ಹಂಪಿ ಮೃಗಾಲಯ : ವರ್ಷಾಂತ್ಯದವರೆಗೆ ಪ್ರವಾಸಿಗರ ವೀಕ್ಷಣೆಗೆ ರಜಾಮುಕ್ತ ಅವಕಾಶ
ಹಂಪಿ, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹಂಪಿಯ ಮೃಗಾಲಯ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಇಂದು ಮತ್ತು ಡಿ.30 ರ ಮಂಗಳವಾರ ಸೇರಿದಂತೆ ಪ್ರವಾಸಿಗರ ವೀಕ್ಷಣೆಗೆ ರಜಾ ಮುಕ್ತಗೊಳಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ರಾಜೇಶ್ ನಾಯ್ಕ ತಿಳಿಸ
ಹಂಪಿ ಮೃಗಾಲಯ : ವರ್ಷಾಂತ್ಯದವರೆಗೆ ಪ್ರವಾಸಿಗರ ವೀಕ್ಷಣೆಗೆ ರಜಾಮುಕ್ತ ಅವಕಾಶ


ಹಂಪಿ, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹಂಪಿಯ ಮೃಗಾಲಯ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಇಂದು ಮತ್ತು ಡಿ.30 ರ ಮಂಗಳವಾರ ಸೇರಿದಂತೆ ಪ್ರವಾಸಿಗರ ವೀಕ್ಷಣೆಗೆ ರಜಾ ಮುಕ್ತಗೊಳಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ರಾಜೇಶ್ ನಾಯ್ಕ ತಿಳಿಸಿದ್ದಾರೆ.

ಕ್ರಿಸ್‍ಮಸ್ ಹಬ್ಬ ಪ್ರಯುಕ್ತ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿರುವುದರಿಂದ ಶಾಲಾ ಮಕ್ಕಳು, ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರು ಮೃಗಾಲಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ರಜಾ ಮುಕ್ತಗೊಳಿಸಿ ನಿತ್ಯದಂತೆ ಸೇವೆ ನೀಡಲಾಗುವುದು.

ಕುಟುಂಬದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮೃಗಾಲಯ ವೀಕ್ಷಣೆಗೆ ಆಗಮಿಸಿ ಪ್ರಾಣಿಗಳ ವೀಕ್ಷಣೆ ಮಾಡಬಹುದೆಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande