ಕಿಷ್ಕಿಂದ ವಿಶ್ವವಿದ್ಯಾಲಯ : ಡಿಸೆಂಬರ್ 24 ರಂದು ಪ್ರಥಮ ಘಟಿಕೋತ್ಸವ
ಬಳ್ಳಾರಿ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಟಿಇಎಚ್‍ಆರ್‍ಡಿ ಟ್ರಸ್ಟನ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವು ಡಿಸೆಂಬರ್ 24ರ ಬುಧವಾರ ಬಳ್ಳಾರಿ - ಸಿರುಗುಪ್ಪ ರಸ್ತೆಯ ಸಿಂಧಗೇರಿ ಬಳಿಯ `ಮೌಂಟ್ ವ್ಯೂ'' ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ. ಟಿ.ಎನ್
ಕಿಷ್ಕಿಂದ ವಿಶ್ವವಿದ್ಯಾಲಯ : ಡಿಸೆಂಬರ್ 24 ರಂದು ಪ್ರಥಮ ಘಟಿಕೋತ್ಸವ


ಬಳ್ಳಾರಿ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಟಿಇಎಚ್‍ಆರ್‍ಡಿ ಟ್ರಸ್ಟನ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವು ಡಿಸೆಂಬರ್ 24ರ ಬುಧವಾರ ಬಳ್ಳಾರಿ - ಸಿರುಗುಪ್ಪ ರಸ್ತೆಯ ಸಿಂಧಗೇರಿ ಬಳಿಯ `ಮೌಂಟ್ ವ್ಯೂ' ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ. ಟಿ.ಎನ್. ನಾಗಭೂಷಣ ಅವರು ತಿಳಿಸಿದ್ದಾರೆ.

ಸುದ್ದಿಗಾರರಿಗೆ ಭಾನುವಾರ ಈ ಮಾಹಿತಿ ನೀಡಿದ ಅವರು, ಬುಧವಾರ ಮಧ್ಯಾಹ್ನ 12.30ಕ್ಕೆ ಘಟಿಕೋತ್ಸವ ಪ್ರಾರಂಭವಾಗಲಿದೆ. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ವಿಸಿಟರ್‍ಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ಘಟಿಕೋತ್ವಕ್ಕೆ ಚಾಲನೆ ನೀಡಲಿದ್ದಾರೆ.

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ಪೆÇ್ರ-ವಿಸಿಟರ್‍ಗಳಾದ ಡಾ. ಎಂ.ಸಿ. ಸುಧಾಕರ್ ವಿಶೇಷ ಅತಿಥಿಗಳಾಗಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾಗಿರುವ ಜಗದೀಶ್ ಶಿವಪ್ಪ ಶೆಟ್ಟರ್, ಸಿರುಗುಪ್ಪ ಶಾಸಕರಾದ ಬಿ.ಎಂ. ನಾಗರಾಜ ಹಾಗೂ ಸಿಂಧನೂರು ಶಾಸಕರಾದ ಬಾದರ್ಲಿ ಹಂಪನಗೌಡ ಅವರು ಗೌರವ ಅತಿಥಿಗಳಾಗಿದ್ದಾರೆ ಎಂದರು.

ವಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಎಂಬಿಎ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಶಬಾನಾ (9.33 ಸಿಜಿಪಿಎ) ಅವರಿಗೆ ಬಂಗಾರದ ಪದಕ ಮತ್ತು ಸೌಗಂಧಿಕಾ ಲಕ್ಷ್ಮಿ (9.27 ಸಿಜಿಪಿಎ) ಅವರಿಗೆ ಬೆಳ್ಳಿ ಪದಕವನ್ನು. ಎಂಸಿಎ ವಿಭಾಗದಲ್ಲಿ ಸಜ್ಜ ಜಗತಿ ಅವರಿಗೆ (9.82 ಸಿಜಿಪಿಎ) ಬಂಗಾರದ ಪದಕ ಮತ್ತು ಸಂಧ್ಯಾ ಜಿ (9.66 ಸಿಜಿಪಿಎ) ಅವರಿಗೆ ಬೆಳ್ಳಿ ಪದಕವನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಗುತ್ತದೆ. ಅಲ್ಲದೇ, ಒಟ್ಟು 80 ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಪದವಿ ಪ್ರಮಾಣಪತ್ರವನ್ನು ವಿತರಣೆ ಮಾಡಲಾಗುತ್ತದೆ ಎಂದರು.

ಸಹ ಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್ ಅವರು, ಕಿಷ್ಕಿಂದ ವಿಶ್ವವಿದ್ಯಾಲಯವು `ವಿಷನ್ ಫೌಂಡೇಶನ್ ಆಫ್ ಕರ್ನಾಟಕ'ದ ಜೊತೆ ಒಪ್ಪಂದ ಮಾಡಿಕೊಂಡು ಬಳ್ಳಾರಿ ಜಿಲ್ಲೆಯ ಕೃಷಿಯಲ್ಲಿ ಆಧುನೀಕತೆ ಮತ್ತು ವೈಜ್ಞಾನಿಕತೆಯನ್ನು ಜಾರಿ ಮಾಡಲು ಪ್ರಯತ್ನಿಸಲಿದೆ. ಅಮೆರಿಕಾದ ಎರೆಡು ಸಂಸ್ಥೆಗಳ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡು ಅಧ್ಯಯನ ಮತ್ತು ಸಂಶೋಧನೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ ಎಂದರು.

ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಯಶವಂತ್ ಭೂಪಾಲ್, ಕುಲಸಚಿವರಾದ ಡಾ. ಯು. ಈರಣ್ಣ, ಕುಲಸಚಿವ (ಮೌಲ್ಯಮಾಪನ) ಡಾ. ರಾಜುಜಾಡರ್ ಟಿ.ಇ.ಹೆಚ್.ಆರ್.ಡಿ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ಎಸ್.ಜೆ.ವಿ. ಮಹಿಪಾಲ್, ಡಾ. ವಿ.ಜೆ. ಭರತ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande