
ಹಾವೇರಿ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಸರ್ಕಾರದ ನೂತನ ಪರೀಕ್ಷಾ ನೀತಿಯಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ. ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ನವೋದಯ ವಿದ್ಯಾ ಸಂಸ್ಥೆಯ ಶ್ರೀ ಬಸವರಾಜ ಬಳ್ಳಾರಿ ಪೂರ್ವ ಪ್ರಾಥಮಿಕ ಶಾಲೆ, ಶ್ರೀಮತಿ ಸಿದ್ದಮ್ಮ ಮೈಲಾರ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ವೀರಯ್ಯ ಬ ಕಳಸೂರಮಠ ಪ್ರೌಢ ಶಾಲೆ, ಶ್ರೀಮತಿ ಸುಶೀಲಮ್ಮ ಹಾವೇರಿಮಠ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಶಾಲಾ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರಾದ ಬಳ್ಳಾರಿಯವರ ಪ್ರೀತಿ ವಿಶ್ವಾಸ ಹಳೆ ಸಂಬಂಧ ನಮ್ಮನ್ನು ಇಲ್ಲಿ ಕರೆದು ತಂದಿದೆ. ಅವರು ಸರಳ ಸಜ್ಜನಿಕೆ ಯಜಮಾನರು ನನಗೆ ಬಹಳಬದೊಡ್ಡ ಆಶಿರ್ವಾದ ಮಾಡಿದ್ದಾರೆ. ನಾನು ಮೊದಲು ಇಲ್ಲಿ ಬಂದಾಗ ಸಾಕಷ್ಟು ವಿರೋಧ ವ್ಯಕ್ತವಾಯಿತು. ಅವರು ಇಡಿ ಬ್ಯಾಡಗಿ ತಾಲೂಕು ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯತಿ ತಿರುಗಿ ಚುನಾವಣೆ ಮಾಡಿದರು. ಅವರ ಋಣ ಮರೆಯಲಿ ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂಸ್ಥೆ ಕಟ್ಟಲು ಹಲವಾರು ಜನರು ಸಹಾಯ ಮಾಡಿದ್ದಾರೆ. ಮೈಲಾರ ಮಹದೇವಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಅವರಿಗೆ ಎಷ್ಟು ಮಹತ್ವ ಸಿಗಬೇಕಿತ್ತು ಅಷ್ಟು ಮಹತ್ವ ಸಿಗಲಿಲ್ಲ. ಬ್ರಿಟೀಷರಿಗೆ ಅವರು ಸಿಂಹ ಸ್ವಪ್ನವಾಗಿದ್ದರು. ಬ್ರಿಟಿಷರು ಅವರನ್ನು ಮೊಸದಿಂದ ಕೊಂದರು. ಸ್ವಾತಂತ್ರ್ಯ ನಂತರ ಮಹದೇವ ಬಣಕಾರ ವೈಚಾರಿಕ ಕ್ರಾಂತಿ ಮಾಡಿದ್ದಾರೆ. ಅವರ ಹೆಸರಿನಲ್ಲಿ ಪ್ರಾಥಮಿಕ ಶಾಲೆ, ಡಾ. ಕಳಸೂರ ಮಠ ಅವರ ಹೆಸರಿನಲ್ಲಿ ಹೈಸ್ಕೂಲ್ ಹಾವೇರಿ ಮಠ ಆಂಗ್ಲ ಮಾಧ್ಯಮ ಶಾಲೆಗೆ ಸಹಾಯ ಮಾಡಿದ್ದಾರೆ. ಇಲ್ಲಿ ಒಂದು ಸಾವಿರ ಮಕ್ಕಳು ಕಲಿಯುತ್ತಿದ್ದಾರೆ ಎಂದರೆ ದೊಡ್ಡ ಸಾಧನೆ. ಗ್ರಾಮೀಣ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವುದು ಸವಾಲು ಶಾಲೆಗೆ ಎಷ್ಟು ಸಹಾಯ ಮಾಡಿದರೂ ಕಡಿಮೆಯೇ ಶಾಲೆ ಸ್ಥಾಪನೆ ಮಾಡಿದರೆ ಮುಂದಿನ ಪೀಳಿಗೆಗೆ ಡಿಫಾಜಿಟ್ ಇಟ್ಟ ಹಾಗೆ. ಅದು ಬಹಳ ದೊಡ್ಡ ಕೆಲಸ. ಅತ್ಯಂತ ಶ್ರದ್ದೆಯಿಂದ ಈ ಕೆಲಸ ಮಾಡುತ್ತ ಬಂದಿದ್ದಾರೆ ಎಂದರು.
ಈ ಬಗ್ಗೆ ಒಂದು ಕತೆ ನೆನಪಾಗುತ್ತದೆ. ಕೃಷ್ಣ ತನ್ನ ಮೇಲೆ ಯಾರ ಪ್ರೀತಿ ಹೆಚ್ಚಿದೆ ಅಂತ ತಿಳಿಯಲು ಒಂದು ಸ್ಪರ್ಧೆ ಏರ್ಪಡಿಸಿದ ಸತ್ಯಭಾಮ ರಾಣಿ ನನ್ನ ಬಿಟ್ಟು ಯಾರಿದ್ದಾರೆ ಎಂದು ಒಂದು ತಕ್ಕಡಿಯಲ್ಲಿ ಕೃಷ್ಣನನ್ನು ಕೂಡಿಸಿ ತನ್ನ ಬಳಿ ಇರುವ. ವಜ್ರ ವೈಡುರ್ಯ ತಂದು ಹಾಕಿದಳು. ಆದರೆ, ಕೃಷ್ಣನ ತಕ್ಕಡಿ ಮೇಲೆ ಎಳಲಿಲ್ಲ ಆದರೆ, ರುಕ್ಮಿಣಿ ಒಂದು ತುಳಸಿ ಎಲೆಯನ್ನು ತಂದು ತಕ್ಕಡಿಯಲ್ಲಿ ಇಟ್ಟು ಕೈ ಮುಗಿದಳು ಕೃಷ್ಣನ ತಕ್ಕಡಿ ಮೇಲೆ ಎದ್ದಿತು. ಭಕ್ತಿ ಮುಖ್ಯ. ಇಲ್ಲಿ ನಿಮ್ಮ ಕೊಡುಗೆ ಬಹಳ ಮುಖ್ಯ ಸಂಸ್ಥೆಗಳ ಸೇವೆಯನ್ನು ಜನರು ಗುರುತಿಸಬೇಕು ಎಂದರು.
ದಕ್ಷಿಣ ಕರ್ನಾಟಕದಲ್ಲಿ ಮಹಾರಾಜರ ಕಾಲದಿಂದ ಶಾಲೆ ಕಾಲೆಜುಗಳಿವೆ ಉತ್ತರ ಕರ್ನಾಟಕದಲ್ಲಿ ಐವತ್ತರಷ್ಟು ಸರ್ಕಾರಿ ಶಾಲೆ ಕಡಿಮೆ ಇವೆ. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಪ್ರೇಮಿಗಳು ದಾನಿಗಳು ಶಿಕ್ಷಣ ಪ್ರಾರಂಭಿಸಿದರು.
ಧಾರವಾಡ ಮುರುಗಾ ಮಠ ನೂರು ವರ್ಷದಿಂದ ಶಿಕ್ಷಣ ಮತ್ತು ದಾಸೊಹ ಆರಂಭಿಸಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠ, ಬಿಎಲ್ ಡಿಇ ಸಂಸ್ಥೆ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಬಸವೇಶ್ವರ ವಿದ್ಯಾವರ್ಧಕ ಸಂಘ ಎಲ್ಲ ಸಂಸ್ಥೆಗಳು ಶಿಕ್ಷಣ ನೀಡುತ್ತ ಬಂದಿವೆ. ಈಗ ಉತ್ತರ ಕರ್ನಾಟಕದಲ್ಲಿ ದಕ್ಷಿಣ ಕರ್ನಾಕದಲ್ಲಿ ಇರುವಷ್ಟು ಶಾಲೆಗಳು ಉತ್ತರ ಕರ್ನಾಟಕದಲ್ಲಿ ಆಗಬೇಕು. ನಾನು ಹಾವೇರಿಗೆ ಯುನಿವರ್ಸಿಟಿ ಮಾಡಿದೆ ಅದರಿಂದ ಬ್ಯಾಡಗಿ, ರಾಣೆಬೆನ್ನೂರು, ಹಾನಗಲ್ ವಿದ್ಯಾರ್ಥಿ ಗಳು ಪಿಜಿ ಮಾಡುವಂತಾಯಿತು. ಅದರಲ್ಲೂ ಎಸ್ಸಿ, ಎಸ್ಟಿ ಮಕ್ಕಳು 50% ರಷ್ಟು ಇದ್ದಾರೆ. ಅವುಗಳನ್ನು ಬಂದ್ ಮಾಡಬೇಕು ಅಂತ ಸರ್ಕಾರ ಪ್ರಯತ್ನ ಮಾಡುತ್ತಿದೆ ಸರ್ಕಾರ ನಯಾ ಪೈಸೆ ಕೊಡುತ್ತಿಲ್ಲ. ನಮ್ಮ ರಾಜ್ಯದಲ್ಲಿ ನಾವು ಶಿಕ್ಷಣ ಕಲಿಸಲು ಮುಂದಾದರೆ, ಅದನ್ನು ಸರ್ಕಾರವೇ ನಿಲ್ಲಿಸಿದರೆ ನಮ್ಮ ಬಡ ಮಕ್ಕಳು ಎಲ್ಲಿಗೆ ಹೋಗಬೇಕು. ನೂರಾರು ಎಕರೆ ಭೂಮಿ ತೆಗದುಕೊಂಡು ವಿಶ್ವವಿದ್ಯಾಲಯ ಮಾಡುವುದು ಹಳೆಯ ಕಾಲ ಈಗ ಕಂಪ್ಯುಟರ್ ಕಾಲ ಮನೆಯಲ್ಲಿಯೇ ಕುಳಿತು ಶಿಕ್ಷಣ ಪಡೆಯಲು ಅವಕಾಶ ಇದೆ ಎಂದು ಹೇಳಿದರು.
ಈ ಸರ್ಕಾರದಲ್ಲಿ ಹೆಂಗಿದೆ ಅಂದರೆ ಮೊದಲು ದೆತು ದೆತು ಅಂತಾರೆ, ದಿಲಾತು ದಿಲಾತು ಅಂತಾರೆ ನಂತರ ದೇನೆವಾಲಾಂಕೊ ದಿಕಾತು ಅಂತ ಹೇಳುತ್ತಾರೆ. ಉತ್ತರ ಕರ್ನಾಟಕ ಶಿಕ್ಷಣಕ್ಕೆ ಪ್ರಾಥಮಿಕ ಆದ್ಯತೆ ಕೊಡಬೇಕು. ನಮ್ಮ ಅವಧಿಯಲ್ಲಿ ವಿವೇಕ ಯೊಜನೆಯಿಂದ 30 ಸಾವಿರ ಶಾಲಾ ಕೊಠಡಿ ಕಟ್ಟಲು ಪ್ರಾರಂಭಿಸಿದ್ದೇವು. 9 ಸಾವಿರ ಶಾಲಾ ಕೊಠಡಿ ನಿರ್ಮಾಣ ಪೂರ್ಣಗೊಳ್ಳುತ್ತಿದೆ. ಈ ಸರ್ಕಾರ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು. ಈಗ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ. ಈಗ ಒಟ್ಟು ಮೂವತ್ತು ಮಾರ್ಕ್ ಬಿದ್ದರೆ ಸಾಕು. ಅದರಲ್ಲಿ 16 ಅಂಕ ಆಂತರಿಕ ಮಾರ್ಕ್ ಕೊಡ್ತಾರಂತೆ. ಇದರಿಂದ ಶಿಕ್ಷಣ ಗುಣಮಟ್ಟ ಹಾಳಾಗುತ್ತದೆ ಇದನ್ನು ತಡೆಗಟ್ಟಿ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಉತ್ತರ ಕರ್ನಾಕದಲ್ಲಿ ಶಿಕ್ಷಣ ಕ್ಷೆತ್ರದಲ್ಲಿ ಆಗುರುವ ಅನ್ಯಾಯ ಸರಿಪಡಿಸಬೇಕು ಎಂದು ಹೇಳಿದರು.
ಇನ್ನು ಗದಗ ಯಲವಿಗೆ ರೈಲ್ವೆ ಯೋಜನೆ ಆರಂಭಕ್ಕೆ ಪತ್ರ ಬರೆದಿದ್ದೇನೆ. ಮುಂದಿನ ಬಜೆಟ್ ನಲ್ಲಿ ಯೋಜನೆ ಮಂಜೂರು ಮಾಡಲಿದ್ದಾರೆ. ಆಸ್ಪತ್ರೆ ಮಾಡುವ ಎಲ್ಲ ಪ್ರಯತ್ನ ಮಾಡುತ್ತೇನೆ. ಎಂದರು
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ , ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಮುಖಂಡರಾದ ಬಸವರಾಜ ಹಾವೇರಿಮಠ, ಶಿವಬಸಪ್ಪ ಕುಳೇನೂರ, ಅಭಿಷೇಕ ಗುಡಗೂರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa