ಪಾಕಿಸ್ತಾನದ ಕರಕ್‌ನಲ್ಲಿ ಪೊಲೀಸ್ ವಾಹನದ ಮೇಲೆ ದಾಳಿ ; ಐವರು ಸಿಬ್ಬಂದಿ ಸಾವು
ಇಸ್ಲಾಮಾಬಾದ್, 23 ಡಿಸೆಂಬರ್(ಹಿ.ಸ.): ಆ್ಯಂಕರ್ : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯ ಗುರ್ಗುರಿ ಪ್ರದೇಶದಲ್ಲಿ ಪೊಲೀಸ್ ವಾಹನದ ಮೇಲೆ ನಡೆದ ದಾಳಿಯಲ್ಲಿ ಐವರು ಕಾನ್‌ಸ್ಟೆಬಲ್‌ಗಳು ಸಾವನ್ನಪ್ಪಿದ್ದಾರೆ. ಇಂದು ಗಸ್ತು ತಿರುಗುತ್ತಿದ್ದ ವೇಳೆ ದಾಳಿಕೋರರು ಹೊಂಚು ಹಾಕಿ ವ್ಯಾನ
Attack


ಇಸ್ಲಾಮಾಬಾದ್, 23 ಡಿಸೆಂಬರ್(ಹಿ.ಸ.):

ಆ್ಯಂಕರ್ : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯ ಗುರ್ಗುರಿ ಪ್ರದೇಶದಲ್ಲಿ ಪೊಲೀಸ್ ವಾಹನದ ಮೇಲೆ ನಡೆದ ದಾಳಿಯಲ್ಲಿ ಐವರು ಕಾನ್‌ಸ್ಟೆಬಲ್‌ಗಳು ಸಾವನ್ನಪ್ಪಿದ್ದಾರೆ.

ಇಂದು ಗಸ್ತು ತಿರುಗುತ್ತಿದ್ದ ವೇಳೆ ದಾಳಿಕೋರರು ಹೊಂಚು ಹಾಕಿ ವ್ಯಾನ್‌ಗೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೌಕತ್ ಖಾನ್ ಈ ಘಟನೆಯನ್ನು ದೃಢಪಡಿಸಿದ್ದು, ಮೃತರನ್ನು ಶಾಹಿದ್ ಇಕ್ಬಾಲ್, ಸಮಿವುಲ್ಲಾ, ಆರಿಫ್, ಸಫ್ದಾರ್ ಮತ್ತು ಮೊಹಮ್ಮದ್ ಅಬ್ರಾರ್ ಎಂದು ಗುರುತಿಸಲಾಗಿದೆ.

ಘಟನೆಯ ಬಳಿಕ ಪ್ರದೇಶವನ್ನು ಸುತ್ತುವರೆದು ದಾಳಿಕೋರರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಸ್ಥಳಿಯ ಮಾಧ್ಯಮ ವರದಿಗಳ ಪ್ರಕಾರ, 2025ರಲ್ಲಿ ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಈ ವರ್ಷದಲ್ಲೇ ಪ್ರಾಂತ್ಯದಲ್ಲಿ 1,500ಕ್ಕೂ ಹೆಚ್ಚು ಭಯೋತ್ಪಾದಕ ಘಟನೆಗಳು ದಾಖಲಾಗಿವೆ ಎಂದು ಪೊಲೀಸ್ ಅಂಕಿಅಂಶಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande