ಮಾನವಿಯಲ್ಲಿ ಶಿಶಿಕ್ಷು ಮೇಳ
ರಾಯಚೂರು, 16 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿದ್ಯಾರ್ಥಿಗಳಿಗೆ ಕೌಶಲ್ಯ ಅತ್ಯವಶ್ಯಕವಾಗಿದೆ. ಕೌಶಲ್ಯ ಕುರಿತು ಸರ್ಕಾರವು ಮನಗಂಡು ಪ್ರೌಢ ಶಾಲಾ ಹಂತದಲ್ಲಿಯೇ ಎನ್‍ಎಸ್‍ಕ್ಯೂಎಫ್‍ನ್ನು ಪರಿಚಯಿಸಲಾಗಿದ್ದು, ವಿದ್ಯಾರ್ಥಿಗಳು ಸರ್ಕಾರಿ ನೌಕರಿಯನ್ನೇ ಅವಲಂಬಿಸದೇ ಕೌಶಲಗಳನ್ನು ಮೈಗೂಡಿಸಿಕೊಂಡು ಸ್ವಾವಲಂ
ಮಾನವಿಯಲ್ಲಿ ಶಿಶಿಕ್ಷು ಮೇಳ


ಮಾನವಿಯಲ್ಲಿ ಶಿಶಿಕ್ಷು ಮೇಳ


ರಾಯಚೂರು, 16 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿದ್ಯಾರ್ಥಿಗಳಿಗೆ ಕೌಶಲ್ಯ ಅತ್ಯವಶ್ಯಕವಾಗಿದೆ. ಕೌಶಲ್ಯ ಕುರಿತು ಸರ್ಕಾರವು ಮನಗಂಡು ಪ್ರೌಢ ಶಾಲಾ ಹಂತದಲ್ಲಿಯೇ ಎನ್‍ಎಸ್‍ಕ್ಯೂಎಫ್‍ನ್ನು ಪರಿಚಯಿಸಲಾಗಿದ್ದು, ವಿದ್ಯಾರ್ಥಿಗಳು ಸರ್ಕಾರಿ ನೌಕರಿಯನ್ನೇ ಅವಲಂಬಿಸದೇ ಕೌಶಲಗಳನ್ನು ಮೈಗೂಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕೆಂದು ಮಾನವಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ ದೊಡ್ಡಮನಿ ಅವರು ಹೇಳಿದ್ದಾರೆ.

ಇತ್ತೀಚಿಗೆ ಜಿಲ್ಲೆಯ ಮಾನವಿ ಪಟ್ಟಣದ ಬಸವ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ 2025-26ನೇ ಪಿಎಮ್‍ಎನ್‍ಎಎಮ್ ಯೋಜನೆಯಡಿಯಲ್ಲಿ ಶಿಶಿಕ್ಷು ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಬಡ, ಮದ್ಯಮ ವರ್ಗದ ವಿದ್ಯಾರ್ಥಿಗಳು ಐಟಿಐ ನಂತಹ ವೃತ್ತಿ ಶಿಕ್ಷಣದ ಕಡೆ ಆಸಕ್ತಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಅವರ ಆರ್ಥಿಕ ಸ್ಥಿತಿಗತಿಯ ಸುಧಾರಣೆಗೆ ಹಾಗೂ ಉತ್ತಮ ಜೀವನ ನಿರ್ವಹಣೆಗೆ ಅನುಕೂಲಕರವಾಗಿದೆ ಎಂದರು.

ಈ ವೇಳೆ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಸುರೇಶ ಕುಮಾರ ಕುರ್ಡಿ ಅವರು ಮಾತನಾಡಿ, ನಾವು ವಿದ್ಯಾರ್ಥಿಗಳಾಗಿದ್ದಾಗ ಜಿಲ್ಲೆಗೆ ಕೇವಲ ಒಂದೇ ಒಂದು ಸರ್ಕಾರಿ ಐಟಿಐ ಕಾಲೇಜು ಇತ್ತು, ಇಂದು ಸರ್ಕಾರ ಪ್ರತಿ ತಾಲೂಕು ಮತ್ತು ಗ್ರಾಮೀಣ ಭಾಗದಲ್ಲಿಯೂ ಕೂಡ ಸರ್ಕಾರಿ ಐಟಿಐ ಕಾಲೇಜುಗಳನ್ನು ಪ್ರಾರಂಬಿಸುವ ಮೂಲಕ ಗ್ರಾಮೀಣ ಭಾಗದ ಬಡ ಮದ್ಯಮ ವರ್ಗಗಳಿಗೆ ಹಾಗೂ ಎಂಬಿಬಿಎಸ್ ಮತ್ತು ಇಂಜಿನೀಯರಿಂಗ್ ನಂತಹ ಉನ್ನತ ಶಿಕ್ಷಣ ಪಡೆಯಲು ಸಾದ್ಯವಾಗಿದೆ. ವಿದ್ಯಾರ್ಥಿಗಳಿಗೆ ಐಟಿಐ ಜೀವನ ಸಂಜೀವಿನಿಯಾಗಿದೆ ಎಂದರು.

ಶಿಶಿಕ್ಷು ಮೇಳದಲ್ಲಿ ಜೆಎಸ್‍ಡಬ್ಲ್ಯೂ ತೋರಣಗಲ್ಲು, ಹೋಂಡಾ ಕಂಪನಿ ಬೆಂಗಳೂರು, ಇ2ಇ ಕನ್ಸಲ್ಟೆನ್ಸಿ ರಾಯಚೂರು ಹಾಗೂ ಇತರ ವಿವಿಧ ಉದ್ದಿಮೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಐಟಿಐ ದ್ವಿತೀಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಹಾಗೂ ಈಗಾಗಲೇ ಐಟಿಐ ಉತ್ತೀರ್ಣರಾದ ತರಬೇತಿದಾರರು ಮತ್ತು ಪಿಯುಸಿ ಹಾಗೂ ಪದವಿಯಲ್ಲಿ ಉತ್ತೀರ್ಣರಾದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು.

40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ: ಪಿಎಮ್‍ಎನ್‍ಎಎಮ್ ಯೋಜನೆಯಡಿಯಲ್ಲಿ ಶಿಶಿಕ್ಷು ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಮೇಳಕ್ಕೆ ಆಗಮಿಸಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದರು. ಮೇಳದಲ್ಲಿ ಸುಮಾರು 60 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರವನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಮಾನವಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ರುದ್ರಗೌಡ ಮಾಲಿಪಾಟೀಲ್, ಬಸವ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ತಿಪ್ಪಣ್ಣ ಹೊಸಮನಿ, ತಾಲೂಕು ನೌಕರರ ಸಂಘದ ನಿರ್ದೇಶಕರಾದ ಮುಕ್ಕಣ್ಣ .ಕೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿಗಳಾದ ಗಂಗಪ್ಪ, ಶರಣಪ್ಪ ಹಿಪ್ಪಲದಿನ್ನಿ, ನಾಗರಾಜ ಪಿ. ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande