ಸತ್ತಂತಿರುವ ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ ನ್ನು ಬಡಿದೆಬ್ಬಿಸುವವರು ಯಾರು?
ಸತ್ತಂತಿರುವ ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ ನ್ನು ಬಡಿದೆಬ್ಬಿಸುವವರು ಯಾರು? ಡಿಸೆಂಬರ್
ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಎನ್.ಬಿ.ಗೋಪಾಲಗೌಡ ಹಾಗೂ ಇತರರು ಸಂಭ್ರಮಿಸಿದ ಕ್ಷಣ


ಕೋಲಾರ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಾರಿಸು ಕನ್ನಡದ ಡಿಂಡಿಮವ. ಓ ಕರ್ನಾಟಕ ಹೃದಯ ಶಿವ. ಸತ್ತಂತಿಹರನು ಬಡಿದೆಚ್ಚರಿಸು. ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯ ಕಿಚ್ಚಿಗೆ ಕಣ್ಣೀರು ಸುರಿಸು ಎಂದು ಕನ್ನಡಿಗರ ನಿರಾಭಿಮಾನದ ಬಗ್ಗೆ ಕುವೆಂಪುರವರು ದಶಕಗಳ ಹಿಂದೆ ಹೇಳಿದ್ದ ಈ ಮಾತು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಅನ್ವಯವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಸತ್ತಿದೆ. ಸತ್ತಂತಿರುವ ಸಾಹಿತ್ಯ ಪರಿಷತ್‌ನ್ನು ಬಡೆಬ್ಬಿಸುವವರು ಯಾರು? ನಿರಾಭಿಮಾನಿ ಕನ್ನಡಿಗರು ಸಹ ಸಾಹಿತ್ಯ ಪರಿಷತ್ ಪಾಲಿಗೆ ಸತ್ತಿದ್ದಾರೆ. ಸಾಹಿತ್ಯ ಪರಿಷತ್ ಪರಿಸ್ಥಿತಿ ನೋಡಿ ಕನ್ನಡಾಂಬೆ ಕಣ್ಣೀರು ಸುರಿಸುತ್ತಿದ್ದಾಳೆ. ಕನ್ನಾಂಬೆಯ ಕಣ್ಣಿರು ಒರೆಸುವವರು ಯಾರು? ಕನ್ನಡದ ತೇರಿನ ಗಾಲಿಗಳು ಸಾಂಸ್ಕೃತಿಕ ರಾಜಕಾರಣದ ಕೆಸರಿನಲ್ಲಿ ಹೂತುಹೋಗಿವೆ. ಕನ್ನಡದ ತೇರನ್ನು ಎಳೆಯವರು ಯಾರು ಇಲ್ಲವಾಗಿದೆ. ಸಾಂಸ್ಕೃತಿಕ ರಾಜಕಾರಣದಿಂದ ಸಾಹಿತ್ಯ ಪರಿಷತ್ ಸೊರಗಿದೆ.ರಾಜ್ಯ ಸಾಹಿತ್ಯ ಪರಿಷತ್ ಮಹೇಶ್ ಜೋಶಿಯವರ ದುರಾಡಳಿತದಿಂದ ಅಧಿಕಾರ ಕಳೆದುಕೊಂಡಿದೆ. ಮಹೇಶ್ ಜೋಶಿ ದೂರದರ್ಶನದಲ್ಲಿ ಅಧಿಕಾರಿಯಾಗಿ ಒಳ್ಳೆಯ ಹೆಸರು ಮಾಡಿದವರು. ಅಧ್ಯಕ್ಷರಾದರೆ ಸಾಹಿತ್ಯ ಪರಿಷತ್‌ಗೆ ಒಳ್ಳೆಯ ಸ್ಪರ್ಷ ನೀಡುತ್ತಾರೆ ಎಂಬ ಭ್ರಮೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಆರ್ಥಿಕ ಅಶಿಸ್ತು ಮತ್ತು ಸರ್ವಾಧಿಕಾರದಿಂದಾಗಿ ಪರಿಷತ್ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಆಡಳಿತ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಸಾಹಿತ್ಯ ಪರಿಷತ್‌ನ ಇತಿಹಾಸದಲ್ಲಿ ಇದೊಂದು ಕಪ್ಪುಚುಕ್ಕೆಯಾಗಿದೆ. ರಾಜ್ಯ ಸಾಹಿತ್ಯ ಪರಿಷತ್ ಕಥೆ ಹೀಗಾದರೆ ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ ಕಥೆ ಮತ್ತೊಂದು ರೀತಿಯದು. ನಾಗಾನಂದ ಕೆಂಪರಾಜ್ ದುರಹಂಕಾರಿಯಾಗಿದ್ದಾರೆ. ಎರಡನೇ ಬಾರಿಗೆ ಅಧ್ಯಕ್ಷರಾದರೆ ಸಾಹಿತ್ಯ ಪರಿಷತ್ ಮಲೀನವಾಗುತ್ತದೆ. ಅವರು ಎರಡನೇ ಬಾರಿಗೆ ಆಯ್ಕೆಯಾಗುವುದು ಬೇಡ.ಪರ್ಯಾಯವಾಗಿ ಹೊಸ ಮುಖಕ್ಕೆ ಅವಕಾಶ ನೀಡಬೇಕೆಂದು ಸಾಹಿತ್ಯ ಪರಿಷತ್ ಪಡಸಾಲೆಯಲ್ಲಿ ಚಿಂತನ ಮಂತನ ನಡೆಯಿತು. ಸ್ನೇಹಿತರಾಗಿ ಸಾಹಿತ್ಯ ಪರಿಷತ್‌ಗೆ ಪ್ರವೇಶ ಮಾಡಿದ ಜೆ.ಜಿ.ನಾಗರಾಜ್ ಮತ್ತು ನಾಗಾನಂದ ಕೆಂಪರಾಜ್ ರವರು ಕಡೆಕಡೆಗೆ ಬಧ್ದ ವೈರಿಗಳು ಆದರೆ. ಎರಡನೇ ಬಾರಿಗೆ ನಾಗರಾಜ್ ಅಖಾಡಕ್ಕೆ ಇಳಿಯಲು ಸಿದ್ದತೆ ನಡೆಸಿದ್ದರು. ಆದರೆ ನಾಗರಾಜ್ ಮತ್ತೆ ಸ್ಪರ್ಧಿಸಿದರೆ ಮತಗಳು ವಿಭಜನೆಯಾಗಿ ನಾಗಾನಂದ ಕೆಂಪರಾಜ್ ಆಯ್ಕೆಯಾಗುತ್ತಾರೆ. ಏನೇ ಆಗಲಿ ನಾಗಾನಂದ ಕೆಂಪರಾಜ್ ಮತ್ತೆ ಸಾಹಿತ್ಯ ಪರಿಷತ್ ಬಾಗಿಲು ತುಳಿಯಬಾರದು ಎಂಬ ಏಕೈಕ ಕಾರ್ಯಸೂಚಿಯಿಂದ ಪರ್ಯಾಯ ಅಭ್ಯರ್ಥಿಯನ್ನು ಶೋಧಿಸಲಾಯಿತು.

ಆಗ ಪರ್ಯಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಬಂದಿದ್ದು ಶ್ರೀನಾವಾಸ ಪುರದ ಎನ್.ಬಿ.ಗೋಪಾಲ ಗೌಡರು.ಅವರೇನು ಸಾಮಾನ್ಯ ವ್ಯಕ್ತಿಯಲ್ಲ. ಹಣದ ಥೈಲಿಗಳನ್ನು ಹೊಂದಿರುವ ಅಗರ್ಭ ಶ್ರೀಮಂತ ಕುಳ.ಜೊತೆಗೆ ಕಾಂಗ್ರೆಸ್ ಪ್ರಭಾವಿ ನಾಯಕರ ಸಖ್ಯಹೊಂದಿರುವ ವ್ಯಕ್ತಿಯಾಗಿದ್ದಾರೆ. ನಾಗಾನಂದ ಕೆಂಪರಾಜ್‌ರವನ್ನು ಬಗ್ಗು ಬಡಿಯಲು ಸೂಕ್ತವಾದ ವ್ಯಕ್ತಿ ಎಂದ ಸಾಹಿತ್ಯ ಪರಿಷತ್ ದಿಗ್ಗಜರ ಚಿಂತನಮAತನ ಸಭೆಯಲ್ಲಿ ಚರ್ಚೆಗಳು ನಡೆದವು. ಆ ವೇಳೆಗೆ ನಾಗರಾಜ್ ಅಖಾಡದಿಂದ ದೂರ ಉಳಿದು ಗೋಪಾಲ ಗೌಡರನ್ನು ಬೆಂಬಲಿಸಲು ಮಾನಸಿಕವಾಗಿ ಮುಂದಾದರು. ಗೋಪಾಲ ಗೌಡರು ಜೀವಮಾನದಲ್ಲಿ ಒಂದು ಬಾರಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಬೇಕು ಎಂಬ ಕನಸು ಕಂಡಿದ್ದರು. ಅದು ಅವರ ಏಕೈಕ ಗುರಿಯಾಗಿತ್ತು.

ಕನ್ನಡ ಬಾರದ ತಮ್ಮ ನೆಂಟರನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡಿದರು.ಅವರು ಶ್ರಿನಿವಾಸಪುರದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನು ಪರಿಷತ್ ಸದಸ್ಯರನ್ನಾಗಿ ಸೇರ್ಪಡೆ ಮಾಡಿ ಸಂಖ್ಯಾ ಬಲವನ್ನು ವೃಧ್ದಿಸಿಕೊಂಡರು.ನಾಗರಾಜ್ ಸ್ಪರ್ಧೆಯಿಂದ ಹಿಂದೆ ಸರಿದರು.ಗೋಪಾಲ ಗೌಡರು ತಮ್ಮ ತಂದೆ ಬ್ಯಾಟಪ್ಪನವರೊಂದಿಗೆ ಕಾಂಗ್ರೆಸ್ ಮಹಾನ್ ನಾಯಕರ ಮನೆ ಬಾಗಿಲು ತಟ್ಟಿದರು. ನನ್ನ ಮಗ ಸಾಹಿತ್ಯಪರಿಷತ್ ಅಧ್ಯಕ್ಷನಾಗಬೇಕೆಂದು ಆಸೆಪಟ್ಟಿದ್ದಾನೆ. ಅವನನ್ನು ಬೆಂಬಲಿಸಿ ಎಂದು ಅಂಗಲಾಚಿಸಿದರು.

ಬ್ಯಾಟಪ್ಪನವರ ಋಣ ಬಾರದಲ್ಲಿದ್ದ ಕಾಂಗ್ರೆಸ್ ನಾಯಕರು ಅವ ನಮ್ಮ ಹುಡುಗ. ಅವನ್ನು ಬೆಂಬಲಿಸಿ ಅವನೇನಾದರು ದಾರಿ ತಪ್ಪಿದರೆ ಅವನ ಕಿವಿ ಹಿಂಡಿ ಸರಿಪಡಿಸುತ್ತೇನೆ. ಪರಿಷತ್‌ನ ಕಾರ್ಯ ಚಟುವಟಿಕೆಗಳಿಗೆ ನನ್ನ ಬೆಂಬಲವಿರುತ್ತದೆ ಎಂದು ಭರವಸೆ ನೀಡಿದರು. ಮಹಾನ್ ನಾಯಕರ ಆಹ್ವಾನದ ಮೇರೆಗೆ ಕೋಲಾರದ ಸಾಹಿತ್ಯ ಪರಿಷತ್ ದಿಗ್ಗಜರ ಸ್ಟೀರಿಂಗ್ ಕಮಿಟಿ ಮೀಟಿಂಗ್ ನಡೆಯಿತು. ಗೋಪಾಲ ಗೌಡರನ್ನು ಬೆಂಬಲಿಸುವ ಒಕ್ಕೊರಲ ನಿರ್ಧಾರ ತೆಗೆದುಕೊಳ್ಳಲಾಯಿತು.

ಬೆಟ್ಟವೇ ನಮ್ಮ ಬಳಿ ಬಂದ ಹಾಗೆ ಕಾಂಗ್ರೆಸ್ ನಾಯಕರು ನಮ್ಮ ಬಳಿ ಬಂದಿದ್ದಾರೆ. ಅವರು ಹೇಳಿದ ಹಾಗೆ ಗೋಪಾಲ ಗೌಡರನ್ನು ಬೆಂಬಲಿಸಲು ಸ್ಡೀರಿಂಗ್ ಕಮಿಟಿಯಲ್ಲಿ ಬೆಂಬಲ ಘೋಷಿಸಲಾಯಿತು. ನೀವು ಆಯ್ಕೆಯಾದ ಮೇಲೆ ಏನೇ ನಿರ್ಧಾರ ತೆಗೆದುಕೊಳ್ಳಬೇಕಾದರು ನಮ್ಮ ಸಲಹೆ ಮತ್ತು ಸಮ್ಮತಿ ಅಗತ್ಯವೆಂದು ಷರತ್ತು ಹಾಕಲಾಯಿತು.

ಅದಕ್ಕೆ ಗೋಪಾಲ ಗೌಡರು ಗೋಣು ಆಡಿಸಿದರು. ಒಂದು ಕಡೆ ಕಾಂಗ್ರಸ್ ನಾಯಕರ ಬೆಂಬಲ ಮತ್ತೊಂದು ಕಡೆ ನಾಗರಾಜ್ ಮಹಾಭಾರತದ ಯುಧ್ಧಲ್ಲಿ ಶ್ರೀಕೃಷ್ಣ ಪಾಂಚಜನ್ಯ ಊದಿ ಅರ್ಜುನನಿಗೆ ಸಾರಥಿಯಾದಂತೆ ಗೋಪಾಲ ಗೌಡರ ಪರ ಅಖಾಡಕ್ಕೆ ಇಳಿದರು. ಬ್ಯಾಟಪ್ಪ ಹಾಗು ಗೋಪಾಲ ಗೌಡರು ಪ್ರತ್ಯೇಕವಾಗಿ ನೆಂಟರ ಬಳಿ ತೆರಳಿ ಬೆಂಬಲ ಕೋರಿದರು.ನಾಗಾನಂದ್ ವಿರುಧ್ಧ ಏನೇ ಆರೋಪಗಳು ಕೇಳಿ ಬರಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ.

ಎರಡನೇ ಬಾರಿಗೆ ಅವರನ್ನು ಬೆಂಬಲಿಸುವAತೆ ನಿರ್ಧಾರ ಮಾಡಿದವರು ತಮ್ಮ ನಿಲುವನ್ನು ಬದಲಾಯಿಸಿದರು. ಕೆ.ಜಿ.ಎಫ್‌ನ ಕನ್ನಡ ಸಂಘದ ಅಧ್ಯಕ್ಷರಾಗಿದ್ದ ನಲ್ಲೂರು ವಿಜಯಶಂಕರ್ ತಮ್ಮ ನಿಲುವನ್ನು ಬದಲಿಸಿದರು.ಬ್ಯಾಟಪ್ಪ ಮತ್ತು ಗೋಪಾಲ ಗೌಡರು ಬೆಳಕು ಹರಿಯುವ ಮೊದಲು ವಿಜಯ್ ಶಂಕರ್ ಮನೆಗೆ ತೆರಳಿ ಒತ್ತಾಯ ಮಾಡಿ ಬೆಂಬಲ ಕೋರಿದರು.

ನೀವು ಮತದಾನದ ದಿನದದಂದು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಿ ಅದಕ್ಕೆ ತಗಲುವ ವೆಚ್ಚವನ್ನು ನಾನೇ ನೀಡುತ್ತೇನೆ ಎಂದು ಹೇಳಿ ಹೋದ ಅಪ್ಪ ಮಗ ಕೆ.ಜಿ.ಎಫ್ ಕಡೆಗೆ ತಲೆ ಹಾಕಲಿಲ್ಲವಂತೆ. ಕಡೆಕಡೆಗೆ ವಿಜಯಶಂಕರ್ ಫೋನ್ ಕರೆಗಳನ್ನು ಸ್ವೀಕರಿಸಲಿಲ್ಲವಂತೆ.

ಮೊದಲೆಲ್ಲ ರಾಜಕಾರಣಿಗಳು ರಾಜ್ಯ ಸಾಹಿತ್ಯ ಪರಿಷತ್ ಅಧ್ಯಕ್ಷರ ಮನೆಗಳಿಗೆ ತೆರಳಿ ಸಮಾಲೋಚನೆ ನಡೆಸುತ್ತಿದ್ದರು. ಆದರೆ ಮಹೇಶ್ ಜೋಷಿಯವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಬೆಂಗಳೂರಿನ ಬಿ.ಜೆ.ಪಿ ಕಛೇರಿಗಳಲ್ಲಿ ಕುಳಿತು ಪ್ರಚಾರ ನಡೆಸಿದರು. ಗೋಪಾಲ ಗೌಡ ಮತ್ತು ಅವರ ತಂದೆ ರಾಜಕಾರಣಿಗಳ ಮನೆ ಬಾಗಿಲುಗಳಿಗೆ ತೆರಳಿ ಸಲಾಮು ಹಾಕಿದರು.

ರಾಜಕೀಯ ಪಕ್ಷಗಳ ವರಸೆಯಲ್ಲೇ ಪರಿಷತ್ ಚುನಾವಣೆ ನಡೆಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ನಾಗಾನಂದ ಕೆಂಪರಾಜ್ ವಿರುಧ್ಧ ಕೆಲಸ ಮಾಡಿತು. ಶಾಲೆಗಳಲ್ಲಿ ಕುವೆಂಪು ಸಾಹಿತ್ಯ ಪ್ರಚಾರ ಸೇರಿದಂತೆ ಕೋಲಾರದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ನಡೆಸಿದರು ನಾಗಾನಂದ ಕೆಂಪರಾಜ್ ರವರಿಗೆ ನಿರೀಕ್ಷಿತ ಬೆಂಬಲ ದೊರೆಯದೆ ಸೋಲು ಅನುಭವಿಸಬೇಕಾಯಿತು .

ರಾಜ್ಯ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಮಹೇಶ್ ಜೋಶಿ ತನಗೆ ಸರ್ಕಾರಿ ಕಾರು ಮತ್ತು ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದರು. ಕನ್ನಡದ ಕೆಲಸ ಮಾಡಲು ಸರ್ಕಾರದ ಕಾರಿನ ಅಗತ್ಯವೇನು?.ಬೇಕಾ ಬಿಟ್ಟಿ ಪುಸ್ತಕಗಳನ್ನು ಪ್ರಕಟಿಸಿ ಪರಿಷತ್‌ನ ತಿಜೋರಿಯನ್ನು ಜೋಶಿಯವರು ಖಾಲಿ ಮಾಡಿದರು. ರಾಜ್ಯ ಮಟ್ಟದ ಸಾಹಿತ್ಯ ಪರಿಷತ್ ಸಮ್ಮೇಳನ ನಡೆಸಲು ಸರ್ಕಾರ ಕೋಟಿಗಟ್ಟಲೇ ಹಣ ನೀಡಿದರು ಸಹ ಸರ್ಕಾರಕ್ಕೆ ಜೋಶಿಯವರು ಲೆಕ್ಕಪತ್ರ ನೀಡಲಿಲ್ಲ. ದುರಾಡಳಿತವನ್ನು ಪ್ರಶ್ನೆ ಮಾಡಿದವರನ್ನು ಪರಿಷತ್‌ನಿಂದ ಉಚ್ಚಾಟನೇ ಮಾಡಿದರು.

ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ ನಿಂತ ನೀರಾಗಿದೆ. ಮುಳಬಾಗಿಲುನಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದನಂತರ ಪರಿಷತ್ ಚಟುವಟಿಗಳು ಸ್ಥಗಿತಗೊಂಡಿವೆ.ನಾನು ಖರ್ಚುಮಾಡಿದ ಹಣ ವಾಪಸ್ ಬಂದಿಲ್ಲ. ಕೇಂದ್ರ ಪರಿಷತ್ ಹಣ ಬಿಡುಗಡೆಮಾಡಿಲ್ಲವೆಂದು ಗೋಪಾಲ ಗೌಡರು ಅಸಹಾಕರಾಗಿ ಹೇಳುತ್ತಿದ್ದಾರೆ.ಅವರನ್ನು ಕರೆತಂದು ಕನ್ನಡದ ತೇರಿನ ಮೇಲೆ ಕೂರಿಸಿದ ಸಾಹಿತ್ಯ ಪರಿಷತ್ ದಿಗ್ಗಜರು ಗೋಪಾಲ ಗೌಡರು ನಮ್ಮ ಸಂಪರ್ಕದಲ್ಲಿ ಇಲ್ಲ. ನಾವು ಯಾವುದಕ್ಕೂ ಜವಾಬ್ದಾರಲ್ಲ ಎಂದು ನುಣುಚಿಕೊಳ್ಳತ್ತಿದ್ದಾರೆ. ಅವರಿಗೆಲ್ಲ ಇದ್ದದ್ದು ನಾಗಾನಂದ ಕೆಂಪರಾಜ್ ಸೋಲಿನ ಗುರಿಯಾಗಿತ್ತು .

ರಂಗಮ0ದಿರದಲ್ಲಿ ಸಾಹತ್ಯ ಪರಿಷತ್ ಕಛೇರಿಗೆ ಸ್ಥಳಾವಕಾಶ ನೀಡಲಾಗಿತ್ತು. ಅಲ್ಲಿಂದ ಹೊರಹಾಕಿ ಕಛೇರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀಗ ಹಾಕಿದೆ.

ಹಲವು ದಶಕಗಳ ಹಿಂದೆ ಕೆ.ಜಿ.ಎಫ್‌ನ ಬೆಮೆಲ್ ಕಾರ್ಖಾನೆಯಲ್ಲಿ ಅಧಿಕಾರಿಯಾಗಿದ್ದ ಜ್ಞಾನಾನಂದ ಮತ್ತು ಅವರ ಪತ್ನಿ ಸರಿತಾ ಜ್ಞಾನಾನಂದರವರು ಸರ್ಕಾರದ ಅನುದಾನವಿಲ್ಲದ ಕಾಲದಲ್ಲಿ ಅರ್ಥಪೂuðವಾಗಿ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳನ್ನು ನಡೆಸಿದ್ದರು. ಬೇರೆ ಬೇರೆ ಸಂಪೂಲಗಳು ಲಭ್ಯವಿರುವ ಈ ಕಾಲಘಟ್ಟದಲ್ಲಿ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸಿ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುವುದು ಕನ್ನಡಕ್ಕೆ ಮಾಡಿದ ಅಪಚಾರವಾಗಿದೆ. ಯಾಕೆ ಗೋಪಾಲ ಗೌಡರ ತಿಜೋರಿ ಖಾಲಿಯಾಗಿದೆಯೆ? ಅವರ ಬಳಿ ಹಣದ ಥೈಲಿಗಳಿವೆ. ಕನ್ನಡದ ಕೆಲಸ ಮಾಡಲು ಅಡ್ಡಿಯಾಗುವುದಿಲ್ಲ ಎಂದವರು ಈಗ ಉತ್ತರಿಸಬೇಕಾಗಿದೆ.

ಶ್ರೀನಿವಾಸಪುರದಲ್ಲಿ ಶಾಲೆ ನೋಡಿಕೊಳ್ಳ ಬೇಕು. ಜೊತೆಗೆ ಮುಳಬಾಗಿಲು ಹಾಗು ಬೆಂಗಳೂರಿನಲ್ಲಿ ಹೋಟಲ್‌ಗಳು ಮತ್ತು ಕೋಲಾರದಲ್ಲಿ ದ್ವಿಚಕ್ರವಾಹನಗಳ ವ್ಯಾಪಾರನೋಡಿಕೊಳ್ಳಬೇಕು. ಪಾಪ ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ನೋಡಿಕೊಳ್ಳಲು ಅವರಿಗೆ ಸಮಯವೆಲ್ಲಿ ಎನ್ನತ್ತಾರೆ ಅವರ ಆಪ್ತರು.

ಗೋಪಾಲಗೌಡರ ಪರಿಸ್ಥಿತಿ ಕೊಟ್ಟ ಕುದುರೆಯನ್ನು ಏರದವನು ಧೀರನೂ ಅಲ್ಲ ಶೂರನೂ ಅಲ್ಲ ಎಂಬAತಾಗಿದೆ. ಕನ್ನಡದ ರಥಕ್ಕೆ ಗೋಪಾಲಗೌಡರನ್ನು ಏರಿಸಿದವರು ನಾಪತ್ತೆಯಾಗಿದ್ದಾರೆ. ಗೋಪಾಲಗೌಡರು ರಥದ ಮೇಲೆ ಕುಳಿತುಕೊಳ್ಳು ಹೋದರೆ ರಥ ಕೆಸರಿನಲ್ಲಿ ಹೂತು ಹೋಗಿದೆ, ರಥವನ್ನು ಎಳೆಯಬೇಕಾದ ಕುದುರೆ ಗಾಯಗೊಂಡಿದೆ. ನಿರಾಭಿಮಾನಿ ಕನ್ನಡಿಗರು ಕೋಲಾರದಲ್ಲಿ ಸಾಹಿತ್ಯ ಪರಿಷತ್ ಇದೆ ಎನ್ನುವುದನ್ನು ಮರೆತಿದ್ದಾರೆ. ನವೆಂಬರ್ ಕನ್ನಡಿಗರು ನಡೆಸುವ ಕನ್ನಡ ಕಾರ್ಯಕ್ರಮಗಳಲ್ಲಿ ಬಿಡುವು ಮಾಡಿಕೊಂಡು ಗೋಪಾಲಗೌಡರು ಅತಿಥಿಯಾಗಿ ಭಾಗವಹಿಸುತ್ತಾರೆ. ಸತ್ತಂತಿರುವ ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ ಅನ್ನು ಬಡಿದೆಬ್ಬಿಸುವವರು ಯಾರು?

ಚಿತ್ರ : ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಎನ್.ಬಿ.ಗೋಪಾಲಗೌಡ ಹಾಗೂ ಇತರರು ಸಂಭ್ರಮಿಸಿದ ಕ್ಷಣ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande