ಮೆಕ್ಸಿಕನ್ ನೌಕಾಪಡೆಯ ವಿಮಾನ ಪತನ ; ಕನಿಷ್ಠ ಐದು ಸಾವು
ಗಾಲ್ವೆಸ್ಟನ್, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಟೆಕ್ಸಾಸ್‌ನ ಗಾಲ್ವೆಸ್ಟನ್ ಸಮೀಪ ಸೋಮವಾರ ಮೆಕ್ಸಿಕನ್ ನೌಕಾಪಡೆಯ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ. ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ತೀವ್ರವಾಗಿ ನಡೆದಿದ್ದು, ಸಾವುನೋವುಗಳ ಸಂಖ್ಯೆ ಬಗ್ಗೆ ವಿಭಿನ್ನ ವರದಿಗಳ
Plane crash


ಗಾಲ್ವೆಸ್ಟನ್, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಟೆಕ್ಸಾಸ್‌ನ ಗಾಲ್ವೆಸ್ಟನ್ ಸಮೀಪ ಸೋಮವಾರ ಮೆಕ್ಸಿಕನ್ ನೌಕಾಪಡೆಯ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ.

ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ತೀವ್ರವಾಗಿ ನಡೆದಿದ್ದು, ಸಾವುನೋವುಗಳ ಸಂಖ್ಯೆ ಬಗ್ಗೆ ವಿಭಿನ್ನ ವರದಿಗಳು ಪ್ರಕಟವಾಗಿವೆ.

ಯುಎಸ್ ಕೋಸ್ಟ್ ಗಾರ್ಡ್ ಮಾಹಿತಿ ಪ್ರಕಾರ, ಅಪಘಾತದಲ್ಲಿ ಕನಿಷ್ಠ ಐದು ಸಾವುಗಳು ದೃಢಪಟ್ಟಿವೆ. ಇನ್ನು ಕೆಲವು ವರದಿಗಳ ಪ್ರಕಾರ ಪೈಲಟ್‌ಗಳು, ವೈದ್ಯರು ಹಾಗೂ ರೋಗಿ ಸೇರಿ ಸಾವಿನ ಸಂಖ್ಯೆ ಆರು ಆಗಿರಬಹುದೆಂದು ತಿಳಿದುಬಂದಿದೆ.

ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ಹೂಸ್ಟನ್ ಕ್ರಾನಿಕಲ್ ವರದಿಗಳಂತೆ, ವಿಮಾನದಲ್ಲಿ ನಾಲ್ವರು ಮೆಕ್ಸಿಕನ್ ನೌಕಾಪಡೆಯ ಅಧಿಕಾರಿಗಳು ಮತ್ತು ನಾಲ್ವರು ನಾಗರಿಕರು ಸೇರಿದಂತೆ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿ ಒಂದು ವರ್ಷದ ಮಗು ಕೂಡ ಇದ್ದು, ಅದು ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿತ್ತು ಎಂದು ತಿಳಿದು ಬಂದಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಕನಿಷ್ಠ ಇಬ್ಬರನ್ನು ರಕ್ಷಿಸಿ ಸ್ಥಳೀಯ ವೈದ್ಯಕೀಯ ಕೇಂದ್ರಗಳಿಗೆ ದಾಖಲಿಸಲಾಗಿದೆ. ರಕ್ಷಿಸಲಾದವರಲ್ಲಿ 27 ವರ್ಷದ ಮಹಿಳೆಯೂ ಸೇರಿದ್ದಾರೆ. ದಟ್ಟವಾದ ಮಂಜು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ.

ಗಾಲ್ವೆಸ್ಟನ್ ಕೌಂಟಿ ಶೆರಿಫ್ ಜಿಮ್ಮಿ ಫುಲೆನ್ ಅವರ ಪ್ರಕಾರ, ವಿಮಾನವು ಮಧ್ಯಾಹ್ನ 3:17ರ ಸುಮಾರಿಗೆ ಗಾಲ್ವೆಸ್ಟನ್ ಕಾಸ್‌ವೇಯ ಪಶ್ಚಿಮ ಭಾಗದಲ್ಲಿ ಪತನಗೊಂಡಿತು. ಸಂಜೆ 5 ಗಂಟೆಯೊಳಗೆ ಆರು ಮಂದಿಯನ್ನು ರಕ್ಷಿಸಲಾಗಿದೆ.

ಮೆಕ್ಸಿಕನ್ ನೌಕಾಪಡೆಯ ಸಚಿವಾಲಯದ ಪ್ರಕಟಣೆಯಂತೆ, ವಿಮಾನವು ಮಿಚೌ ಮತ್ತು ಮೌಯಿ ಫೌಂಡೇಶನ್ ಸಹಯೋಗದೊಂದಿಗೆ ವೈದ್ಯಕೀಯ ನೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಈ ಸಂಸ್ಥೆ ಮೆಕ್ಸಿಕೊದಲ್ಲಿ ತೀವ್ರ ಸುಟ್ಟ ಗಾಯಗಳಿಂದ ಬಳಲುವ ಮಕ್ಕಳ ಚಿಕಿತ್ಸೆಗೆ ನೆರವು ನೀಡುತ್ತದೆ.

ಘಟನೆಯ ಕುರಿತು ಗಾಲ್ವೆಸ್ಟನ್ ಪೊಲೀಸ್ ಇಲಾಖೆ, ಗಾಲ್ವೆಸ್ಟನ್ ಕೌಂಟಿ ಶೆರಿಫ್ ಕಚೇರಿ, ಯುಎಸ್ ಕೋಸ್ಟ್ ಗಾರ್ಡ್ ಹಾಗೂ ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆ ಸಂಯುಕ್ತವಾಗಿ ತನಿಖೆ ನಡೆಸುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande