
ನವದೆಹಲಿ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೇಶದಾದ್ಯಂತ ಬಂದರುಗಳು ಮತ್ತು ಹಡಗುಗಳ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಬಂದರು ಭದ್ರತಾ ಬ್ಯೂರೋ ರಚನೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಒತ್ತು ನೀಡಿದರು.
ಶುಕ್ರವಾರ ನಡೆದ ಪರಿಶೀಲನಾ ಸಭೆಯಲ್ಲಿ, ಬಂದರುಗಳ ಭದ್ರತೆಯನ್ನು ಅಪಾಯ ಆಧಾರಿತ ಹಾಗೂ ಹಂತ ಹಂತವಾಗಿ ಜಾರಿಗೊಳಿಸುವಂತೆ ಅವರು ನಿರ್ದೇಶಿಸಿದರು.
ಹೊಸ ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆ–2025 ಅಡಿಯಲ್ಲಿ ಬಿಒಪಿಎಸ್ ಅನ್ನು ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸುವ ಬಗ್ಗೆ ಚರ್ಚಿಸಲಾಯಿತು.
ಈ ಬ್ಯೂರೋ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಮಾದರಿಯಲ್ಲಿ ಇದನ್ನು ರೂಪಿಸಲಾಗುತ್ತಿದ್ದು, ಐಪಿಎಸ್ ಹುದ್ದೆಯ ಮಹಾನಿರ್ದೇಶಕರು ನೇತೃತ್ವ ವಹಿಸಲಿದ್ದಾರೆ.
ಬಂದರು ಭದ್ರತೆಯಲ್ಲಿ ಸೈಬರ್ ಸುರಕ್ಷತೆಗೆ ವಿಶೇಷ ಆದ್ಯತೆ, ಭದ್ರತಾ ಮಾಹಿತಿ ಸಂಗ್ರಹ–ವಿಶ್ಲೇಷಣೆ ಹಾಗೂ ಹಂಚಿಕೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಂದರು ಸೌಲಭ್ಯಗಳ ಭದ್ರತೆಗೆ ಸಿಐಎಸ್‌ಎಫ್ ಅನ್ನು ನಿಗದಿತ ಸಂಸ್ಥೆಯಾಗಿ ನೇಮಕ ಮಾಡಲಾಗಿದ್ದು, ಭದ್ರತಾ ಲೆಕ್ಕಪರಿಶೋಧನೆ, ಯೋಜನೆ ಹಾಗೂ ಖಾಸಗಿ ಭದ್ರತಾ ಸಂಸ್ಥೆಗಳ ತರಬೇತಿ–ನಿಯಂತ್ರಣ ಜವಾಬ್ದಾರಿ ವಹಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa