ಎಪಿಡಿ ಸಂಸ್ಥೆ ವತಿಯಿಂದ ಕೋಲಾರದಲ್ಲಿ ವಿಕಲಚೇತನರ ತಪಾಸಣಾ ಶಿಬಿರ
ಎಪಿಡಿ ಸಂಸ್ಥೆ ವತಿಯಿಂದ ಕೋಲಾರದಲ್ಲಿ ವಿಕಲಚೇತನರ ತಪಾಸಣಾ ಶಿಬಿರ
ಕೋಲಾರದಲ್ಲಿ ಬೆಂಗಳೂರಿ ದಿ ಆಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಲಿಟಿ ಸಂಸ್ಥೆಯ ವತಿಯಿಂದ ವಿಕಲಚೇತನರ ತಪಸಣಾ ಶಬಿರ ನಡೆಯಿತು.


ಕೋಲಾರ, ಡಿಸೆಂಬರ್ ೧೯ (ಹಿ.ಸ) :

ಆ್ಯಂಕರ್ : ವಿಕಲಚೇತನರು ಮತ್ತು ಹಿರಿಯ ನಾಗರೀಕರು ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತ ಜೀವನ ನಡೆಸಲು ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ. ಅಂತರಾಷ್ಟಿçÃಯ ವಿಕಲಚೇತನರ ದಿನಾಚರಣೆ ಮತ್ತು ಹಿರಿಯ ನಾಗರೀಕರಿಗೆ ಹಾಗೂ ಶ್ರವಣ ವಿಕಲಚೇತನರಿಗೆ ತಪಾಸಣಾ ಶಿಬಿರಗಳ ಮೂಲಕ ಅವರಿಗೆ ಅಗತ್ಯವಾದ ಆರೋಗ್ಯ ಸೇವೆ, ಸಲಹೆ ಹಾಗೂ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೋಲಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ನಾಗರತ್ನಮ್ಮ ಹೇಳಿದರು.

ಕೋಲಾರ ನಗರದಲ್ಲಿ ಎಪಿಡಿ ಸಂಸ್ಥೆ ವತಿಯಿಂದ ಅಂತರಾಷ್ಟಿçಯ ವಿಕಲಚೇತನರ ದಿನಾಚರಣೆ ಮತ್ತು ಹಿರಿಯ ನಾಗರೀಕರಿಗೆ ಹಾಗೂ ಶ್ರವಣ ವಿಕಲಚೇತನರಿಗೆ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಆರ್. ಮಂಜುಳ ಮಾತನಾಡಿ, ವಿಕಲಚೇತನರು ಹಾಗೂ ಹಿರಿಯ ನಾಗರೀಕರಿಗೆ ಸರ್ಕಾರದಿಂದ ಹಲವಾರು ಯೋಜನೆಗಳು ಮತ್ತು ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಈ ರೀತಿಯ ಶಿಬಿರಗಳು ಅವರ ಜೀವನಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಎ.ಪಿ.ಡಿ ಸಂಸ್ಥೆಯ ರಾಜ್ಯ ಸಂಯೋಜಕ ಮನುಕುಮಾರ್ ಮಾತನಾಡಿ, ಎಪಿಡಿ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರೀಕರಿಗಾಗಿ ಆರೋಗ್ಯ, ಶಿಕ್ಷಣ ಹಾಗೂ ಪುನರ್ವಸತಿ ಸಂಬ0ಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಕೋಲಾರದಲ್ಲಿ ೨೦೦ ಜನ ಶ್ರವಣ ದೋಷ ಉಳ್ಳವರಿಗೆ ತಪಾಸಣೆ ಮಾಡಿ ಉಪಕರಣವನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲೂ ಇಂತಹ ಸೇವಾಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೋಲಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್, ದಿ ಆಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಲಿಟಿ (ಎ.ಪಿ.ಡಿ) ಸಂಸ್ಥೆಯ ಸುಮತಿ, ಆಡಿಯಾಲಜಿಸ್ಟ್ ಜೋರಾ, ಸಿಬ್ಬಂದಿ ಸಂದ್ಯ, ಸೋನಿಯಾ, ಗೀತಾಂಜಲಿ, ಈನೆಲ ಈಜಲ ವೆಂಕಟಾಚಲಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ವೇಳೆ ಈನೆಲ ಈಜಲ ಕಲೆ ಮತ್ತು ಸಂಸ್ಕೃತಿ ಸಂಸ್ಥೆಯಿ0ದ ಜಾನಪದ ಗಾಯನದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಚಿತ್ರ : ಕೋಲಾರದಲ್ಲಿ ಬೆಂಗಳೂರಿ ದಿ ಆಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಲಿಟಿ ಸಂಸ್ಥೆಯ ವತಿಯಿಂದ ವಿಕಲಚೇತನರ ತಪಸಣಾ ಶಬಿರ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande