
ಕೋಲಾರ, ೧೮ ಡಿಸೆಂಬರ್ (ಹಿ.ಸ.) :
ಆಂಕರ್ : ಕೋಲಾರ ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿಗಳ ಕುಮ್ಮಕ್ಕಿನಿಂದ ಹಾಗೂ ವೈಫಲ್ಯದಿಂದ ಹಾಲೇ ಹದೀಸ್ ಗೆ ಸೇರಿರುವ ಮಾಜಿ ಮುತವಲ್ಲಿ ಸೈಯದ್ ರಸೂಲ್ ದರ್ವೇಶ್ ಎಂಬುವರು ಮಾಸ್ತಿಯಲ್ಲಿ ಅಶಾಂತಿ ಉಂಟು ಮಾಡುತ್ತಿದ್ದು ರಾಜ್ಯ ವಕ್ಫ್ ಮಂಡಳಿ ಹಾಗೂ ವಕ್ಫ್ ಸಚಿವರು ಕಾನೂನು ರೀತಿ ಕ್ರಮ ಕೈಗೊಂಡು ಅವರಿಂದ ಹಣ ವಸೂಲು ಮಾಡಬೇಕಲ್ಲದೆ, ತಾತ್ಕಾಲಿಕ ವಾಗಿ ಆಡಳಿತಾಧಿಕಾರಿ ನೇಮಿಸ ಬೇಕು ಹಾಗೂ ಸೂಕ್ತ ವ್ಯಕ್ತಿಯನ್ನು ಮುತುವಲ್ಲಿಯಾಗಿ ನೇಮಕ ಮಾಡಿ ವಕ್ಫ್ ಆಸ್ತಿ ಉಳಿಸಬೇಕು ಮತ್ತು ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಸ್ತಿ ಗ್ರಾಮದ ಏಳು ಮಸೀದಿಗಳ ಮುಖಂಡರುಗಳು ಹಾಗೂ ಮುತವಲ್ಲಿಗಳು ಮಾಸ್ತಿ ಗ್ರಾಮದ ಮಸೀದಿಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಸುನ್ನಿ ಮತ್ತು ಹಾಲೇ ಹದೀಸ್ ಪಂಗಡಗಳ ಮೂರು ಸಾವಿರ ಹಾಗೂ ಹಿಂದೂಗಳು ಮೂರು ಸಾವಿರ ಇದ್ದರೂ ಅಣ್ಣ ತಮ್ಮಂದಿರಂತೆ ಬಾಳ್ವೆ ನಡೆಸುತ್ತಿದ್ದು,ಯಾರಿಂದಲೂ ತೊಂದರೆ ಇಲ್ಲ ಆದರೆ ಸೈಯದ್ ರಸೂಲ್ ದರ್ವೇಶ್ ರವರ ವಂಶಸ್ಥರು ವಕ್ಫ್ ಬೋರ್ಡ್ ಗೆ ೧೧ ಎಕರೆ ಆಸ್ತಿ ದಾನ ಮಾಡಿದ್ದು,ಪ್ರಸ್ತುತ ಈ ಆಸ್ತಿಯಲ್ಲಿ ಗೋರಿಗಳು,ಈದ್ಗಾ ಮೈದಾನ ಇದೆ ಹಾಗೂ ಕಳೆದ ಐದು ವರ್ಷಗಳ ಹಿಂದೆ ವಕ್ಫ್ ಮಂಡಳಿಯಿಂದ ಸಾಲ ಪಡೆದು ಅಂಗಡಿಗಳನ್ನು ಕಟ್ಟಿಸಿ ಬಾಡಿಗೆ ತೆಗೆದು ಕೊಳ್ಳುತ್ತಿದ್ದಾರೆ ಹಾಗೂ ಮಾಟ ಮಂತ್ರ ಮಾಡುವುದಲ್ಲದೆ ಸಂವಿಧಾನ ವಿರುದ್ದ ಕೆಲಸ ಮಾಡುತ್ತಾ,ಆಸ್ತಿ ನಮ್ಮ ತಾತನವರದ್ದು,ಸ್ಮಶಾನ ನಮಗೆ ಸೇರಿದ್ದು ಒಳಗೆ ಯಾರೂ ಬರಬಾರದು,ಮಸೀದಿ ನಮ್ಮದ್ದು ಬೀಗ ಹಾಕುತ್ತೇನೆ ಎಂದು ಬೆದರಿಕೆ ಹಾಕಿವುದಲ್ಲದೆ ಪ್ರಶ್ನೆ ಮಾಡಿದ ಜನರನ್ನು ಹೊಡೆದು ಗಾಯಗೊಳಿಸಿರುತ್ತಾರೆ ಎಂದು ಆರೋಪಿಸಿದರು.
ಮುಸ್ಲಿಂ ಸಮುದಾಯದ ಹಾಲೇ ಹದೀಸ್ ಗೆ ಸೇರಿರುವ ಸೈಯದ್ ರಸೂಲ್ ದರ್ವೇಶ್ ರವರು ಹಾಲೇ ಹದೀಸ್ ರವರೇ ತೊಂದರೆ ನೀಡುತ್ತಿದ್ದಾರೆ ಎಂದು ಸುಳ್ಳು ದೂರುಗಳನ್ನು ಅನೇಕ ಬಾರಿ ನೀಡುವುದು, ಕೇಸ್ ಮಾಡುವುದು ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು, ಬಹಳಷ್ಟು ಕೇಸುಗಳು ಇನ್ನೂ ನಡೆಯುತ್ತಿವೆ,ಕೆಲವರು ಮಾತ್ರ ನಮ್ಮ ನಮ್ಮಲೇ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ವಕ್ಫ್ ಮಂಡಳಿಗೆ ಹಾಗೂ ಕೋಲಾರ ಜಿಲ್ಲಾ ವಕ್ಫ್ ಮಂಡಳಿಗೆ ಅನೇಕ ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಕೋಲಾರ ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷರಾದ ನಿಸಾರ್ ಅಹ್ಮದ್ ರವರು ಇದುವರೆಗೆ ಮಾಸ್ತಿಗೆ ಭೇಟಿ ನೀಡಿಲ್ಲ, ಅಧಿಕಾರಿಗಳು ಸಹ ಸಹಕಾರ ನೀಡುತ್ತಿಲ್ಲ ಎಂದು ದೂರಿದರು.
ಮಾಸ್ತಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಚೇತನ್ ಕುಮಾರ್ ಮಾತನಾಡಿ ಶಾಂತಿಯ ತೋಟದಂತಿರುವ ಮಾಸ್ತಿ ಗ್ರಾಮದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು ಹಾಗೂ ಹಿಂದೂಗಳು ಒಗ್ಗಟ್ಟಿನಿಂದ ಇದ್ದು, ಯಾವುದೇ ಭಿನ್ನಾಭಿಪ್ರಾಯ, ಜಗಳಗಳು ಇಲ್ಲ, ಹೊಂದಾಣಿಕೆಯಿಂದ ಅಣ್ಣ ತಮ್ಮಂದಿರಂತೆ ಜೀವನ ನನಡೆಸುತ್ತಿದ್ದು, ಮಾಜಿ ಮುತವಲ್ಲಿ ರಸೂಲ್ ಹಾಗೂ ಕೆಲವರಿಂದ ಗ್ರಾಮದಲ್ಲಿ ಅಹಿತಕರ ಘಟನೆ ನಡೆದಿರುವುದು ಸರಿಯಿಲ್ಲ ಅವರಿಗೆ ದೇವರು ಒಳ್ಳೆಯ ಬುದ್ದಿಕೊಡಲಿ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಹಾಗೂ ಏಳು ಮಸೀದಿಗಳ ಮುತವಲ್ಲಿಗಳಾದ ಸಬ್ದರ್ ಬೇಗ್,ಶಾಕತ್ ಉಲ್ಲಾ ಬೇಗ್,ಸಲೀಂ ಚಿಚ್ಚ, ಸುಹೇಲ್ ಬೇಗ್,ಅಕ್ರಂ ಪಾಷ,ಸಿರಾಜ್ ಬೇಗ್, ಶೇಖ್ ಇಮ್ರಾನ್, ನೀಮತ್ತುಲ್ಲಾ ಬೇಗ್, ಸೈಯದ್, ಸಾದೀಖ್ ಉಪಸ್ಥಿತರಿದ್ದರು.
ಚಿತ್ರ ; ಮಾಸ್ತಿ ಗ್ರಾಮದ ಮಸೀದಿಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾಸ್ತಿ ಗ್ರಾಮದ ಏಳು ಮಸೀದಿಗಳ ಮುಖಂಡರು ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್