ಶಾಮನೂರು ಶಿವಶಂಕರಪ್ಪ ನಿಲುವುಗಳು ಎಲ್ಲರಿಗೂ ಮಾದರಿ:ಈಶ್ವರ ಖಂಡ್ರೆ
ಬೆಂಗಳೂರು, 24 ಡಿಸೆಂಬರ್ (ಹಿ.ಸ.); ಆ್ಯಂಕರ್:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಬೆಂಗಳೂರಿನ ತರಳಬಾಳು ಭವನದಲ್ಲಿ ಆಯೋಜಿಸಲಾದ ಡಾ. ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ ಭಾಗವಹಿಸಿ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಡಾ. ಶಾಮನೂರ
Shamanur


ಬೆಂಗಳೂರು, 24 ಡಿಸೆಂಬರ್ (ಹಿ.ಸ.);

ಆ್ಯಂಕರ್:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಬೆಂಗಳೂರಿನ ತರಳಬಾಳು ಭವನದಲ್ಲಿ ಆಯೋಜಿಸಲಾದ ಡಾ. ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ ಭಾಗವಹಿಸಿ ಗೌರವ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು ಡಾ. ಶಾಮನೂರು ಶಿವಶಂಕರಪ್ಪ ಅವರು ಮೂರು ಅವಧಿಗೆ ಸತತ ಹದಿಮೂರೂವರೆ ವರ್ಷಗಳ ಕಾಲ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ, ಜನರಿಂದ–ಜನರಿಗಾಗಿ–ಜನರಿಗೋಸ್ಕರ ಬದುಕಿದ ಅಪರೂಪದ ನಾಯಕರು. ಅವರ ಜೀವನೋತ್ಸಾಹ, ಸಮಾಜದ ಮೇಲಿನ ಬದ್ಧತೆ ಮತ್ತು ನಿರ್ಭಯ ನಿಲುವುಗಳು ನಮಗೆಲ್ಲರಿಗೂ ಮಾದರಿ ಎಂದರು.

ಬೆಂಗಳೂರು ನಗರದಲ್ಲಿ 1000 ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ನಿರ್ಮಿಸಬೇಕು ಎಂಬುದು ಅವರ ಮಹತ್ತರ ಆಶಯವಾಗಿತ್ತು.

ಈ ಕನಸನ್ನು ನನಸು ಮಾಡಲು ನಾವು ಬದ್ಧರಾಗಿದ್ದು, ಈಗಾಗಲೇ 2 ಎಕರೆ ಜಮೀನು ಖರೀದಿಸಲಾಗಿದ್ದು, ಯೋಜನೆಯ ರೂಪುರೇಷೆ ಸಿದ್ಧವಾಗಿದೆ.

“ಸಂಸ್ಥಾನಗಳು ಹುಟ್ಟುತ್ತವೆ–ಅಳಿಯುತ್ತವೆ, ಮನುಷ್ಯ ಹುಟ್ಟುತ್ತಾನೆ–ಸಾಯುತ್ತಾನೆ; ಆದರೆ ಹುಟ್ಟು–ಸಾವಿನ ನಡುವಿನ ಅವಧಿಯಲ್ಲಿ ಮಾಡಿದ ಕಾರ್ಯ ಮಾತ್ರ ಶಾಶ್ವತ” ಎಂಬಂತೆ, ಡಾ. ಶಾಮನೂರು ಶಿವಶಂಕರಪ್ಪ ಅವರು ಮಾಡಿದ ಸೇವೆ ಸದಾ ಸ್ಮರಣೀಯ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande