ಶಾಲೆಗಳಲ್ಲಿ ಅಭಿವೃದ್ಧಿ ಕೆಲಸಗಳು ಮುಖ್ಯ ಸಚಿವ ಪಾಟೀಲ
ವಿಜಯಪುರ, 24 ಡಿಸೆಂಬರ್ (ಹಿ.ಸ.) ಆ್ಯಂಕರ್: ಶಾಲೆಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುವದರ ಮೂಲಕ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಚಲ ಸಂಕಲ್ಪ ಹೊಂದಿರುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ತಿಕೋಟಾ
ಶಾಲೆ


ವಿಜಯಪುರ, 24 ಡಿಸೆಂಬರ್ (ಹಿ.ಸ.)

ಆ್ಯಂಕರ್: ಶಾಲೆಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುವದರ ಮೂಲಕ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಚಲ ಸಂಕಲ್ಪ ಹೊಂದಿರುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮೋಹಿತೆ ವಸ್ತಿ ಮತ್ತು ಅರಕೇರಿ ಗ್ರಾಮದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೋಹಿತೆ ವಸ್ತಿಯಲ್ಲಿ ಕೆ.ಎಸ್.ಐ.ಐ.ಡಿ.ಸಿ ವತಿಯಿಂದ ಸಿ.ಎಸ್.ಆರ್ ಅನುದಾನದಲ್ಲಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿ.ಎಸ್.ಆರ್ ಅನುದಾನದಲ್ಲಿ ಸರಕಾರಿ ಶಾಲೆಗಳಲ್ಲಿ ನೂತನ ಕೊಠಡಿಗಳ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮೂಲಕ ಮಹಾನಗರಗಳ ಕಾನ್ವೆಂಟ್ ಶಾಲೆಗಳಲ್ಲಿರುವ ಮಾದರಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಅರಕೇರಿಯಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ಟಿ.ಎಸ್.ಇ ಯೋಜನೆಯಡಿ ನಿರ್ಮಿಸಿರುವ ನೂತನ ಸಮುದಾಯ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯ ಭವನಗಳು ಗ್ರಾಮದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುತ್ತವೆ. ಅಲ್ಲದೇ, ಸಮುದಾಯದ ಏಕತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಸಿದ್ದಣ್ಣ ಸಕ್ರಿ, ಅರ್ಜುನ ರಾಠೋಡ, ಚನ್ನಪ್ಪ ದಳವಾಯಿ, ಪೀರಪಟೇಲ ಪಾಟೀಲ, ಡಿ.ಎಲ್.ಚವ್ಹಾಣ, ಅಶೋಕ ದಳವಾಯಿ, ಎಸ್.ಎಚ್.ನಾಡಗೌಡ, ಸುನಂದಾ ಬರಕಡೆ, ನಿಂಗು ಬೆಳ್ಳುಬ್ಬಿ, ಶಿವಾನಂದ ಇಂಚಗೇರಿ, ಸುರೇಶ ಬಂಡಾರಿ, ತುಕಾರಾಮ ರಾಠೋಡ, ಹುಸೇನ ಮನಗೂಳಿ, ಸಿದ್ದಣ್ಣ ಶಿರಾಳಶೆಟ್ಟಿ, ತುಕಾರಾಮ ಮೋಹಿತೆ, ತಹಶೀಲ್ದಾರ ಸುರೇಶ ಚಾವಲರ, ತಾ.ಪಂ ಆಡಳಿತಾಧಿಕಾರಿ ಬಸವಂತರಾಯ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande