
ವಿಜಯಪುರ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಇದೀಗ ಖದೀಮರ ದರ್ಬಾರ್ ಜೋರಾಗಿದೆ. ತಡರಾತ್ರಿ ಆದ್ರೆ ಸಾಕು ಮನೆಗಳು, ಅಂಗಡಿ ಮುಂಗಟ್ಟುಗಳೇ ಇವರ ಟಾರ್ಗೆಟ್ ಆಗಿವೆ. ವಿಜಯಪುರ ಜಿಲ್ಲೆಯ ಚಡಚಣ, ಗೊಳಸಂಗಿ, ಬಸವನಬಾಗೇವಾಡಿ ಸೇರಿದಂತೆ ವಿಜಯಪುರ ನಗರದಲ್ಲಿ ಕಳ್ಳತನ ಶುರುವಾಗಿದೆ. ಮುಖಕ್ಕೆ ಮಾಸ್ಕ್, ಕಣ್ಣಿಗೆ ಗಾಗಲ್, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕಳ್ಳರು ಕಳ್ಳತನಕ್ಕೆ ಇಳಿದಿದ್ದಾರೆ. ಜಿಲ್ಲೆಯ ವಿವಿಧಡೆ ನಡೆದ ಕಳ್ಳರ ಕಳ್ಳಾಟ ಸಿಸಿ ಟಿವಿಗಳಲ್ಲಿ ಸೆರೆ ಆಗಿದ್ದು, ಸಾರ್ವಜನಿಕರು ಕಳ್ಳರನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಪೊಲೀಸರು ನೈಟ್ ಬೀಟ್ ಹೆಚ್ಚಿಸಿದರೆ ಸೂಕ್ತವೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande