗೊಂಡಿದ್ದ 19 ವರ್ಷದೊಳಗಿನ ಬಾಲಕ ಬಾಲಕಿಯರ ರಾಷ್ಟ್ರೀಯ ನೆಟ್‍ಬಾಲ್ ಕ್ರೀಡಾಕೂಟದಲ್ಲಿ 12 ಜನರ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ, ಕ್ಯಾಂಪನಲ್ಲಿ ತರಬೇತಿ ಹೊಂದಿ ಕರ್ನಾಟಕದ ಐತಿಹಾಸಿಕ ದಾಖಲೆಯ ಮೊದಲ ಬಾರಿ ಚಿನ್ನದ ಪದಕ ಗೆದ್ದ ತಂಡದಲ್ಲಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ರಾಷ್ಟ್ರೀಯ ನೆಟ್ ಬಾಲ್ ವಿಜೇತ ಕರ್ನಾಟಕದ ಬಾಲಕಿಯರ ತಂಡ : ನಿಖಿತಾ, , ಸುಪ್ರಿಯಾ ಹೆಚ್. ಎಸ್., ಸಾಹಿತ್ಯ ಎಂ. ಗೊಂಡಬಾಳ, ಹೇಮಾ ಮನ್ನೂರ, ಹರ್ಷಿತಾ ಎಲ್., ತಪಸ್ಯಾ ಎಸ್. ನಾಯಕ್, ರಕ್ಷಾ, ಸಿಂಚನಾಲಾವಣ್ಯ ಎಂ. ಎನ್., ಲಕ್ಷ್ಮೀ ಮಹಾದೇವ, ಇಂದು ಜಿ., ನಿಸರ್ಗ ಹೆಚ್. ಎಸ್., ನಿತ್ಯಾಶ್ರೀ, ದೀಪ್ತಿ ಹೆಚ್. ಎಸ್., ಸಂದ್ಯಾ, ವಿದ್ಯಾ, ಅನ್ವಿತಾ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande