
ಹೊಸಪೇಟೆ, 23 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ದವಾಗಿರುವ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳು ಜನವರಿ 2 ರಿಂದ ಪ್ರಾರಂಭವಾಗಲಿದ್ದು, ಜಾತ್ರೆಯಲ್ಲಿ ಸ್ವಇಚ್ಛೆಯಿಂದ ಸ್ವಯಂಸೇವಕರಾಗಿ ಸೇವೆ ಸಲ್ಲಿಸ ಬಯಸುವ ಆಸಕ್ತರು ಹೆಸರು ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಸೇವೆ ಸಲ್ಲಿಸುವ ವಿಭಾಗಗಳು
ಸ್ವಚ್ಛತಾ ಸೇವೆ : ಮಹಾರಥೋತ್ಸವದ ಮೈದಾನ, ಶ್ರೀಗವಿ ಮಠದ ರಸ್ತೆ, ಮಹಾದಾಸೋಹದ ರಸ್ತೆ, ಮಠದ ಆವರಣ, ಮಹಾದಾಸೋಹ ಆವರಣ, ಕೈಲಾಸ ಮಂಟಪ, ಪ್ರಸಾದ ತಯಾರಿಸುವ ಸ್ಥಳ ಮತ್ತು ಜಾತ್ರಾ ಅಂಗಡಿ ಸ್ಥಳಗಳನ್ನು ಸ್ವಚ್ಛಗೊಳಿಸುವ ಸೇವೆ ಇರುತ್ತದೆ.
ಮಹಾದಾಸೋಹ ಸೇವೆ : ತರಕಾರಿ ಹೆಚ್ಚುವುದು, ಪ್ರಸಾದ ತಯಾರಿಸುವುದು, ಪ್ರಸಾದ ಬಡಿಸುವುದು, ಅಡುಗೆ ಸಾಮಾನು ತೊಳೆಯುವುದು, ರೊಟ್ಟಿ ಸಂಗ್ರಹಿಸುವುದು, ಕಟ್ಟಿಗೆ ಹೊರುವುದು(ಪ್ರಸಾದ ತಯಾರಿಸುವ ಸ್ಥಳಕ್ಕೆ ತರುವುದು) ಮತ್ತು ಕಟ್ಟಿಗೆ ಒಡೆಯುವ ಸೇವೆ ಇರುತ್ತದೆ.
ಶಿಸ್ತು ಕರ್ತವ್ಯ ಸೇವೆ : ಜಾತ್ರಾ ಆವರಣದಲ್ಲಿ ಶಿಸ್ತು ಕಾಪಾಡುವುದು, ಮಹಾದಾಸೋಹದಲ್ಲಿ ಶಿಸ್ತು ಕಾಪಾಡುವುದು, ವಾಹನಗಳ ನಿಲುಗಡೆ, ಯಾತ್ರಿಗಳಿಗೆ ಸಣ್ಣಪುಟ್ಟ ಅಂಗಡಿಗಳಿಂದ ತೊಂದರೆಯಾಗದಂತೆ ನೋಡುವುದು, ಜಾತ್ರಾ ಅಂಗಡಿಗಳ ಶಿಸ್ತು ಕಾಪಾಡುವುದು ಸೇರಿದಂತೆ ದವಸಧಾನ್ಯ ಸಂಗ್ರಹಿಸುವಲ್ಲಿ ಸಹಾಯ ಮಾಡುವುದಾಗಲಿ ಹಾಗೂ ಶ್ರೀಗವಿ ಮಠವು ಒಪ್ಪಿಸುವ ಇತರೆ ಯಾವುದೇ ಸೇವೆಯನ್ನು ಮಾಡಲು ಸಿದ್ಧರಿರಬೇಕಿದೆ.
ಸೇವೆ ಸಲ್ಲಿಸ ಬಯಸುವ ಅಸ್ತಕರು ತಮ್ಮ ಊರು, ಸಂಘ-ಸಂಸ್ಥೆ ಮತ್ತು ಇಲಾಖೆ ಸಂಪೂರ್ಣ ವಿವರ ಹಾಗೂ ಭಕ್ತಾಧಿಗಳ ಸಂಖ್ಯೆಯನ್ನು ಮತ್ತು ಸೇವೆ ಸಲ್ಲಿಸುವ ವಿಭಾಗದ ಹೆಸರು ನೊಂದಾಯಿಸುವ ಜತೆಗೆ, ಸೇವೆ ಸಲ್ಲಿಸುವ ದಿನಗಳನ್ನು ತಿಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮತ್ತು ನೊಂದಾಣಿಗಾಗಿ ಮೊ.9844634990 ಸಂಖ್ಯೆಗೆ ಕರೆ ಮಾಡಬಹುದು ಎಂದು ಶ್ರೀಗವಿಮಠ ಸಂಸ್ಥಾನದ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್