
ಕ್ವಾರಕಾಸ್, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಾಷಿಂಗ್ಟನ್ ಕಾರಾಕಾಸ್ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದ್ದು, ಅಮೆರಿಕವು ವೆನೆಜುವೆಲಾದ ಎರಡನೇ ವ್ಯಾಪಾರಿ ಹಡಗನ್ನು ವಶಪಡಿಸಿಕೊಂಡಿದೆ. ಇದರಿಂದ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಡುರೊ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದು, ನಿಷೇಧಿತ ತೈಲ ಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.
ಡಿಸೆಂಬರ್ 10ರಂದು ಮೊದಲ ತೈಲ ಟ್ಯಾಂಕರ್ ವಶಪಡಿಸಿಕೊಂಡ ಬಳಿಕ, ಈ ತಿಂಗಳಲ್ಲೇ ಎರಡನೇ ಬಾರಿ ವೆನೆಜುವೆಲಾ ತೈಲ ಸಾಗಿಸುತ್ತಿದ್ದ (ಪನಾಮ ಧ್ವಜದ) ಹಡಗನ್ನು ಅಮೆರಿಕ ಕರಾವಳಿಯ ಬಳಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೋಸ್ಟ್ ಗಾರ್ಡ್ ಮತ್ತು ರಕ್ಷಣಾ ಇಲಾಖೆಯ ಸಹಾಯದಿಂದ ಈ ಕಾರ್ಯಾಚರಣೆ ನಡೆದಿದ್ದು, ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ವೀಡಿಯೊ ಬಿಡುಗಡೆ ಮಾಡಿದ್ದಾರೆ.
ವೆನೆಜುವೆಲಾ ಈ ಕ್ರಮವನ್ನು “ಕಡಲ್ಗಳ್ಳತನ”ವೆಂದು ಖಂಡಿಸಿದ್ದು, ಇರಾನ್ ಕೂಡ ಅಮೆರಿಕದ ಕ್ರಮವನ್ನು ವಿರೋಧಿಸಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಅಮೆರಿಕದ ಯುದ್ಧನೌಕೆಗಳ ನಿಯೋಜನೆ ಹಿನ್ನೆಲೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಆತಂಕ ವ್ಯಕ್ತಪಡಿಸಿದ್ದಾರೆ. ಅಮೆರಿಕದ ದಿಗ್ಬಂಧನ ಕೊನೆಗೊಳಿಸುವಂತೆ ಮಡುರೊ ವಿಶ್ವಸಂಸ್ಥೆಗೆ ಮನವಿ ಮಾಡಿದ್ದು, ಯುಎನ್ ಎರಡೂ ದೇಶಗಳು ಸಂಯಮ ವಹಿಸಬೇಕೆಂದು ಕರೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa