
ಕೋಲಾರ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪೋಲಿಯೋ ರೋಗವು ಮಕ್ಕಳಲ್ಲಿ ಉಂಟುಮಾಡುವ ಶಾಶ್ವತ ಅಂಗವೈಕಲ್ಯ ಅಥವಾ ಪಾರ್ಶ್ವವಾಯುವನ್ನು, ಈ ಲಸಿಕೆ ತಡೆಯುತ್ತದೆ ಹಾಗೂ ಪೋಲಿಯೋ ಹನಿಗಳು ಮಕ್ಕಳಿಗೆ ಅತ್ಯಂತ ಸುರಕ್ಷಿತ ವಾಗಿದ್ದು, ಸರ್ಕಾರವು ಇದನ್ನು ಉಚಿತವಾಗಿ ಒದಗಿಸುತ್ತದೆ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ ಎಂದು ಹರಟಿ ಗ್ರಾಮ ಪಂಚಾಯಿತಿ ಪಿಡಿಓ ನಗರಾಜ್ ಹೇಳಿದರು.
ಕೋಲಾರ ತಾಲ್ಲೂಕಿನ ಚಾಮರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಪೋಲಿಯೋ ಕಾರ್ಯಕ್ರಮದಲ್ಲಿ ಐದು ವರ್ದೊಳಗಿನ ಮಗುವಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿ ಮಾತನಾಡಿದರು.
2014 ರಲ್ಲಿ ಭಾರತವು ಪೋಲಿಯೋ ಮುಕ್ತ ದೇಶವೆಂದು ಘೋಷಿಸಲ್ಪಟ್ಟಿದ್ದರೂ ನೆರೆಯ ದೇಶಗಳಿಂದ ವೈರಸ್ ಮತ್ತೆ ಬರದಂತೆ ತಡೆಯಲು ಈ ಲಸಿಕೆ ನೆರವಾಗುತ್ತದೆ ಈ ಲಸಿಕೆಯನ್ನು ನವಜಾತ ಶಿಶುಗಳಿಂದ ಹಿಡಿದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ನೀಡಬಹುದು, ಇದು ಅವರ ಭವಿಷ್ಯದ ಆರೋಗ್ಯಕ್ಕೆ ಭದ್ರತೆ ನೀಡುತ್ತದೆ ಎಂದರು.
ಹರಟಿ ಗ್ರಾಮ ಪಂಚಾಯಿತಿ ಉಪಾಧಕ್ಷೆ ರತ್ನಮ್ಮ ಮಾತನಾಡಿ. ಪೋಷಕರು ಪಲ್ಸ್ ಪೋಲಿಯೋ ಲಸಿಕೆಯ ಬಗ್ಗೆ ಯಾವುದೇ ಆತಂಕ ಅಥವಾ ಭಯ ಪಡುವ ಅಗತ್ಯವಿಲ್ಲ. ಪೋಲಿಯೋ ಹನಿಗಳು ಮಕ್ಕಳಿಗೆ ಅತ್ಯಂತ ಸುರಕ್ಷಿತವಾಗಿದ್ದು, ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ತಜ್ಞರು ಪ್ರಮಾಣೀಕರಿಸಿದ್ದಾರೆ. ನಿಮ್ಮ ಮಗುವಿಗೆ ಈಗಾಗಲೇ ನಿಯಮಿತ ಚುಚ್ಚುಮದ್ದಿನ ಮೂಲಕ ಅಥವಾ ಹಿಂದಿನ ಅಭಿಯಾನಗಳಲ್ಲಿ ಲಸಿಕೆ ಹಾಕಿದ್ದರು ಸಹ, ಪಲ್ಸ್ ಪೋಲಿಯೋ ದಿನದಂದು ಮತ್ತೊಮ್ಮೆ ಹನಿಗಳನ್ನು ಹಾಕಿಸುವುದು ಸುರಕ್ಷಿತ. ಇದರಿಂದ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆಯೇ ಹೊರತು ಯಾವುದೇ ಅಡ್ಡಪರಿಣಾಮವಾಗುವುದಿಲ್ಲ ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಚಾಮರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಒಳಪಡುವ ಗ್ರಾಮಗಳ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲೀಯೋ ಹನಿ ಹಾಕಲಾಯಿತು.
ಕಾರ್ಯಕ್ರಮದಲ್ಲಿ ಚಾಮರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ||ಸೌಮ್ಯ, ಆರೋಗ್ಯ ನಿರೀಲ್ಷಕರಾದ ರಮಾದೇವಿ ಸ್ಟಾಪ್ ನರ್ಸ್ಗಳಾದ ಸುರೇಶ್, ಕವಿತಾ, ಮತ್ತು ಅಂಗನವಾಡಿ ಕಾರ್ಯಕರ್ತೆ ಕೆಎಂ ಸೊಣ್ಣಮ್ಮ ಮುಂತಾದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ