ಸಂಸತ್ತಿನ ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ವೇಳೆ
Rs


ನವದೆಹಲಿ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಚಳಿಗಾಲದ ಅಧಿವೇಶನದ ಅಂತ್ಯವಾಗಿ ಸಂಸತ್ತಿನ ಲೋಕ ಸಭೆ ಮತ್ತು ರಾಜ್ಯ ಸಭೆಗಳನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಈ ಅಧಿವೇಶನದಲ್ಲಿ ರಾಜ್ಯ ಸಭೆಯ ಉತ್ಪಾದಕತೆ ಶೇ.121 ಮತ್ತು ಲೋಕ ಸಭೆಯ ಉತ್ಪಾದಕತೆ ಶೇ.111 ದಾಖಲಾಗಿದೆ.

ರಾಜ್ಯ ಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರ ಮಾತಿನಂತೆ, 269ನೇ ಅಧಿವೇಶನದಲ್ಲಿ ಎಂಟು ಮಸೂದೆಗಳು ಅಂಗೀಕೃತವಾಗಿದ್ದು, ಶೂನ್ಯ ವೇಳೆ ಮತ್ತು ವಿಶೇಷ ಉಲ್ಲೇಖಗಳಲ್ಲಿ ಗಮನಾರ್ಹ ಚಟುವಟಿಕೆ ಕಂಡು ಬಂದಿದೆ. ಸದನವು ಸುಮಾರು 92 ಗಂಟೆಗಳ ಕಾಲ ಕಾರ್ಯನಿರ್ವಹಿಸಿತು.

ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ, 18ನೇ ಲೋಕ ಸಭೆಯ ಆರನೇ ಅಧಿವೇಶನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ತಿಳಿಸಿದ್ದು, ಮುಂದಿನ ಅಧಿವೇಶನವನ್ನು ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳ ಅನುಮತಿಯೊಂದಿಗೆ ಕರೆಯಲಾಗುವುದು ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande