
ಕೋಲಾರ, ೨೭ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಜಯಮಂಗಲ ಗ್ರಾಮದ ಕ್ರೀಡಾ ಮೈದಾನ, ಅಳತೆ ೬.೫೦ ಎಕರೆ ಇದ್ದು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ರೋಜಗಾರಿ ನವೀಕರಣ ಯೋಜನೆ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಅನುದಾನ ಪಡೆದಿದ್ದರೂ, ಇಂದು ಅತ್ಯಂತ ಶೋಚನೀಯ ಮತ್ತು ಉಪಯೋಗಕ್ಕೆ ಅನರ್ಹವಾದ ಸ್ಥಿತಿಯಲ್ಲಿದೆ. ಈ ಮೈದಾನ ನಿರ್ಮಾಣ ಅಥವಾ ನವೀಕರಣಕ್ಕಾಗಿ ಕಾದು ನೋಡುತ್ತಿದೆ.
ಇಂತಹ ಒಂದು ಸಾರ್ವಜನಿಕ ಸಂಪತ್ತು ಮತ್ತು ಯುವಜನತೆಯ ಕ್ರೀಡಾ, ಆರೋಗ್ಯ ಮತ್ತು ಸಾಮುದಾಯಿಕ ಚಟುವಟಿಕೆಗಳ ಕೇಂದ್ರವಾಗಿರಬೇಕಾದ ಮೈದಾನ ನಿರ್ಲಕ್ಷಕ್ಕೆ ಗುರಿಯಾಗಿರುವುದು ಅತ್ಯಂತ ದುರದೃಷ್ಟಕರ.
ರಾಜ್ಯ ಸರಕಾರದ ಅನುಗುಣವಾದ ಮಂತ್ರಾಲಯ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಹಂತದ ಎಲ್ಲಾ ಅಧಿಕಾರಿಗಳು ತಮ್ಮ ತುರ್ತು ಗಮನ ಹರಿಸಬೇಕು. ಈ ಬಗ್ಗೆ ಸ್ಪಷ್ಟ ಮಾಹಿತಿ, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಕಾರ್ಯಾಚರಣೆ ಅಗತ್ಯವಿದೆ ಎಂದು ಸಾರ್ವಜನಿಕರು ಕೋರಿದ್ದಾರೆ.
ಮೈದಾನವನ್ನು ಸಂಪೂರ್ಣವಾಗಿ ನವೀಕರಿಸಿ, ಕ್ರೀಡಾ-ಯೋಗ್ಯವಾಗಿ ಮಾಡಲು ಅಗತ್ಯವಾದ ತಾಂತ್ರಿಕ ಅಂದಾಜು ಮತ್ತು ಅನುದಾನದ ರೂಪರೇಖೆ. ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಗೆ ಜವಾಬ್ದಾರಿಯುತ ಅಧಿಕಾರಿಯನ್ನು ನೇಮಕ ಮಾಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮೀಣ ಯುವಕರ ಕ್ರೀಡಾ ಪ್ರತಿಭೆ, ಶಾರೀರಿಕ ಚಟುವಟಿಕೆ ಮತ್ತು ಸಾಮಾಜಿಕ ಒಗ್ಗಟ್ಟಿನ ಅಭಿವೃದ್ಧಿಗೆ ಈ ಕ್ರೀಡಾಂಗಣವು ಅತಿ ಮುಖ್ಯ. ಇದರ ನಿರ್ಲಕ್ಷಣೆಯು ಗ್ರಾಮದ ಭವಿಷ್ಯದ ನಿರ್ಲಕ್ಷಣೆಗೆ ಸಮಾನವಾಗಿದೆ. ಅದಕ್ಕಾಗಿ, ಸಂಬAಧಿತ ಎಲ್ಲಾ ಸರ್ಕಾರಿ ವಿಭಾಗಗಳು ಮತ್ತು ಸ್ಥಳೀಯ ಸ್ವಯಂ ಸರ್ಕಾರ ಸಂಸ್ಥೆಗಳು ತಕ್ಷಣ ಒಂದಾಗಿ ಕಾರ್ಯೋನ್ಮುಖವಾಗಿ, ಜಯಮಂಗಳ ಗ್ರಾಮದ ಈ ಅಮೂಲ್ಯ ಸಂಪತ್ತನ್ನು ಪುನರುಜ್ಜೀವನಗೊಳಿಸಬೇಕೆಂದು ಕೋರಿದ್ದಾರೆ.
ಚಿತ್ರ : ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಜಯಮಂಗಲ ಕ್ರೀಡಾ ಮೈದಾನ ದುಸ್ತಿತಿ ತಲುಪಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್