

ಬಳ್ಳಾರಿ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಚೇಂಬರ್ ಉಚಿತ ಆಸ್ಪತ್ರೆಯ `ನಮ್ಮ ಕ್ಲಿನಿಕ್'ನಲ್ಲಿ ಪೆÇೀಲಿಯೋ ಲಸಿಕೆ ಹನಿಯನ್ನು ಮಕ್ಕಳಿಗೆ ಹಾಕುವ ಮೂಲಕ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರ್ ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು, ಪೆÇೀಲಿಯೋ ಹನಿಗಳನ್ನು ಮಕ್ಕಳಿಗೆ ಹಾಕುವ ಮೂಲಕ ಭಾರತವು ಪೋಲಿಯೋ ಮುಕ್ತಗೊಳ್ಳಬೇಕು ಎಂದರು.
ಬಿಡಿಸಿಸಿಐನ ಚೇಂಬರ್ ಉಚಿತ ಆಸ್ಪತ್ರೆ ಸಮಿತಿಯ ಚೇರ್ಮನ್ ಬಿ. ಸುರೇಂದ್ರ ಭಾಪ್ನಾ, `ನಮ್ಮ ಕ್ಲಿನಿಕ್'ನ ವೈದ್ಯಾಧಿಕಾರಿಗಳಾದ, ಡಾ ಅಭಿಷೇಕ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್