ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗುವದಿಲ್ಲ; ಮಾಲತಿ ಇನಾಮತಿ
ಅಂತಾರಾಷ್ಟ್ರೀಯ
ಫೋಟೋ


ಗದಗ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿದ್ಯಾರ್ಥಿಗಳು ಈಗಿನಿಂದಲೇ ಕನಸುಗಳನ್ನು ಕಂಡು ಸಾಧನೆಗೆ ಶ್ರಮ ಪಡಬೇಕು. ಸಾಧಿಸುವವರಿಗೆ ಆಸಾದ್ಯವಾದದು ಯಾವುದು ಇಲ್ಲ, ಸಾಧಕರಿಗೆ ನಿರಂತರ ಶ್ರಮವೇ ಸಾಧನವಾಗುತ್ತದೆ ಎಂದು ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ 1ನೇ ಸೌತ್ ಏಷ್ಯಾ ಪ್ಯಾರಾ ಸಿಟಿಂಗ್ ಥ್ರೋಬಾಲ್ ಚಾಂಪಿಯನ್ ಶಿಪ್‍ನಲ್ಲಿ ಭಾರತೀಯ ತಂಡದ ನಾಯಕಿಯಾಗಿ ವಿಜಯ ಸಾಧಿಸಿದ ಮಾಲತಿ ಇನಾಮತಿ ಅವರು ಹೇಳಿದರು.

ಗದಗ ನಗರದ ಗಂಗಾಪೂರಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗುವದಿಲ್ಲ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು. ನಾವುಗಳು ಕೂಡ ನಿರಂತರ ಶ್ರಮದಿಂದ ಶ್ರೀಲಂಕಾದಲ್ಲಿ ಭಾರತೀಯ ಕೀರ್ತಿ ಪತಾಕೆಯನ್ನು ಹಾರಿಸಿದ್ದೆವೆ. ಮಂದಿನ ನಮ್ಮ ಗುರಿ ಅಂತಾರಾಷ್ಟ್ರೀಯ ಓಲಂಪಿಕ್‍ನಲ್ಲಿ ಪಾಲ್ಗೊಳ್ಳುವುದಾಗಿದೆ ಈ ನಿಟ್ಟಿನಲ್ಲಿ ನಮ್ಮ ಶ್ರಮ ಮುಂದುವರೆದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ನಡೆದ 1ನೇ ಸೌತ್ ಏಷ್ಯಾ ಪ್ಯಾರಾ ಸಿಟಿಂಗ್ ಥ್ರೋಬಾಲ್ ಚಾಂಪಿಯನ್ ಶಿಪ್‍ನಲ್ಲಿ ಭಾರತೀಯ ತಂಡದ ನಾಯಕಿಯಾಗಿ ವಿಜಯ ಸಾಧಿಸಿದ ಮಾಲತಿ ಇನಾಮತಿ ಹಾಗೂ ಪುರುಷರ ತಂಡದಲ್ಲಿ ಬೆಳ್ಳಿ ಪದಕ ಪಡೆದ ಮಹಾಂತೇಶ ಬೇವೂರು ಮತ್ತು ಆನಂದ ಬೇಂದ್ರೆ ಅವರನ್ನು ಶಿಕ್ಷಣ ಸಮಿತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಣ ಸಮಿತಿಯ ನಿರ್ದೇಶಕ ಮೋಹನ ಇಮರಾಪೂರ, ಸಲಹಾ ಸಮಿತಿಯ ಸದಸ್ಯರಾದ ಮುತ್ತು ಜಡಿ, ಲೋಕೇಶ ಮಲ್ಲಿಗವಾಡ, ಜೆಡಿಎಸ್ ಯುವ ಮುಖಂಡ ಪ್ರಭುರಾಜಗೌಡ ಪಾಟೀಲ, ಮುಖ್ಯೋಪಾದ್ಯಾಯನಿರಾದ ಶ್ರೀಮತಿ ಎಚ್.ಎಂ. ನದಾಫ್, ಸಹಶಿಕ್ಷಕಿಯರಾದ ಮಂಜುಳಾ ಹಿಡ್ಕಿಮಠ, ರೇಖಾ ಅಂಗಡಿ, ಸುಧಾ ತಿರಕಣ್ಣವರ, ಶೋಭಾ ಸಂಬರಗಿಮಠ, ಮಂಜುಳಾ ದಾಸರ, ಅಂಜಲಿ ಕಲಾಲ ಸಿಬ್ಬಂದಿಗಳಾದ ಲಕ್ಷ್ಮೀ ಕಮಡೊಳ್ಳಿ, ಸೈನಾಜಬಾನು ರೋಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ನಂತರ ವಾರ್ಷಿಕ ಕ್ರೀಡಾಕೂಟ ಆರಂಭವಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande