ಶಾಲಾ ವಾಹನಗಳ ತಪಾಸಣೆ
ಗದಗ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಸಿದ್ದಪ್ಪ ಎಚ್ ಕಿಲ್ಲೇರ ಅವರ ನಿರ್ದೇಶನದನ್ವಯ ವಿಶೇಷ ತಂಡವನ್ನು ರಚಿಸಿ ಗದಗ ಜಿಲ್ಲೆಯಲ್ಲಿರುವ ಶಾಲಾ ವಾಹನಗಳನ್ನು ಪರಿಶೀಲನೆ ನಡೆಸಲಾಯಿತು. ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ ಹಾಗೂ ಹಿರಿಯ ಮೋಟರ ವಾಹ
ಫೋಟೋ


ಗದಗ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಸಿದ್ದಪ್ಪ ಎಚ್ ಕಿಲ್ಲೇರ ಅವರ ನಿರ್ದೇಶನದನ್ವಯ ವಿಶೇಷ ತಂಡವನ್ನು ರಚಿಸಿ ಗದಗ ಜಿಲ್ಲೆಯಲ್ಲಿರುವ ಶಾಲಾ ವಾಹನಗಳನ್ನು ಪರಿಶೀಲನೆ ನಡೆಸಲಾಯಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ ಹಾಗೂ ಹಿರಿಯ ಮೋಟರ ವಾಹನ ನಿರೀಕ್ಷಕರುಗಳಾದ ಅರುಣ ಕಟ್ಟಿಮನಿ, ಬಾಲಚಂದ್ರ ತೊದಲಬಾಗಿ ಅವರ ನೇತೃತ್ವದಲ್ಲಿ ವಿಶೇಷ ತಪಾಸಣೆ ನಡೆಸಿ, 31 ವಾಹನಗಳನ್ನು ತಪಾಸಣೆ ಮಾಡಿ 7 ಶಾಲಾ ವಾಹನಗಳ ರಹದಾರಿ ಉಲ್ಲಂಘನೆ ಮಾಡಿದ ಶಾಲಾ ವಾಹನಗಳ ಪ್ರಕರಣ ದಾಖಲಿಸಲಾಗಿದೆ.

ಇತರೆ ಶಾಲಾ ವಾಹನಗಳಿಗೆ ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ನವೀಕರಿಸಿಕೊಳ್ಳಲು ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸಲು ವಾಹನ ಚಾಲಕರಿಗೆ ಹಾಗೂ ಸಹ ಚಾಲಕರಿಗೆ ತಿಳುವಳಿಕೆ ನೀಡಲಾಯಿತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande