
ಬಳ್ಳಾರಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಡಿಸೆಂಬರ್ 24 ರ ಬುಧವಾರ ಬೆಳಿಗ್ಗೆ 09 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮಾದೇವಿ ಅವರು ತಿಳಿಸಿದ್ದಾರೆ.
ಪ್ರಶಸ್ತಿಗೆ ಜಿಲ್ಲೆಯ 04 ತಾಲ್ಲೂಕುಗಳಿಂದ ಸಲ್ಲಿಕೆಯಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಕಿರಿಯ, ಹಿರಿಯ, ಪ್ರೌಢ ವಿಭಾಗಗಳಿಂದ ಪ್ರತಿ ತಾಲ್ಲೂಕಿಗೆ 03 ರಂತೆ ಒಟ್ಟು 12 ಜನ ಶಿಕ್ಷಕರನ್ನು ಜಿಲ್ಲಾ ಮಟ್ಟದ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದರು.
ಪ್ರಾಥಮಿಕ ವಿಭಾಗದ ಪ್ರಶಸ್ತಿ ಪುರಸ್ಕøತರು
ಬಳ್ಳಾರಿ ಪೂರ್ವ ವಲಯದ ಹನುಮಾನ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಹಾಂತೇಶ, ಬಳ್ಳಾರಿಯ ಟಿ.ಜೆ. ಆಯಿಲ್‍ಮಿಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಉರ್ದು)ಯ ಸಹ ಶಿಕ್ಷಕರಾದ ನಸೀಮಾ ಆರ್.ಕೆ. ಕುರುಗೋಡು ತಾಲ್ಲೂಕಿನ ಯರಂಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಛಾಯದೇವಿ ಬಿ.ಎಂ., ಹವಂಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜಯಲಕ್ಷ್ಮೀ ಗಂಗಣ್ಣ. ಸಂಡೂರು ತಾಲ್ಲೂಕಿನ 6ನೇ ವಾರ್ಡ್‍ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಜಿ.ಆರ್. ರೇಣುಕಮ್ಮ, ಸಂಡೂರು ತಾಲ್ಲೂಕಿನ ಆಶ್ರಯ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಜಣ್ಣ. ಸಿರುಗುಪ್ಪ ತಾಲ್ಲೂಕಿನ ಬಿ.ಬಿ. ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಹೇಶ್ ವೈ., ತೆಕ್ಕಲಕೋಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಂತಮ್ಮ ಎಸ್.
ಪ್ರೌಢಶಾಲಾ ವಿಭಾಗದ ಪ್ರಶಸ್ತಿ ಪುರಸ್ಕøತರು
ಬಳ್ಳಾರಿ ಪೂರ್ವ ವಲಯದ ಕೆ.ಪಿ.ಎಸ್ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ (ವಿಜ್ಞಾನ) ಶಿವಕುಮಾರ ಎ., ಕುರುಗೋಡು ತಾಲ್ಲೂಕಿನ ಯರಂಗಳಿಯ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಹುಲೆಪ್ಪ ಹೆಚ್., ಸಂಡೂರು ತಾಲ್ಲೂಕಿನ ಸಂಡೂರು ಛತ್ರಪತಿ ಶಿವಾಜಿ ವಿದ್ಯಾಮಂದಿರ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಮಹಮ್ಮದ್ ಜಾವೀದ್, ಸಿರುಗುಪ್ಪ ತಾಲ್ಲೂಕಿನ ಸಿರುಗುಪ್ಪ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಜೀವೇಶ್ ಕುಲಕರ್ಣಿ ಆಯ್ಕೆಯಾಗಿದ್ದಾರೆ.
ಡಿಸೆಂಬನರ್ 24 ರ ಬುಧವಾರ ಬೆಳಿಗ್ಗೆ 09 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್