ರಾಂಡ್‌ಸ್ಟಾಡ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗ
ಕೊಪ್ಪಳ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಂಡ್‌ಸ್ಟಾಡ್ ಇಂಡಿಯಾ ಎಂಬ ಪ್ರಮುಖ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡಲು ಆಸಕ್ತಿವಿರುವ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶವಿದ್ದು, ಸದುಪಯೋಗ ಪಡೆಯಲು ನೋಂದಾಯಿಸಲು ಮತ್ತು ಅರ್ಜಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಕೌಶಲ್ಯ ಮಷಿನ
ರಾಂಡ್‌ಸ್ಟಾಡ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗ


ಕೊಪ್ಪಳ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಂಡ್‌ಸ್ಟಾಡ್ ಇಂಡಿಯಾ ಎಂಬ ಪ್ರಮುಖ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡಲು ಆಸಕ್ತಿವಿರುವ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶವಿದ್ದು, ಸದುಪಯೋಗ ಪಡೆಯಲು ನೋಂದಾಯಿಸಲು ಮತ್ತು ಅರ್ಜಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಕೌಶಲ್ಯ ಮಷಿನ್ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ರವಿಶಂಕರ್ ಅವರು ತಿಳಿಸಿದ್ದಾರೆ.

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ವಿಶಿಷ್ಟ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಸಂಸ್ಥೆಯಾದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC), ಭಾರತದಾದ್ಯಂತ ದೊಡ್ಡ ಪ್ರಮಾಣದ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು. ಜಾಬ್ ಎಕ್ಸ್ (NSDC Jobx) ಎಂಬ ಡಿಜಿಟಲ್ ಉದ್ಯೋಗ ವಿನಿಮಯ ವೇದಿಕೆಯನ್ನು ಪರಿಚಯಿಸಿದ್ದು. ಇದು ಅಭ್ಯರ್ಥಿಗಳನ್ನು ಉದ್ಯೋಗ ಅವಕಾಶಗಳೊಂದಿಗೆ ಸಂಪರ್ಕಿಸಲು ವಿನ್ಯಾಸಗೊಳಿಸಲಾಗಿದೆ.

ರಾಂಡ್ ಸ್ಟಾಡ್ ಇಂಡಿಯಾ ಎಂಬ ಪ್ರಮುಖ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡಲು ಆಸಕ್ತಿವಿರುವ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳನ್ನು ಗುರುತಿಸಲಾಗಿದ್ದು. ಈ ಉದ್ಯೋಗದ ಅವಕಾಶವನ್ನು ಸದುಪಯೋಗ ಪಡೆಯಬಹುದಾಗಿದೆ.

ಉದ್ಯೋಗ ವಿವರ: ಅಸೆಂಬ್ಲಿ ಲೈನ್ ಆಪರೇಟರ್ (ಮಹಿಳೆಯರಿಗೆ ಮಾತ್ರ) ಸ್ಥಳ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಗ್ರಾಮ, ವೇತನ 14,285 ರೂ. ಗಳನ್ನು ಕೈಗೆ ನೀಡಲಾಗುವುದು. ಪಿ.ಎಫ್, ಇಎಸ್‌ಐ, ಬೋನಸ್, ಹಾಜರಾತಿ ಬೋನಸ್. ತ್ರೈಮಾಸಿಕ ರಜೆ ನಗದು, ಸಬ್ಸಿಡಿ ದರದಲ್ಲಿ, ಆಹಾರ, ಕ್ಯಾಂಟೀನ್, ಹಾಸ್ಟೆಲ್ ಮತ್ತು ಮಹಿಳೆಯರಿಗೆ ಭದ್ರತೆ ಮತ್ತು ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸುವ ವಾಹನಗಳವ್ಯವಸ್ಥೆ ಇರುತ್ತದೆ. ಜೊತೆಗೆ ಪ್ರಯಾಣ ಸೌಲಭ್ಯಗಳನ್ನು 15 ತಿಂಗಳ ಒಪ್ಪಂದದ ಅವಧಿ ಹೆಚ್ಚುವರಿಯಾಗಿ ಒದಗಿಸುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಅಥವಾ ಯಾವುದೇ ಪದವೀಧರ (ಬಿ.ಕಾಂ, ಬಿಬಿಎ, ಬಿಬಿಎಂ, ಬಿಎ, ಬಿಎಸ್ಸಿ, ಬಿಸಿಎ), ಐಟಿಐ, ಡಿಪ್ಲೊಮಾ ವಿದ್ಯಾಭ್ಯಾಸ ಹೊಂದಿದ್ದು, 18 ರಿಂದ 30 ವರ್ಷಗಳೊಳಗೆ ಇರಬೇಕು. NSDC Jobx ವೇದಿಯ ಮೂಲಕ ಅಭ್ಯರ್ಥಿ ನೋಂದಣಿ ಮತ್ತು ಅರ್ಜಿಗಳನ್ನು ಸುಗಮಗೊಳಿಸುವುದು. ಸಂಬಂಧಿಸಿದಂತೆ ಅಭ್ಯರ್ಥಿ ನೋಂದಣಿ ಮಾಡಲು https://www.nsdcjobx.com/jobseeker/QuickReg ಲಿಂಕ್ ಮತ್ತು https://www.nsdcjobx.com/homejob view?id=66041 ಲಿಂಕ್ ನಲ್ಲಿ ಉದ್ಯೋಗ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿ ಸಮನ್ವಯಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ಕೆ.ಜಿ.ಐ.ಡಿ ಕಚೇರಿ ಎದುರುಗಡೆ ಇರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande